ETV Bharat / entertainment

ರಿಲೀಸ್​ಗೆ ರೆಡಿ ಗ್ರೇ ಗೇಮ್ಸ್‌: ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರೆದುರು ಬರಲಿದ್ದಾರೆ ವಿಜಯ್ ರಾಘವೇಂದ್ರ - Vijay Raghavendra - VIJAY RAGHAVENDRA

ಮೇ. 10ರಂದು ರಾಜ್ಯಾದ್ಯಂತ ವಿಜಯ್ ರಾಘವೇಂದ್ರ ಅಭಿನಯದ ಗ್ರೇ ಗೇಮ್ಸ್‌ ತೆರೆಗಪ್ಪಳಿಸಲಿದೆ.

Grey Games
ಗ್ರೇ ಗೇಮ್ಸ್‌
author img

By ETV Bharat Karnataka Team

Published : Apr 24, 2024, 4:39 PM IST

ಗಂಗಾಧರ್‌ ಸಾಲಿಮಠ ನಿರ್ದೇಶನದಲ್ಲಿ ನಿರ್ಮಾಣವಾಗಿರುವ 'ಗ್ರೇ ಗೇಮ್ಸ್‌' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಫ್ಯಾಮಿಲಿ ಸಸ್ಪೆನ್ಸ್‌ ಡ್ರಾಮಾ ಶೈಲಿಯ ಈ ಸಿನಿಮಾದಲ್ಲಿ ನಾಯಕನಾಗಿ ವಿಜಯ್‌ ರಾಘವೇಂದ್ರ ನಟಿಸಿದ್ದಾರೆ. ಇಲ್ಲಿ ಚಿಂತನೆಗಳ ಪ್ರಚೋದನೆ ನಡೆಯುತ್ತದೆ. ಸರಿ ತಪ್ಪುಗಳ ಗ್ರಹಿಕೆಗಳಿಗೂ ಸವಾಲೆಸೆಯುತ್ತದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಆನ್‌ಲೈನ್‌ ಗೇಮಿಂಗ್‌ ಪೈಪೋಟಿ ಜತೆಗೆ ಮೆಟಾವರ್ಸ್‌ನ ಸಂಕೀರ್ಣತೆಗಳ ಬೆಸುಗೆ ಗ್ರೇ ಗೇಮ್ಸ್‌ ಸಿನಿಮಾದ ಹೈಲೈಟ್.

ಸೆನ್ಸಾರ್‌ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಪಡೆದಿರುವ ಸಿನಿಮಾ ಸದ್ಯ ಪ್ರಚಾರಕ್ಕಿಳಿದಿದೆ. ವಿಜಯ್‌ ರಾಘವೇಂದ್ರ ಜತೆಗೆ ಭಾವನಾ ರಾವ್‌, ಶ್ರುತಿ ಪ್ರಕಾಶ್‌, ಅಪರ್ಣಾ ವಸ್ತ್ರೇಯ, ರವಿ ಭಟ್‌ ಮುಖ್ಯಭೂಮಿಕೆಯಲ್ಲಿದ್ದರೆ, ಇನ್ನುಳಿದಂತೆ ಜೈ, ಇಶಿತಾ ಸಿಂಗ್‌, ರಾಮ್‌ ಮಂಜೋನ್ನಾಥ್‌ ಬೆನ್ಸಕಾನ್‌ ಚಾಕೋ ಚಿತ್ರದಲ್ಲಿದ್ದಾರೆ. ಇತ್ತೀಚೆಗೆ ಗೋವಾದಲ್ಲಿ ನಡೆದ 54ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಸಿನಿಮಾ ಪ್ರದರ್ಶನ ಕಂಡಿತ್ತು.

Grey Games
ಗ್ರೇ ಗೇಮ್ಸ್‌

ಆನ್‌ಲೈನ್‌ ಗೇಮಿಂಗ್‌ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಸೈಕಾಲಜಿಸ್ಟ್‌ ಆಗಿ ವಿಜಯ್‌ ರಾಘವೇಂದ್ರ ನಟಿಸಿದರೆ, ಸೈಬರ್‌ ಕ್ರೈಂ ತನಿಖಾಧಿಕಾರಿಯಾಗಿ ಭಾವನಾ ರಾವ್‌ ಕಾಣಿಸಿಕೊಂಡಿದ್ದಾರೆ. ವೃತ್ತಿಪರ ಗೇಮರ್‌ ಆಗಿ ಜೈ, ಚಿತ್ರನಟಿಯಾಗಿ ಶ್ರುತಿ ಪ್ರಕಾಶ್‌ ತಮ್ಮ ಪಾತ್ರ ನಿರ್ವಹಿಸಿದ್ದಾರೆ. ಆನ್‌ಲೈನ್‌ ಗೇಮಿಂಗ್‌ ಜತೆಗೆ ಮಾನಸಿಕ ಆರೋಗ್ಯ, ತಂತ್ರಜ್ಞಾನದ ವಿಚಾರವೂ ಸಿನಿಮಾದಲ್ಲಿರಲಿದೆ. ನೋಡುಗನನ್ನು ಭಾವನಾತ್ಮಕವಾಗಿಯೂ ಯೋಚನೆಗೆ ಇಳಿಸುವ ಶಕ್ತಿ ಈ ಚಿತ್ರಕ್ಕಿದೆ ಎಂಬುದು ಚಿತ್ರತಂಡದ ನಂಬಿಕೆ.

