ETV Bharat / entertainment

ಬಹುನಿರೀಕ್ಷಿತ ಮಿರ್ಜಾಪುರ್ ಸೀಸನ್‌ 3 ವೆಬ್​ ಸಿರೀಸ್​ ಟ್ರೇಲರ್ ಬಿಡುಗಡೆ - Mirzapur - MIRZAPUR

ಅಮೆಜಾನ್ ಪ್ರೈಮ್ ವಿಡಿಯೋದ ಜನಪ್ರಿಯ ವೆಬ್ ಸರಣಿ 'ಮಿರ್ಜಾಪುರ್' ಮುಂದುವರೆದ ಭಾಗ ಶೀಘ್ರದಲ್ಲೇ ತೆರೆ ಕಾಣಲಿದೆ. ಎರಡು ಕಂತುಗಳಲ್ಲಿ ತೆರೆ ಕಂಡಿರುವ 'ಮಿರ್ಜಾಪುರ್' OTTಯಲ್ಲಿ ಹೊಸ ಅಲೆಯನ್ನೇ ಎಬ್ಬಿಸಿರುವ ವೆಬ್ ಸರಣಿಗಳಲ್ಲಿ ಒಂದು. ಇದೀಗ ಮೂರನೇ ಕಂತಿನಲ್ಲಿ ತೆರೆ ಕಾಣಲಿದ್ದು, ಸಿನಿ ಪ್ರೇಮಿಗಳ ಕೌತುಕ ಹೆಚ್ಚಿಸಿದೆ. ಸದ್ಯ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದ್ದು, ಜಾಲತಾಣಗಳಲ್ಲಿ ಜಾಗ ಪಡೆದಿದೆ. ಜು. 5, ರಂದು ಬಿಡುಗಡೆಯಾಗಲಿದ್ದು, ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Mirzapur 3 Trailer Out
ಮಿರ್ಜಾಪುರ್ ಸೀಸನ್‌ 3 (YouTube/Prime Video India)
author img

By ANI

Published : Jun 21, 2024, 1:51 PM IST

ಮುಂಬೈ (ಮಹಾರಾಷ್ಟ್ರ): ಬಹುನಿರೀಕ್ಷಿತ ಮಿರ್ಜಾಪುರ್ ಸೀಸನ್‌ 3 ವೆಬ್​ ಸಿರೀಸ್​ನ ಟ್ರೇಲರ್ ಬಿಡುಗಡೆಯಾಗಿದೆ. ಜುಲೈ 5 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್​ ಆಗಲಿದ್ದು, ಸದ್ಯ ಬಿಡುಗಡೆಯಾದ ಟ್ರೇಲರ್ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಈಗಾಗಲೇ OTT ಯಲ್ಲಿ ಬಿಡುಗಡೆಯಾಗಿರುವ ಒಂದು ಮತ್ತು ಎರಡು ಸೀಸನ್‌ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕ್ರೈಮ್ ಮತ್ತು ಥ್ರಿಲ್ಲರ್ ಕಥಾಹಂದರ ಹಿನ್ನೆಲೆಯುಳ್ಳ ಮೂರನೇ ಭಾಗವೂ ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆಯಾದ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದ್ದು, ಅಭಿಮಾನಿಗಳ ಕಾತರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಗುಂಡಿನ ಮೊರತದಿಂದ ಆರಂಭಗೊಳ್ಳುವ ಸುಮಾರು ಎರಡೂವರೆ ನಿಮಿಷದ ಟ್ರೇಲರ್ ಸಿನಿ ಪ್ರೇಮಿಗಳನ್ನು ಕೇಂದ್ರೀಕರಿಸದೇ ಇರದು.​

