ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಅವರಿಂದು ಭೇಟಿಯಾಗಿದ್ದಾರೆ. ಆಪ್ತರಾದ ನಟ ಧನ್ವೀರ್, ಹೇಮಂತ್, ಸುಶಾಂತ್ ನಾಯ್ಡು (ಸಂಬಂಧಿ) ಕೂಡಾ ಕಾಣಿಸಿಕೊಂಡರು. 29 ನಿಮಿಷಗಳ ಕಾಲ ದರ್ಶನ್ ಅವರೊಂದಿಗೆ ವಿಸಿಟಿಂಗ್ ಕೊಠಡಿಯಲ್ಲಿ ಇವರು ಚರ್ಚೆ ನಡೆಸಿದರು.
ಹೈಸೆಕ್ಯೂರಿಟಿ ಸೆಲ್ನಿಂದ ವಿಸಿಟಿಂಗ್ ರೂಮ್ಗೆ; ದರ್ಶನ್ ಪತ್ನಿ ವಿಜಯಲಕ್ಷ್ಮಿ ಎರಡು ಬ್ಯಾಗ್ ಹಿಡಿದು ಜೈಲಿಗೆ ಭೇಟಿ ಕೊಟ್ಟರು. ಒಂದು ಬ್ಯಾಗ್ನಲ್ಲಿ ಬಟ್ಟೆಗಳಿದ್ದರೆ, ಮತ್ತೊಂದು ಬ್ಯಾಗ್ನಲ್ಲಿ ತಿಂಡಿ ತಿನಿಸುಗಳಿದ್ದವು. ದರ್ಶನ್ ಅವರನ್ನು 4.26ಕ್ಕೆ ಹೈಸೆಕ್ಯೂರಿಟಿ ಸೆಲ್ನಿಂದ ವಿಸಿಟಿಂಗ್ ರೂಮ್ಗೆ ಕರೆತರಲಾಯಿತು.
ಸೆ.12ಕ್ಕೆ ಭೇಟಿಯಾಗಿದ್ದ ಪತ್ನಿ ವಿಜಯಲಕ್ಷ್ಮಿ, ವಕೀಲ: 4.05ಕ್ಕೆ ಜೈಲೊಳಗೆ ತೆರಳಿ ವಿಸಿಟಿಂಗ್ ರೂಮ್ನಲ್ಲಿ ಕಾದು ಕುಳಿತಿದ್ದರು. ನಂತರ, ದರ್ಶನ್ ಆಪ್ತರಾದ ನಟ ಧನ್ವೀರ್ ಮತ್ತು ಹೇಮಂತ್ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಬೇಲ್ ವಿಷಯದ ಕುರಿತು ಚರ್ಚಿಸಿದ್ದು, ಈ ವಾರದಲ್ಲೇ ಬೇಲ್ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಇದಕ್ಕೂ ಮುನ್ನ ಸೆ.12ಕ್ಕೆ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಮತ್ತು ಅವರ ವಕೀಲ ಜೈಲಿಗೆ ಬಂದಿದ್ದರು.
ನಿಯಮ ಪಾಲನೆ ಮಾಡಿದ ಜೈಲು ಅಧೀಕ್ಷಕರು: 4.26ಕ್ಕೆ ವಿಸಿಟಿಂಗ್ ರೂಮ್ ಒಳಗೆ ಹೋದ ದರ್ಶನ್ 4.55ಕ್ಕೆ ಹೈ-ಸೆಕ್ಯೂರಿಟಿ ಸೆಲ್ಗೆ ವಾಪಸಾದರು. 29 ನಿಮಿಷಗಳ ಕಾಲ ಪತ್ನಿ ಮತ್ತು ಸ್ನೇಹಿತರೊಂದಿಗೆ ಮಾತುಕತೆ ನಡೆಸಿದರು. ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಬಗ್ಗೆ ದರ್ಶನ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ವಕೀಲರೊಂದಿಗೆ ಚರ್ಚಿಸಿರುವ ವಿಷಯವನ್ನೂ ದರ್ಶನ್ ಮುಂದೆ ಪ್ರಸ್ತಾಪ ಮಾಡಲಾಗಿದೆ.
ಸಂಜೆ 4.05ಕ್ಕೆ ಜೈಲ್ ಒಳಗೆ ಹೋಗಿದ್ದ ವಿಜಯಲಕ್ಷ್ಮಿ ಸುಮಾರು 1 ಗಂಟೆ ಅಲ್ಲೇ ಇದ್ದರು. 5.09ಕ್ಕೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಈ ಸಮಯದಲ್ಲಿ, ಒಟ್ಟು 29 ನಿಮಿಷ ದರ್ಶನ್ ಜೊತೆ ಮಾತನಾಡಿದ್ದಾರೆ. ದರ್ಶನ್ ಭೇಟಿ ನಂತರ ನ್ಯಾಯಾಲಯ ಸೂಚನೆಗಳ ಬಗ್ಗೆ ಜೈಲು ಅಧಿಕಾರಿಗಳೊಂದಿಗೆ ಮಾತನಾಡಿದರು.
ದರ್ಶನ್ ಆಪ್ತರಿಗೆ ಭೇಟಿಗೆ ಅವಕಾಶ ಕೊಡುವಂತೆ ನ್ಯಾಯಾಲಯ ಸೂಚಿಸಿದೆ. ಭೇಟಿಗಾಗಿ, ದರ್ಶನ್ ಪರ ವಕೀಲರು ಬೆಂಗಳೂರು ನ್ಯಾಯಾಲಯದಿಂದ ಅನುಮತಿ ಪಡೆದಿದ್ದಾರೆ. ಈವರೆಗೆ ಕೇವಲ ಸಂಬಂಧಿಗಳಿಗೆ ಮಾತ್ರ ಭೇಟಿಗೆ ಅವಕಾಶ ನೀಡಲಾಗಿತ್ತು. ನ್ಯಾಯಾಲಯದ ಆದೇಶ ಹಿನ್ನೆಲೆ, ಜೈಲು ಅಧಿಕಾರಿಗಳೀಗ ಆಪ್ತರು, ಸ್ನೇಹಿತರಿಗೂ ಭೇಟಿಗೆ ಅವಕಾಶ ಕೊಡುತ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ - Darshan Judicial Custody Extended
ಇನ್ನೂ ಈ ಪ್ರಕರಣದ ಆರೋಪ ಹೊತ್ತಿರುವವರ ಸೆರೆಮನೆವಾಸ ಮುಂದುವರೆದಿದೆ. ಇಂದು 24ನೇ ಎಸಿಎಂಎಂ ನ್ಯಾಯಾಲಯವು ನಟ ದರ್ಶನ್ ಸೇರಿ ಒಟ್ಟು 17 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಹಿಂದಿನ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆ ಆರೋಪಿಗಳೆಲ್ಲರನ್ನೂ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು.
ಇದನ್ನೂ ಓದಿ: ಕನ್ನಡ್ ಅಲ್ಲ ಕನ್ನಡ: ಮತ್ತೆ ಸಾಬೀತಾಯ್ತು ಕಿಚ್ಚನ ಭಾಷಾಪ್ರೇಮ; ಸುದೀಪ್ ವಿಡಿಯೋ ವೈರಲ್ - Sudeep