ETV Bharat / entertainment

ವಿಜಯ್​​ ದೇವರಕೊಂಡ ಜೊತೆಗಿನ ಡೇಟಿಂಗ್​ ವದಂತಿಗೆ ತುಪ್ಪ ಸುರಿದರಾ ರಶ್ಮಿಕಾ? - ರಶ್ಮಿಕಾ ಮಂದಣ್ಣ

ವಿಜಯ್​ ದೇವರಕೊಂಡ ಜೊತೆಗಿನ ಡೇಟಿಂಗ್​ ವದಂತಿಗೀಗ ಸ್ವತಃ ರಶ್ಮಿಕಾ ಮಂದಣ್ಣ ಅವರೇ ಪುಷ್ಠಿ ನೀಡಿದ್ದಾರೆ.

Rashmika Mandanna Vijay Deverakonda,
ರಶ್ಮಿಕಾ ಮಂದಣ್ಣ ವಿಜಯ್​ ದೇವರಕೊಂಡ
author img

By ETV Bharat Karnataka Team

Published : Feb 27, 2024, 2:23 PM IST

ನ್ಯಾಷನಲ್​ ಕ್ರಶ್​ ಖ್ಯಾತಿಯ ರಶ್ಮಿಕಾ ಮಂದಣ್ಣ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರೋ ಅಭಿನೇತ್ರಿ. ಆಗಾಗ್ಗೆ ಅಭಿಮಾನಿಗಳೊಂದಿಗೆ ಸೋಷಿಯಲ್​ ಮೀಡಿಯಾದಲ್ಲಿ ಮಾತುಕತೆ ನಡೆಸುತ್ತಾರೆ. ಫ್ಯಾನ್ಸ್​ಗಾಗಿಯೇ ಒಂದಿಷ್ಟು ಸಮಯ ಮೀಸಲಿಡುತ್ತಾರೆ. ಇದೀಗ ಫ್ಯಾನ್ಸ್ ಕ್ಲಬ್​ ಶೇರ್ ಮಾಡಿರೋ ಪೋಸ್ಟ್​​ಗೆ ನಟಿ ಪ್ರತಿಕ್ರಿಯಿಸಿದ್ದು, ಸೋಷಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

Rashmika Mandanna Vijay Deverakonda,
ಫ್ಯಾನ್ಸ್ ಕ್ಲಬ್​ ಪೋಸ್ಟ್​​ಗೆ ರಶ್ಮಿಕಾ ಕಾಮೆಂಟ್​​

ರಶ್ಮಿಕಾ ಅವರ ಭಾವಿ ಪತಿ ಹೊಂದಿರಬೇಕಾದ ಗುಣಗಳ ಕುರಿತಾದ ಬರಹವನ್ನು ಹೊಂದಿರುವ ಪೋಸ್ಟ್ ಒಂದು ಫ್ಯಾನ್ಸ್​ ಕ್ಷಬ್​​​​​ನಿಂದ ಶೇರ್ ಆಗಿದೆ. ಇದರಲ್ಲಿ "VD"ಗೆ ಹೋಲುವ ಗುಣಗಳಿರಬೇಕು ಎಂದು ಪ್ರಸ್ತಾಪಿಸಿದ್ದಾರೆ. ವಿಡಿ ಎಂದರೆ 'ಅತ್ಯಂತ ಡೇರಿಂಗ್' ಎಂದು ಸಹ ವಿವರಿಸಲಾಗಿದೆ. ಅದಾಗ್ಯೂ, ಸೋಷಿಯಲ್​ ಮೀಡಿಯಾ ಬಳಕೆದಾರರು "ವಿಡಿ" ಎಂದರೆ "ವೆರಿ ಡೇರಿಂಗ್" ಅಲ್ಲ, ಬದಲಾಗಿ ವಿಜಯ್ ದೇವರಕೊಂಡ ಎಂದು ಹೇಳುತ್ತಿದ್ದಾರೆ. ಟಾಲಿವುಡ್​ ಸೂಪರ್​ ಸ್ಟಾರ್ ವಿಜಯ್​​ ದೇವರಕೊಂಡ ''ವಿಡಿ'' ಎಂದು ಜನಪ್ರಿಯರಾಗಿದ್ದಾರೆ. ರಶ್ಮಿಕಾ ಮಂದಣ್ಣ ಜೊತೆಗಿನ ಡೇಟಿಂಗ್​ ವದಂತಿ ನಿಮಗೆ ತಿಳಿದಿರುವ ವಿಚಾರವೇ. ಸದ್ಯ ನಟಿಯ ರಿಯಾಕ್ಷನ್​​ ವದಂತಿಗೆ ತುಪ್ಪ ಸುರಿದಂತಿದೆ.

