ಕನ್ನಡದ ಪಾಪ್ಯುಲರ್ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಮೂರನೇ ವಾರದಲ್ಲಿದ್ದ ಸಂದರ್ಭ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಮಹತ್ವದ ಘೋಷಣೆ ಒಂದನ್ನು ಮಾಡಿದ್ದರು. 'ಬಿಗ್ ಬಾಸ್ ಕನ್ನಡ'ಕ್ಕೆ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ತಿಳಿಸಿದ್ದರು. ಅದರಂತೆ ಇಂದು ನಡೆಯೋದು ಕಟ್ಟ ಕಡೆಯ ಕಿಚ್ಚನ ಪಂಚಾಯ್ತಿ ಅಂತಾನೇ ಹೇಳಬಹುದು.
ಸುದೀಪ್ ಸಾರಥ್ಯದಲ್ಲಿ ಮೂಡಿ ಬರುವ ಬಿಗ್ ಬಾಸ್ನ ಶನಿವಾರದ ಸಂಚಿಕೆ ತನ್ನದೇ ಆದ ಜನಪ್ರಿಯತೆ ಹೊಂದಿದೆ. ಕಿಚ್ಚನ ಪಂಚಾಯ್ತಿ ಎಪಿಸೋಡ್ನಲ್ಲಿ ವಾರದ ಸರಿ ತಪ್ಪುಗಳ ಬಗ್ಗೆ ಚರ್ಚೆ ನಡೆಯುತ್ತದೆ. ಸುದೀಪ್ ಅವರ ನಿರೂಪಣೆಗೆ ಸಪರೇಟ್ ಫ್ಯಾನ್ ಬೇಸ್ ಇದೆ. ಆದ್ರೆ ಅವರ ನಿರೂಪಣೆಯಲ್ಲಿ ಬರುತ್ತಿರುವ ಕೊನೆಯ ಸೀಸನ್ ಇದಾಗಿರುವುದರಿಂದ ಇಂದು ನಡೆಯೋದು ಕಿಚ್ಚನ ಕಟ್ಟ ಕಡೆಯ ಪಂಚಾಯ್ತಿ ಅಂತಾನೇ ಹೇಳಬಹುದು. ನಿರೂಪಣೆಗೆ ಸುದೀಪ್ ಗುಡ್ ಬೈ ಹೇಳಿರೋದು, ಅಭಿಮಾನಿಗಳಲ್ಲಿ ಬೇಸರವಿದೆ. ಅದಾಗ್ಯೂ ಕಿಚ್ಚ ಈ ನಿರ್ಧಾರ ಬದಲಿಸಿಕೊಳ್ತಾರಾ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ.
ಇದೇ ಜನವರಿ 26ರಂದು ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆಗೆ ಭರದ ಸಿದ್ಧತೆ ಸಾಗಿದ್ದು, ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ. ಯಾರು ಮನೆಯಿಂದ ಹೊರ ನಡೆಯಲಿದ್ದಾರೆ ಅನ್ನೋ ಪ್ರಶ್ನೆ ಕನ್ನಡಿಗರಲ್ಲಿದೆ. 'ಬಿಗ್ ಬಾಸ್ ಕನ್ನಡ 11ರ ಕೊನೆಯ ಪಂಚಾಯ್ತಿ; ಯಾರ ಭವಿಷ್ಯದಲ್ಲಿ ಏನಿದೆ?' ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: 'ಸ್ಟ್ರೆಚರ್ ತನ್ನಿ, ನಾನು ಸೈಫ್ ಅಲಿ ಖಾನ್': ರಕ್ತಸಿಕ್ತಗೊಂಡಿದ್ದ ನಟನನ್ನು ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಹೇಳಿದ್ದಿಷ್ಟು
Thank you all for the great response shown towards #BBK11.
— Kichcha Sudeepa (@KicchaSudeep) October 13, 2024
The TVR (number) speaks in volumes about the love you all have shown towards the show and me.
It's been a great 10+1 years of travel together, and it's time for me to move on with what I need to do. This will be my last… pic.twitter.com/uCV6qch6eS
ಪ್ರೋಮೋದಲ್ಲಿ, ಫಿನಾಲೆಗೆ ಇನ್ನೊಂದೇ ಮೆಟ್ಟಿಲು. ಐದು ಮಂದಿ ಮೇಲೆ ಎಲಿಮಿನೇಷನ್ ತೂಗುಗತ್ತಿ. ಈ ವಾರ ಡಬಲ್ ಎಲಿಮಿನೇಷನ್ ಖಚಿತವಾಗಿ ಇರುತ್ತದೆ. ಎಲ್ಲರ ಭವಿಷ್ಯ ನಿರ್ಧರಿಸಲಿದೆ ಕಿಚ್ಚನ ಪಂಚಾಯ್ತಿ ಎಂಬ ಬಿಗ್ ಬಾಸ್ ಹಿನ್ನೆಲೆ ದನಿ ಬಹಳ ಕುತೂಹಲಕಾರಿಯಾಗಿ ಮೂಡಿ ಬಂದಿದೆ. ರಿಸಲ್ಟ್ ಬಗ್ಗೆ ಏನೂ ತಲೆ ಕೆಡಿಸಿಕೊಳ್ಳೋಕೆ ಆಗಲ್ಲ, ಇಷ್ಟು ದಿನ ಮಾಡಿರೋದೇ ರಿಸಲ್ಟ್ ಎಂದು ಮಂಜು ಅವರು ಮೋಕ್ಷಿತಾ ಬಳಿ ಹೇಳುತ್ತಿರೋದನ್ನು ಕಾಣಬಹುದು.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ಇನ್ನೂ ಸೀಸನ್ 11ರ ಆರಂಭಕ್ಕೂ ಮುನ್ನವೇ ಹಲವು ಸುದ್ದಿಗಳು ಹರಿದಾಡಿದ್ದವು. ನಿರೂಪಣೆ ಜವಾಬ್ದಾರಿಯನ್ನು ಬೇರೆಯವರು ಹೊತ್ತುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಾಗ್ಯೂ, 11ನೇ ಸೀಸನ್ ಅನ್ನು ಸುದೀಪ್ ಅವರು ನಡೆಸಿಕೊಟ್ಟರು. ಆದ್ರೆ ಅಕ್ಟೋಬರ್ ಎರಡನೇ ವಾರ ಬಿಗ್ ಬಾಸ್ ನಿರೂಪಣೆಯಿಂದ ದೂರ ಸರಿಯುವುದಾಗಿ ಸುದೀಪ್ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆ ಮುಂದಿನ ನಿರೂಪಕ ಯಾರು ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ.