ETV Bharat / entertainment

ಬೇಬಿ ಶವರ್​ ಸಂಭ್ರಮದಲ್ಲಿ ನತಾಶಾ - ವರುಣ್​​ ಧವನ್​; ಇಲ್ಲಿವೆ ಫೋಟೋಸ್​​ - Natasha Dalal Baby Shower

ನತಾಶಾ ಬೇಬಿ ಶವರ್​ಗಾಗಿ ಆಕೆಯ ಓರಗಿತ್ತಿ ಆಗಿರುವ ವರುಣ್​ ಧವನ್​ ಅತ್ತಿಗೆ ಕೇಕ್​ ಅನ್ನು ಖುದ್ದು ತಯಾರಿಸಿದ್ದು ವಿಶೇಷವಾಗಿದೆ.

author img

By ETV Bharat Karnataka Team

Published : Apr 22, 2024, 1:19 PM IST

varun-dhawan-natasha-dalal-baby-shower-this-sweet-gesture-by-actors-sister-in-law-steals-limelight

ಹೈದರಾಬಾದ್​: ನಟ ವರುಣ್​ ಧವನ್​ ಮತ್ತು ನತಾಶಾ ದಲಾಲ್​ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಏಪ್ರಿಲ್​ 21ರಂದು ಈ ಜೋಡಿ ತಮ್ಮ ಆಪ್ತರ ಸಮ್ಮುಖದಲ್ಲಿ ಬೇಬಿ ಶವರ್​ (ಸಿಮಾಂತ) ಸಂಭ್ರಮವನ್ನು ಆಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಶಾಹೀದ್​ ಕಪೂರ್​ ಮಡದಿ ಮೀರಾ ರಜಪೂತ್​ ಕೂಡ ಆಗಮಿಸಿದ್ದು, ಕುಟುಂಬಕ್ಕೆ ಶುಭ ಕೋರಿದ್ದಾರೆ. ಇವರ ಹೊರತಾಗಿ ಸ್ನೇಹಿತರು ಮತ್ತು ಕುಟುಂಬದ ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಈ ಫೋಟೋಗಳು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ವರುಣ್​ ಧವನ್​ ಅಣ್ಣನ ಹೆಂಡತಿ ಜಾನ್ವಿ ಧವನ್ ತಯಾರಿಸಿದ ಕೇಕ್​

ವರುಣ್​ ಧವನ್​ ಅಣ್ಣನ ಹೆಂಡತಿ ಜಾನ್ವಿ ಧವನ್​, ಕಾರ್ಯಕ್ರಮದಲ್ಲಿ ಎರಡು ಹಂತದ ಅಂದದ ಕೇಕ್​ ಅನ್ನು ತಾವೇ ಸ್ವತಃ ತಯಾರಿಸಿದ್ದು, ಅದನ್ನು ಅಚ್ಚುಕಟ್ಟಾಗಿ ಸಿಂಗರಿಸಿದ್ದಾರೆ. ಬೇಬಿ ಶವರ್​​ಗಾಗಿ ವಿಶೇಷವಾಗಿ ಈ ಕೇಕ್​ ಅನ್ನು ತಯಾರಿಸಲಾಗಿದೆ. ಅವುಗಳನ್ನು ಹೂವು ಮತ್ತು ಟೆಡ್ಡಿ ಬೇರ್​ನ ಆಕೃತಿಗಳಿಂದ ಸಿಂಗರಿಸಿದ್ದಾರೆ. ಕೇಕ್​​ನ ಮೇಲ್ಭಾಗದಲ್ಲಿ ಬಿಳಿ ಟೆಡ್ಡಿಬೇರ್​​ ಗುಲಾಬಿ ಬಣ್ಣದ ರೋಸ್​ ಅನ್ನು ಕೈಯಲ್ಲಿ ಇಡುವ ಕೇಕ್​ ಎಲ್ಲರ ಕಣ್ಮನ ಸೆಳೆದಿದೆ.