ರಶ್ಮಿಕಾ ಫ್ಯಾನ್ಸ್ ಕ್ಲಬ್​ ಪೋಸ್ಟ್​​ನಲ್ಲಿ, ರಶ್ಮಿಕಾ ಮಂದಣ್ಣ ಭಾವಿ ಪತಿ ಹೊಂದಿರಬೇಕಾದ ಗುಣಗಳ್ಯಾವುವು? ಎಂದು ಪ್ರಶ್ನೆ ಕೇಳಲಾಗಿದ್ದು, ಕೆಳಭಾಗದಲ್ಲಿ ಕೆಲ ಉತ್ತರಗಳನ್ನೂ ಬರೆಯಲಾಗಿದೆ. 'ಇವರು ಭಾರತದ ನ್ಯಾಷನಲ್​ ಕ್ರಶ್​​. ಹಾಗಾಗಿ ಅವರ ಪತಿ ಬಹಳ ವಿಶೇಷವಾಗಿರಬೇಕು. ಅವರನ್ನು ಮದುವೆಯಾಗುವವರು ''VD''ಯಂತೆಯೇ ಇರಬೇಕು. ನಮ್ಮ ಮಾತಿನ ಅರ್ಥ, ಅವರನ್ನು ರಕ್ಷಿಸುವಷ್ಟು 'ವೆರಿ ಡೇರಿಂಗ್​'​. ನಾವು ಅವರನ್ನು ಕ್ವೀನ್​​​ ಎಂದು ಕರೆಯುತ್ತೇವೆ. ಅವರನ್ನು ಕೈ ಹಿಡಿಯುವವರು ರಾಜನಂತೆ ಇರಬೇಕು' ಎಂದು ಬರೆಯಲಾಗಿದೆ.

ಈ ಪೋಸ್ಟ್​​ಗೆ ಅಭಿಮಾನಿಗಳು, ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಸ್ವತಃ ರಶ್ಮಿಕಾ ಮಂದಣ್ಣ ಕೂಡ ರಿಯಾಕ್ಟ್​​ ಮಾಡಿದ್ದಾರೆ. ಫ್ಯಾನ್ಸ್ ಕ್ಲಬ್​ನಿಂದ ಶೇರ್ ಆದ​ ಪೋಸ್ಟ್​​​ಗೆ, ಸ್ವತಃ ರಶ್ಮಿಕಾ ಅವರೇ "That's Very true" (ಅದು ನಿಜ) ಎಂದು ಕಾಮೆಂಟ್​ ಮಾಡಿದ್ದಾರೆ. ಇದು ವಿಜಯ್​ ದೇವರಕೊಂಡ ಜೊತೆಗಿನ ಡೇಟಿಂಗ್ ವದಂತಿಗಳನ್ನು ಹೆಚ್ಚಿಸಿದೆ.

ಇದನ್ನೂ ಓದಿ: 'ರಶ್ಮಿಕಾ ಅನಿಮಲ್​ ಯಶಸ್ಸಿನ ಶ್ರೇಯಸ್ಸು ತೆಗೆದುಕೊಳ್ಳಲಿಲ್ಲ' ಮಾತಿಗೆ ಸ್ಪಷ್ಟನೆ ಕೊಟ್ಟ ನಟಿ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು 2018ರ ಗೀತಾ ಗೋವಿಂದಂ ಸಿನಿಮಾದಲ್ಲಿ ಸ್ಕ್ರೀನ್​​ ಶೇರ್ ಮಾಡಿದಾಗಿನಿಂದಲೂ ಡೇಟಿಂಗ್​​ ವದಂತಿ ಆರಂಭವಾಗಿದೆ. ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಕೂಡ ಕೆಲವರು ಊಹಿಸಿದ್ದಾರೆ. ಅದಾಗ್ಯೂ, ನಾವು ಆಪ್ತ ಸ್ನೇಹಿತರು ಎಂದು ರಶ್ಮಿಕಾ - ವಿಜಯ್​​ ಹೇಳಿಕೊಂಡಿದ್ದಾರೆ. ಗೀತಾ ಗೋವಿಂದಂ ಅಲ್ಲದೇ ಡಿಯರ್ ಕಾಮ್ರೇಡ್‌ನಲ್ಲಿಯೂ ಒಟ್ಟಿಗೆ ನಟಿಸಿದ್ದಾರೆ. ಪರಸ್ಪರರ ಸಿನಿಮಾಗಳಿಗೆ ಬೆಂಬಲ ಸೂಚಿಸುತ್ತಾರೆ.

ಇದನ್ನೂ ಓದಿ: ನಟ ಆಶಿಶ್ ರೆಡ್ಡಿ ಆರತಕ್ಷತೆಯಲ್ಲಿ ರಶ್ಮಿಕಾ-ವಿಜಯ್​​: ವಿಡಿಯೋ ನೋಡಿ

ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಜೀವನದ ಮೇಲೆ ವಿಜಯ್ ಭಾರಿ ಪ್ರಭಾವ ಬೀರಿದ್ದಾರೆಂದು ತಿಳಿಸಿದ್ದಾರೆ. ಇನ್ನೂ ರಶ್ಮಿಕಾ ಬಹು ನಿರೀಕ್ಷಿತ 'ಪುಷ್ಪ: ದಿ ರೂಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್​ ನಟ ವಿಕ್ಕಿ ಕೌಶಲ್ ಜೊತೆಗಿನ ಛಾವಾ ಚಿತ್ರೀಕರಣ ಪೂರ್ಣಗೊಂಡಿದೆ. ರೈನ್​​ಬೋ ಮತ್ತು ದಿ ಗರ್ಲ್‌ಫ್ರೆಂಡ್ ಕೆಲಸ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.