ಆ್ಯಕ್ಷನ್-ಪ್ಯಾಕ್ಡ್ ಟ್ರೇಲರ್​ನಲ್ಲಿ, ಗುಡ್ಡು ಪಂಡಿತ್ (ಅಲಿ ಫಜಲ್ ನಿರ್ವಹಿಸಿದ) ಪೂರ್ವಾಂಚಲ್ ಮೇಲೆ ತನ್ನ ಹಿಡಿತ ಸ್ಥಾಪಿಸಲು ಯಾವೆಲ್ಲ ಹರಸಾಹಸಕ್ಕೆ ಕೈ ಹಾಕುತ್ತಾನೆ ಅನ್ನೋದನ್ನು ಕಾಣಬಹುದು. ಅಧಿಕಾರ, ಹಣ, ಹೆಣ್ಣಿನ ಮೇಲಿನ ವ್ಯಾಮೋಹಕ್ಕಾಗಿ ಯಾರು ಯಾವ ಹಂತಕ್ಕೂ ಬೇಕಾದರೂ ಹೋಗಬಹುದು ಎಂಬುದನ್ನು ಮೂರನೇ ವೆಬ್​ ಸಿರೀಜ್​ನ ಟ್ರೇಲರ್​ನಲ್ಲಿ ತುಸು ಹೆಚ್ಚಾಗಿಯೇ ತೋರಿಸಲಾಗಿದೆ. ಪಂಕಜ್ ತ್ರಿಪಾಠಿ, ಅಲಿ ಫಜಲ್, ಶ್ವೇತಾ ತ್ರಿಪಾಠಿ ಶರ್ಮಾ, ರಸಿಕಾ ದುಗಲ್, ವಿಜಯ್ ವರ್ಮಾ, ಇಶಾ ತಲ್ವಾರ್, ಅಂಜುಮ್ ಶರ್ಮಾ ಮತ್ತು ಪ್ರಿಯಾಂಶು ಪೈನ್ಯುಲಿ ಟ್ರೇಲರ್‌ನಲ್ಲಿ ತಮ್ಮದೇ ನಟನೆಯಿಂದ ಗಮನ ಸೆಳೆದಿದ್ದಾರೆ. ಮಾಫಿಯಾದಲ್ಲಿ ಹೆಸರು ಮಾಡಲು ಕಾಲೀನ್ ಭಯ್ಯಾ (ಪಂಕಜ್ ತ್ರಿಪಾಠಿ) ಮತ್ತು ಗುಡ್ಡು ಪಂಡಿತ್ (ಅಲಿ ಫಜಲ್) ಅವರ ಮಧ್ಯೆ ನಡೆಯುವ ಹೋರಾಟದ ತುಣುಕುಗಳೇ ಈ ಟ್ರೇಲರ್.

ಮೊದಲ ಸೀಸನ್‌ ಮತ್ತು ಎರಡನೇ ಸೀಸನ್​ನಲ್ಲಿ ಧುತ್ತೆಂದು ಸಂಭವಿಸುವ ದೃಶ್ಯಗಳು, ಮೂರನೆಯ ಆವೃತ್ತಿಯಲ್ಲೂ ಕಾಣಿಸಿಕೊಳ್ಳಲಿವೆ. ಎಲ್ಲ ಪಾತ್ರಗಳು ಪ್ರೇಕ್ಷಕರನ್ನು ತಮ್ಮ ಆಸನಗಳ ತುದಿಯಲ್ಲಿ ತಂದು ನಿಲ್ಲಿಸುವ ನಿರೀಕ್ಷೆಯಿದೆ. ವೆಬ್​ ಸಿರೀಜ್​​ನಲ್ಲಿ ಬರುವ ಕೆಲವು ಅಚ್ಚರಿಯ ತಿರುವುಗಳು ನಿಮ್ಮನ್ನು ಕಾಡದೇ ಇರದು ಎಂದು ಚಿತ್ರತಂಡ ಹೇಳಿಕೊಂಡಿದೆ.

ಮಿರ್ಜಾಪುರ್ 3 ವೆಬ್​ ಸಿರೀಜ್​ನ ಟ್ರೇಲರ್ ವೀಕ್ಷಿಸಿದರೆ ಹಳೆಯ ದೃಶ್ಯಗಳು ನಿಮ್ಮನ್ನು ಮತ್ತೆ ಕೇಂದ್ರೀಕರಿಸದೇ ಇರದು.​ ಟ್ರೇಲರ್​ನಲ್ಲಿ ಹಾಗೆಯೇ ಬಂದು ಹೀಗೆಯೇ ಹೋಗುವ ಅದ್ಭುತ ಡೈಲಾಗ್‌ ಮತ್ತು ದೃಶ್ಯಗಳು ನಿಮ್ಮನ್ನು ವೆಬ್​ ಸಿರೀಸ್​ ವೀಕ್ಷಿಸಲು ಮತ್ತಷ್ಟು ಪ್ರೇರೇಪಿಸುತ್ತವೆ ಎಂದು ನೆಟ್ಟಿಗರು ವೆಬ್​ ಸಿರೀಸ್​ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಕ್ಸೆಲ್ ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಸಂಸ್ಥೆ ನಿರ್ಮಾಣದ ಈ ಜನಪ್ರಿಯ ವೆಬ್ ಸರಣಿಯನ್ನು ಗುರ್ಮೀತ್ ಸಿಂಗ್ ಮತ್ತು ಆನಂದ್ ಅಯ್ಯರ್ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಅಶ್ವಿನಿ ದತ್ ಪಾದ ಸ್ಪರ್ಶಿಸಿದ ಅಮಿತಾಭ್​​​​: ಬಚ್ಚನ್​​ ಬಗ್ಗೆ ನಿರ್ಮಾಪಕರು ಹೇಳಿದ್ದೇನು? - Aswini Dutt

ETV Bharat Logo

Copyright © 2024 Ushodaya Enterprises Pvt. Ltd., All Rights Reserved.