ETV Bharat / entertainment

ಲೋಕಸಭೆ ಚುನಾವಣೆ: ಮುಂದೂಡಿಕೆಯಾಗುತ್ತಾ ಪ್ರಭಾಸ್ ನಟನೆಯ​ 'ಕಲ್ಕಿ'? - Kalki 2898 AD - KALKI 2898 AD

'ಕಲ್ಕಿ 2898 ಎಡಿ' ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

Kalki 2898 AD
'ಕಲ್ಕಿ 2898 ಎಡಿ'
author img

By ETV Bharat Karnataka Team

Published : Apr 10, 2024, 8:13 PM IST

'ಮಹಾನಟಿ' ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದ ಮುಂಬರುವ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವನ್ನು 2024ರ ಮೇ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಈ ಮೊದಲೇ ಚಿತ್ರತಂಡ ಘೋಷಿಸಿತ್ತು. ಆದಾಗ್ಯೂ, ಸಿನಿಮಾ ಮುಂದೂಡಿಕೆಯಾಗುವ ಸಾಧ್ಯತೆಗಳಿವೆ.

ವರದಿಗಳ ಪ್ರಕಾರ, 'ಕಲ್ಕಿ 2898 ಎಡಿ'ಯ ಬಿಡುಗಡೆ ದಿನಾಂಕವನ್ನು ಜೂನ್ 20ಕ್ಕೆ ಬದಲಾಯಿಸಲು ಚಿತ್ರನಿರ್ಮಾಪಕರು ಯೋಜಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿತ್ರ ಮುಂದೂಡಿಕೆಯಾಗಲಿದೆ ಎಂಬ ಮಾತುಗಳು ಆರಂಭದಲ್ಲಿ ಕೇಳಿಬಂದಿದ್ದವು. ಆದರೆ, ಚಿತ್ರತಂಡವಿನ್ನೂ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರಾದ ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ 'ಕಲ್ಕಿ 2898 AD' ಅನ್ನು ಮೇ 30, 2024ಕ್ಕೆ ಮುಂದೂಡಲಾಗಿದೆ ಎಂದು ಈ ಹಿಂದೆ ವದಂತಿಗಳು ಹಬ್ಬಿದ್ದವು. ಆದರೆ ಚಿತ್ರ ತಯಾರಕರು ನಂತರದ ದಿನಾಂಕದ ಬಗ್ಗೆ ಯೋಚಿಸುತ್ತಿರುವಂತೆ ತೋರುತ್ತಿದೆ. ಹಾಗಾಗಿ, ಜೂನ್ 20ರಂದು ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಚಿತ್ರವು ಬಿಡುಗಡೆ ದಿನಾಂಕದ ಸಲುವಾಗಿ ಕೆಲವು ಸಮಯದಿಂದ ಚರ್ಚೆಯ ವಿಷಯವಾಗಿ ಉಳಿದುಕೊಂಡಿದೆ.

ಇದನ್ನೂ ಓದಿ: ರಜನಿಕಾಂತ್ ಅಭಿನಯದ 'ತಲೈವರ್ 171'ರಲ್ಲಿ ಶಾರುಖ್​ ಖಾನ್? - Thalaivar 171

ETV Bharat Logo

Copyright © 2024 Ushodaya Enterprises Pvt. Ltd., All Rights Reserved.