ETV Bharat / entertainment

'ಬ್ಯಾಡ್​ ನ್ಯೂಸ್​': ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ವಿಕ್ಕಿ ಕೌಶಲ್ ಸಿನಿಮಾವಿದು​​ - Bad Newz Collection - BAD NEWZ COLLECTION

ಬ್ಯಾಡ್​ ನ್ಯೂಸ್ ತೆರೆಕಂಡ ಮೊದಲ ದಿನ ಸರಿಸುಮಾರು 9 ಕೋಟಿ ರೂಪಾಯಿಗಳನ್ನು ಗಳಿಸಿ ಗಮನ ಸೆಳೆದಿದೆ.

Actor Vicky Kaushal
ನಟ ವಿಕ್ಕಿ ಕೌಶಲ್ (ANI)
author img

By ETV Bharat Karnataka Team

Published : Jul 20, 2024, 4:13 PM IST

ಬಾಲಿವುಡ್​​ನ ಬೇಡಿಕೆಯ ಮತ್ತು ಪ್ರತಿಭಾನ್ವಿತ ನಟ ವಿಕ್ಕಿ ಕೌಶಲ್​​ ಮುಖ್ಯಭೂಮಿಕೆಯ 'ಬ್ಯಾಡ್​ ನ್ಯೂಸ್​' ಕಳೆದ ದಿನ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಆನಂದ್ ತಿವಾರಿ ನಿರ್ದೇಶನದ ಈ ಚಿತ್ರ ಬಹುತೇಕ ಮೆಚ್ಚುಗೆ ಸ್ವೀಕರಿಸಿದ್ದು, ಬಾಕ್ಸ್ ಆಫೀಸ್ ಪ್ರಯಾಣ ಉತ್ತಮವಾಗಿದೆ.

ಬ್ಯಾಡ್​ ನ್ಯೂಸ್ ತೆರೆಕಂಡ ಮೊದಲ ದಿನ ಸರಿಸುಮಾರು 9 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆನಂದ್ ತಿವಾರಿ, ಹಿರೂ ಯಶ್ ಜೋಹರ್, ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಅಮೃತಪಾಲ್ ಸಿಂಗ್ ಬಿಂದ್ರಾ ಅವರ ಸಹ - ನಿರ್ಮಾಣವಿರುವ ಈ ಚಿತ್ರದ ವಾರಾಂತ್ಯದ ಗಳಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಪಕ-ನಿರ್ದೇಶಕ ಕರಣ್​ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್, ಸಿನಿಮಾದ ಮೊದಲ ದಿನದ ಕಲೆಕ್ಷನ್​ ಮಾಹಿತಿಯನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿದೆ. "ಅಭಿನಂದನೆಗಳು, ಮೊದಲ ದಿನವೇ ಬ್ಯಾಡ್​ ನ್ಯೂಸ್​ ಎಲ್ಲರ ಮನ ಗೆದ್ದಿದೆ" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಜೊತೆಗೆ, 8.62 ಕೋಟಿ ರೂ. ಕಲೆಕ್ಷನ್ (Net collection)​​ ಆಗಿದೆ ಎಂದು ಚಲನಚಿತ್ರ ನಿರ್ಮಾಣ ಸಂಸ್ಥೆ ಘೋಷಿಸಿದೆ.

ಚಿತ್ರವೊಂದರ ಗಳಿಕೆಯ ಈ ಅಂಕಿ - ಅಂಶ ಗಮನಾರ್ಹ. ಇತ್ತೀಚೆಗೆ, ಆರಂಭಿಕ ದಿನದಂದು ಈ ಅಂಕಿ - ಅಂಶವನ್ನು ಮೀರಿದ ಕೊನೆಯ ಬಾಲಿವುಡ್​​ ಚಿತ್ರವೆಂದರೆ 'ಬಡೇ ಮಿಯಾನ್ ಚೋಟೆ ಮಿಯಾನ್'. ಈ ಸಿನಿಮಾ 16 ಕೋಟಿ ರೂ. ಕಲೆಕ್ಷನ್​​ ಮಾಡಿತ್ತು. ಅದಾಗ್ಯೂ ಶೀಘ್ರದಲ್ಲೇ ಕಲೆಕ್ಷನ್​​ ಕುಸಿಯಿತು.

ಬ್ಯಾಡ್ ನ್ಯೂಸ್ ತನ್ನ ಕಲೆಕ್ಷನ್​​ನೊಂದಿಗೆ ನಾಯಕ ನಟ ವಿಕ್ಕಿ ಕೌಶಲ್ ಅವರ ಹಿಂದಿನ ಚಿತ್ರಗಳ ಮೊದಲ ದಿನದ ವ್ಯವಹಾರದ ದಾಖಲೆಗಳನ್ನು ಪುಡಿಗಟ್ಟಿದೆ. 'ಬ್ಯಾಡ್ ನ್ಯೂಸ್' ಈವರೆಗೆ, ತೆರೆಕಂಡ ದಿನ ಅತಿ ಹೆಚ್ಚು ಕಲೆಕ್ಷನ್​​ ಮಾಡಿದ ವಿಕ್ಕಿ ಕೌಶಲ್​ ಅವರ ಮೊದಲ ಚಿತ್ರವಾಗಿದೆ.

ತೆರೆಕಂಡ ದಿನ ಅತಿಹೆಚ್ಚು ಕಲೆಕ್ಷನ್​ ಮಾಡಿದ ವಿಕ್ಕಿ ಕೌಶಲ್ ಅವರ ಸಿನಿಮಾಗಳ ಪಟ್ಟಿ ಈ ಕೆಳಗಿನಂತಿದೆ.

  • ಬ್ಯಾಡ್ ನ್ಯೂಸ್ (2024) - 8.62 ಕೋಟಿ ರೂ.
  • ಉರಿ: ದಿ ಸರ್ಜಿಕಲ್ ಸ್ಟ್ರೈಕ್ (2019) - 8.25 ಕೋಟಿ ರೂ.
  • ಸ್ಯಾಮ್ ಬಹದ್ದೂರ್ (2023) - 6.25 ಕೋಟಿ ರೂ.
  • ಜರಾ ಹಟ್ಕೆ ಜರಾ ಬಚ್ಕೆ (2023) - 5.49 ಕೋಟಿ ರೂ.
  • ಭೂತ್: ದಿ ಹಂಟೆಡ್ ಶಿಪ್ (2020) - 5.10 ಕೋಟಿ ರೂ.
  • ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ (2023) - 1.40 ಕೋಟಿ ರೂ.

ಇದನ್ನೂ ಓದಿ: ಸುಶ್ಮಿತಾ ಸೇನ್ ಜೊತೆ ರೂಮರ್​ ಬಾಯ್​ಫ್ರೆಂಡ್​​ ರೋಹ್ಮನ್: ವಿಡಿಯೋ ವೈರಲ್​ - Sushmita Sen Rohman Shawl

ವಿಕ್ಕಿ ಕೌಶಲ್ ಜೊತೆ ತೃಪ್ತಿ ದಿಮ್ರಿ, ಆ್ಯಮಿ ವಿರ್ಕ್ ಮತ್ತು ನೇಹಾ ಧೂಪಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನನ್ಯಾ ಪಾಂಡೆ ಮತ್ತು ನೇಹಾ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.