ETV Bharat / entertainment

ಕೆಲವೇ ಕ್ಷಣಗಳಲ್ಲಿ ಶಿವಣ್ಣನಿಂದ ಬಿಗ್​​ ಅನೌನ್ಸ್​ಮೆಂಟ್​: ಅಭಿಮಾನಿಗಳಲ್ಲಿ ಕುತೂಹಲ - Shiva Rajkumar

author img

By ETV Bharat Karnataka Team

Published : Aug 26, 2024, 1:17 PM IST

Updated : Aug 26, 2024, 1:38 PM IST

ಹ್ಯಾಟ್ರಿಕ್​​ ಹೀರೋ ಶಿವರಾಜ್​ಕುಮಾರ್​ ಸರಣಿ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಮುಂದಿನ ಬಹುನಿರೀಕ್ಷಿತ ಚಿತ್ರ 'ಭೈರತಿ ರಣಗಲ್​​​'. ನರ್ತನ್ ನಿರ್ದೇಶನದ ಚಿತ್ರದ ಕಡೆಯಿಂದ ಇನ್ನೇನು ಕೆಲವೇ ಕ್ಷಣಗಳಲ್ಲಿ ದೊಡ್ಡ ಘೋಷಣೆ ಆಗಲಿದೆ.

Bhairathi Ranagal look
'ಭೈರತಿ ರಣಗಲ್' ನೋಟ (ETV Bharat)

ಕರುನಾಡ ಚಕ್ರವರ್ತಿ ಜನಪ್ರಿಯತೆಯ ಶಿವರಾಜ್​ಕುಮಾರ್​ ಸರಣಿ ಸಿನಿಮಾಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ನಟನ ಕೈಯಲ್ಲಿ ಮೂರ್ನಾಲ್ಕು ಬಹುನಿರೀಕ್ಷಿತ ಪ್ರೊಜೆಕ್ಟ್​ಗಳಿದ್ದು, ಮುಂಬರುವ ಚಿತ್ರಗಳು ಹೇಗಿರಬಹುದು ಎಂಬ ಕುತೂಹಲ ಸಹಜವಾಗಿ ಪ್ರೇಕ್ಷಕರಲ್ಲಿ ಮೂಡಿದೆ. ನಿರೀಕ್ಷೆಗಳು ಹೆಚ್ಚುತ್ತಿದ್ದು, 'ಭೈರತಿ ರಣಗಲ್​​​' ಬಿಡುಗಡೆ ದಿನಾಂಕ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೊರ ಬೀಳಲಿದೆ.

ಚಿತ್ರತಂಡದ ಕಡೆಯಿಂದ ಪೋಸ್ಟರ್​ ಒಂದು ಅನಾವರಣಗೊಂಡಿದೆ. ಅದರಲ್ಲಿ ಬಿಗ್ಗೆಸ್ಟ್​ ರಿಲೀಸ್​​ ಡೇಟ್ ಅನೌನ್ಸ್​​​ಮೆಂಟ್​ ಎಂದು ಬರೆಯಲಾಗಿದೆ. ಕ್ಯಾಪ್ಷನ್​​​​ನಲ್ಲಿ, ''ಬಿಗ್​​ ನ್ಯೂಸ್ ಅಲರ್ಟ್​​​! ದೊಡ್ಡ ಸುದ್ದಿ ಬಹಿರಂಗಪಡಿಸುವ ಸಮಯ ಬಂದಿದೆ. ಸಂಪರ್ಕದಲ್ಲಿರಿ, ಏಕೆಂದರೆ ಇದು ಮಹಾಕಾವ್ಯವಾಗಲಿದೆ! ಆಗಸ್ಟ್ 26, ಸೋಮವಾರ, ಸಮಯ - 3:30, ಸ್ಥಳ - ಯಲಹಂಕ ಗ್ಯಾಲೇರಿಯಾ ಮಾಲ್'' ಎಂದು ಬರೆಯಲಾಗಿದೆ. ಈ ಪ್ರಕಾರ, ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ಮಫ್ತಿ ನಿರ್ದೇಶಕ ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಚಿತ್ರದಲ್ಲಿ ಶಿವಣ್ಣ ಬಹಳ ಕುತೂಹಲಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ. ಶೀರ್ಷಿಕೆಯಿಂದಲೇ ಕನ್ನಡ ಮಾತ್ರವಲ್ಲದೇ ದಕ್ಷಿಣ ಚಿತ್ರರಂಗದಲ್ಲಿ ಕುತೂಹಲ ಹುಟ್ಟುಹಾಕಿರುವ ಸಿನಿಮಾವಿದು. ಅದರಲ್ಲೂ ನಟ ಶಿವರಾಜ್​​​ಕುಮಾರ್​​ ಪಾತ್ರದ ಸುತ್ತಲಿನ ಕುತೂಹಲ ದೊಡ್ಡ ಮಟ್ಟದಲ್ಲಿದೆ. ಶೀರ್ಷಿಕೆ, ಪೋಸ್ಟರ್​​​ನಿಂದಲೇ ಸಖತ್​ ಸದ್ದು ಮಾಡಿರುವ ಸಿನಿಮಾದ ಹಾಡೊಂದು ಇತ್ತೀಚೆಗೆ ಅನಾವರಣಗೊಂಡಿತ್ತು.