ಈ ಚಿತ್ರವನ್ನು ಜಾನ್ವಿ ಹೊರತಾಗಿ ನಟಿ ಶಾಹೀದ್​ ಕಪೂರ್​ ಹೆಂಡತಿ ಮೀರಾ ರಜಪೂತ್​ ಕೂಡ ತಮ್ಮ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅಡಿ ಬರಹ ಬರೆದಿರುವ ಮೀರಾ, ಜಾನ್ವಿ ಕಪೂರ್​ ಬೇಕಿಂಗ್​ ಅದ್ಬುತ, ವಿಡಿ ಮತ್ತು ನಾತಾಶಾಗೆ ಶುಭಾಶಯ ಎಂದು ತಿಳಿಸಿದ್ದಾರೆ. ಇದರ ಹೊರತಾಗಿ ನಟ ವರುಣ್​ ಧವನ್​ ಅಭಿಮಾನಿಗಳು ಕೂಡ ಹಲವು ಪುಟದಲ್ಲಿ ಈ ಕಾರ್ಯಕ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಖುಷಿಯ ಸಂಭ್ರಮದ ಕ್ಷಣಗಳ ಫೋಟೋ ವೈರಲ್​ ಆಗಿದೆ.

ಚಿತ್ರದಲ್ಲಿ ನತಾಶಾ ಬಿಳಿ ಹೂವಿನ ಆಫ್​ ಶೋಲ್ಡರ್​ ಉಡುಪಿನಲ್ಲಿ ಕಂಗೊಳಿಸಿದ್ದಾರೆ. ಅವರ ಪಕ್ಕದಲ್ಲಿ ನಟ ವರುಣ್​ ಮ್ಯಾಚಿಂಗ್​ ರೀತಿಯ ಬಿಳಿ ಬಣ್ಣದ ಟೀಶರ್ಟ್​​ ಜೊತೆಗೆ ನೀಲಿ ಬಣ್ಣದ ಹೂವಿನ ಶರ್ಟ್​ ಧರಿಸಿದ್ದಾರೆ. ಶುಭಾಶಯಗಳ ಜೊತೆಗೆ ಈ ಜೋಡಿ ಎರಡು ಹಂತದ ಕೇಕ್​ ಕತ್ತರಿಸುತ್ತಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದಾಗಿದೆ.

ಮತ್ತೊಂದು ವಿಡಿಯೋದಲ್ಲಿ, ನಟನ ಸಿಬ್ಬಂದಿ ಎರಡು ದೊಡ್ಡ ಬಾಕ್ಸ್​​ಗಳಲ್ಲಿ ಉಡುಗೊರೆಗಳನ್ನು ಮನೆ ಮುಂದೆ ಪ್ಯಾಪರಾಜಿಗಳಿಗೂ ನೀಡಿದ್ದಾರೆ. ಪ್ಯಾಪಾರಾಜಿಗಳಿಗೆ ಉಡುಗೊರೆ ನೀಡಿರುವ ಅವರ ಕ್ರಮಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

ಫೆಬ್ರವರಿಯಲ್ಲಿ ಈ ಜೋಡಿ ತಾವು ಪೋಷಕರಾಗುತ್ತಿರುವ ಕುರಿತು ವಿಷಯವನ್ನು ಮೊದಲ ಬಾರಿ ಬಹಿರಂಗ ಪಡಿಸಿದರು. ನತಾಶಾ ಬೇಬಿ ಬೆಲ್ಲಿಗೆ ಮುತ್ತಿಕ್ಕುತ್ತಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಈ ವಿಷಯ ಹಂಚಿಕೊಂಡಿದ್ದರು. ವರುಣ್​ ಧವನ್​ ತಮ್ಮ ದೀರ್ಘಕಾಲದ ಗೆಳತಿ ನತಾಶರನ್ನು 2021ರ ಜನವರಿ 24ರಂದು ಆಲಿಬಾಗ್​ನಲ್ಲಿ ಮದುವೆಯಾಗಿದ್ದರು.

ಇದನ್ನೂ ಓದಿ: ವರುಣ್ ಧವನ್-ಕೀರ್ತಿ ಸುರೇಶ್​​ ಸ್ಕ್ರೀನ್​ ಶೇರ್; ಅಟ್ಲೀ ಸಿನಿಮಾ ಮುಹೂರ್ತದ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.