ಈ ಬಗ್ಗೆ ನಿರ್ದೇಶಕ ಗಂಗಾಧರ್‌ ಸಾಲಿಮಠ ಮಾತನಾಡಿ, ಗ್ರೇ ಗೇಮ್ಸ್‌ ವಾಸ್ತವ ಮತ್ತು ವರ್ಚುವಾಲಿಟಿಯ ಈ ಜಗತ್ತಿನಲ್ಲಿ ಸರಿ ಮತ್ತು ತಪ್ಪುಗಳ ನಮ್ಮ ಗ್ರಹಿಕೆಗೆ ಸವಾಲು ಹಾಕುತ್ತವೆ. ಅಸಾಧಾರಣ ಪಾತ್ರವರ್ಗ ಮತ್ತು ತಂಡದ ಜತೆಗೆ, ಸಿನಿಮೀಯ ಅನುಭವವನ್ನು ನೀಡಲು ದಣಿವರಿಯದೇ ಕೆಲಸ ಮಾಡಿದ್ದೇವೆ. ಸಿನಿಮಾ ಖಂಡಿತವಾಗಿಯೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಅಷ್ಟೇ ಇಂಪ್ಯಾಕ್ಟ್‌ ಸಹ ಆಗಲಿದೆ ಎಂದು ತಿಳಿಸಿದರು.

Grey Games
ಗ್ರೇ ಗೇಮ್ಸ್‌ ತಾರೆ

ಇದನ್ನೂ ಓದಿ: ಮಾಲಾಶ್ರೀ ಅಭಿನಯದ 'ಮಾರಕಾಸ್ತ್ರ' ತೆಲುಗಿನಲ್ಲಿ ಬಿಡುಗಡೆಗೆ ರೆಡಿ; ಶ್ರಮಿಕ ವರ್ಗಕ್ಕೆ ಒಂದು ದಿನ ಟಿಕೆಟ್​ ಉಚಿತ - Marakastra

ನಿರ್ಮಾಪಕ ಆನಂದ್‌ ಮುಗದ್‌ ಮಾತನಾಡಿ, ಕರ್ನಾಟಕದಾದ್ಯಂತ ಸಿನಿ ಪ್ರೇಕ್ಷಕರ ಮಡಿಲಿಗೆ ನಮ್ಮ ಚಿತ್ರವನ್ನು ಹಾಕಲು ನಾವು ಉತ್ಸುಕರಾಗಿದ್ದೇವೆ. ತಮ್ಮ ಉತ್ಸಾಹ ಮತ್ತು ಬದ್ಧತೆಯನ್ನು ತೋರಿಸಿದ ನಮ್ಮ ಅದ್ಭುತ ತಂಡದ ಅಚಲ ಸಮರ್ಪಣೆಗೆ ಈ ಸಿನಿಮಾ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಚಿತ್ರಕ್ಕೆ ಸತೀಶ್‌ ಗ್ರಾಮಪುರೋಹಿತ್‌, ಅರವಿಂದ ಜೋಶಿ, ಡೊಳೇಶ್ವರ್ ರಾಜ್‌ ಸುಂಕು ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

Grey Games
ಗ್ರೇ ಗೇಮ್ಸ್‌ ತಾರೆ

ಇದನ್ನೂ ಓದಿ: ’ನಾನು ಡಿಸಿಗೆ ತುಂಬಾ ಕ್ಲೋಸ್’: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಠ ರೀತಿಯ ಚುನಾವಣಾ ಪ್ರಚಾರ - Voting Awareness

ಡೀಸ್ ಫಿಲ್ಮ್ಸ್ (DEES FILMS) ಬ್ಯಾನರ್‌ನಲ್ಲಿ ಗ್ರೇ ಗೇಮ್ಸ್‌ ಸಿನಿಮಾ ನಿರ್ಮಾಣವಾಗಿದೆ. ವರುಣ್‌ ಡಿ.ಕೆ ಛಾಯಾಗ್ರಹಣ, ಜಗದೀಶ್ ಎನ್‌ ಸಂಕಲನ ನಿರ್ವಹಿಸಿದರೆ, ಶ್ರೀಯಾಂಶ ಶ್ರೀರಾಮ್‌, ಡೊಳೇಶ್ವರ್‌ ರಾಜ್‌ ಸುಂಕು, ಅಶ್ವಿನ್‌ ಹೇಮಂತ್‌ ಸಂಗೀತ ನೀಡಿದ್ದಾರೆ. ಕಿರಣ್‌ ಕಾವೇರಪ್ಪ ಅವರ ಸಾಹಿತ್ಯವಿದ್ದು, ಟಗರು ರಾಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಬಸವರಾಜ್‌ ಖೇಡದ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ಸದ್ಯ ಬಹುತೇಕ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡಿರುವ ಚಿತ್ರ ಬಿಡುಗಡೆ ದಿನಾಂಕವನ್ನೂ ಬಹಿರಂಗಪಡಿಸಿದೆ. ಮೇ 10ರಂದು ರಾಜ್ಯಾದ್ಯಂತ ಗ್ರೇ ಗೇಮ್ಸ್‌ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.