ನರ್ತನ್ ಹಾಗೂ ಶಿವಣ್ಣ ಕಾಂಬಿನೇಶನ್​​ನಲ್ಲಿ 2017ರಲ್ಲಿ ಮೂಡಿಬಂದಿದ್ದ ಮಫ್ತಿ ಚಿತ್ರದ ಪ್ರೀಕ್ವೆಲ್ 'ಭೈರತಿ ರಣಗಲ್'. ಗೀತಾ ಶಿವರಾಜಕುಮಾರ್ ಅವರು ತಮ್ಮ ಗೀತಾ ಪಿಕ್ಚರ್ಸ್ ಅಡಿ ಬಿಗ್​​ ಬಜೆಟ್​ನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಶಿವರಾಜ್​​​​ಕುಮಾರ್​​ ಮಗಳ ನಿರ್ಮಾಣದ 'ಫೈರ್ ಫ್ಲೈ' ಶೂಟಿಂಗ್​ ಪೂರ್ಣ: ಮನದ ಮಾತು ಹಂಚಿಕೊಂಡ ನಿವೇದಿತಾ - Niveditha Shivarajkumar Fire Fly

ಶಿವರಾಜಕುಮಾರ್​ಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಬಣ್ಣ ಹಚ್ಚಿದ್ದಾರೆ. ನವೀನ್ ಕುಮಾರ್ ಅವರ ಕ್ಯಾಮರಾ ಕೈಚಳಕ ಈ ಚಿತ್ರದಲ್ಲಿದೆ. ಆಕಾಶ್ ಹಿರೇಮಠ ಅವರ ಸಂಕಲನ, ‌ಗುಣ ಅವರ ಕಲಾ ನಿರ್ದೇಶನ ಮತ್ತು ದಿಲೀಪ್ ಸುಬ್ರಹ್ಮಣ್ಯ, ಚೇತನ್ ಡಿಸೋಜ ಸಾಹಸ ನಿರ್ದೇಶನ ಈ ಬಹುನಿರೀಕ್ಷಿತ ಚಿತ್ರಕ್ಕಿದೆ.

ಇದನ್ನೂ ಓದಿ: ಹ್ಯಾಟ್ರಿಕ್ ಹೀರೋ ಅಭಿನಯದ 'ಭೈರತಿ ರಣಗಲ್' ಟೈಟಲ್​ ಟ್ರ್ಯಾಕ್​ಗೆ ಫ್ಯಾನ್ಸ್ ಫಿದಾ - Bhairathi Ranagal Title Song

ಇತ್ತೀಚೆಗಷ್ಟೇ ಶಿವರಾಜ್​​​ಕುಮಾರ್​ ನಟನೆಯ 131ನೇ ಸಿನಿಮಾ ಸೆಟ್ಟೇರಿದೆ. ವರಮಹಾಲಕ್ಷ್ಮಿ ಹಬ್ಬದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು. ಶೂಟಿಂಗ್​ ಸೆಟ್​ಗೆ ರಾಕಿಂಗ್​ ಸ್ಟಾರ್​ ಯಶ್​​ ಭೇಟಿ ನೀಡಿ ಸದ್ದು ಮಾಡಿದ್ದರು. ಸ್ಯಾಂಡಲ್​ವುಡ್​​ ಸೂಪರ್​ ಸ್ಟಾರ್ಸ್​ ಕ್ವಾಲಿಟಿ ಟೈಮ್​ ಸ್ಪೆಂಡ್​ ಮಾಡಿದ್ದು, ಕಳೆದ ವಾರ ಫೋಟೋ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್​​ ಆಗಿದ್ದವು. ತಮಿಳು ಚಿತ್ರವೊಂದನ್ನು ನಿರ್ದೇಶನ ಮಾಡಿರುವ ಕಾರ್ತಿಕ್ ಅದ್ವೈತ್ ಶಿವಣ್ಣನ ಚಿತ್ರದ ಮುಖೇನ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಶಿವಣ್ಣ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

Last Updated : Aug 26, 2024, 1:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.