ETV Bharat / entertainment

ತಮನ್ನಾ ಭಾಟಿಯಾ ವಿಜಯ್ ವರ್ಮಾ ಮದುವೆ: ಹೊಸ ಮನೆ ಹುಡುಕಾಟದಲ್ಲಿ ಜೋಡಿ - ವರದಿ - TAMANNAAH BHATIA VIJAY VARMA

ತಮನ್ನಾ ಭಾಟಿಯಾ ವಿಜಯ್ ವರ್ಮಾ ಮದುವೆ ವದಂತಿ ಉಲ್ಭಣಗೊಂಡಿದೆ.

Tamannaah Bhatia and Vijay Varma
ತಮನ್ನಾ ಭಾಟಿಯಾ ವಿಜಯ್ ವರ್ಮಾ (Photo: ANI)
author img

By ETV Bharat Entertainment Team

Published : Nov 25, 2024, 7:27 PM IST

ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಪ್ರೇಮ್​ಕಹಾನಿ ಸುತ್ತಲಿನ ವದಂತಿಗಳು ನಿನ್ನೆ ಮೊನ್ನೆಯದಲ್ಲ. 2023ರಲ್ಲಿ 'ಲಸ್ಟ್ ಸ್ಟೋರೀಸ್ 2' ಸೆಟ್​ನಲ್ಲಿ ಪ್ರೇಮಾಂಕುರವಾಗಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಜೋಡಿ 2025ರ ಹೊತ್ತಿಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ.

ತಮನ್ನಾ ಮತ್ತು ವಿಜಯ್ ತಮ್ಮ ಸಂಬಂಧವನ್ನು ಖಾಸಗಿಯಾಗೇ ಇಟ್ಟುಕೊಂಡಿದ್ದಾರೆ. ಆದರೆ, ಅವರ ಕೆಮಿಸ್ಟ್ರಿ ಕೆಲ ಈವೆಂಟ್​ಗಳಲ್ಲಿ ಈಗಾಗಲೇ ಸಾಬೀತಾಗಿದೆ. ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕೈ ಕೈ ಹಿಡಿದು ಹೆಜ್ಜೆ ಹಾಕುವ ಮೂಲಕ ಮತ್ತು ಪಾಪರಾಜಿಗಳ ಕ್ಯಾಮರಾಗಳಲ್ಲಿ ಕಪಲ್​​ನಂತೆ ಪೋಸ್​ ಕೊಡುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಮಹತ್ವದ ಘಟ್ಟಕ್ಕಾಗಿ ಜೋಡಿ ಐಷಾರಾಮಿ ಮನೆ ಹುಡುಕುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಈ ಇಬ್ಬರೂ ತಮ್ಮ ವೆಡ್ಡಿಂಗ್​ ಪ್ಲ್ಯಾನ್​ ಬಗ್ಗೆ ಸಾರ್ವಜನಿಕವಾಗಿ ಇನ್ನೂ ಏನನ್ನೂ ದೃಢಪಡಿಸದಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಚಿತ್ರರಂಗದವರು ಅಧಿಕೃತ ಅನೌನ್ಸ್​ಮೆಂಟ್​ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಸದ್ಯಕ್ಕಿದು ವದಂತಿಯಷ್ಟೇ.

ಪ್ರೇಮಪಕ್ಷಿಗಳು ಭಾನುವಾರದಂದು ವಸ್ತ್ರವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ನಿವಾಸದಲ್ಲಿ ಫಾತಿಮಾ ಸನಾ ಶೇಖ್ ಅವರೊಂದಿಗೆ ಕಾಣಿಸಿಕೊಂಡರು. ಪಾಪರಾಜಿಗಳು ಹಂಚಿಕೊಂಡಿರುವ ಫೋಟೋದಲ್ಲಿ, ತಮನ್ನಾ ಬ್ಲ್ಯಾಕ್​​ ಪೋಲ್ಕ - ಡಾಟ್ ಡ್ರೆಸ್​ನಲ್ಲಿ ಬೆಡಗು ಭಿನ್ನಾಣ ಪ್ರದರ್ಶಿಸಿದರು. ಮಲ್ಹೋತ್ರಾ ನಿವಾಸದೆದರು ಈ ಮೂವರು ಕ್ಯಾಮರಾಗಳಿಗೆ ಪೋಸ್​ ನೀಡಿದ್ರು.

ಇದನ್ನೂ ಓದಿ: 'ಕೆಜಿಎಫ್ 2'ನಿಂದಾಗಿ ಚಿತ್ರರಂಗ ಮಿಂಚಿದೆ: ಯಶ್ ಗುಣಗಾನ ಮಾಡಿದ ಸೌತ್ ಸೂಪರ್​ಸ್ಟಾರ್

ಸದ್ಯ ತಮನ್ನಾ ವಿಜಯ್​ ಮದುವೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಉತ್ಸಾಹ ಹುಟ್ಟುಹಾಕಿದೆ. ಶೀಘ್ರದಲ್ಲೇ ತಾರೆಯರು ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸೋದನ್ನು ನೋಡಲು ಕಾತರರಾಗಿದ್ದಾರೆ. ವಿಜಯ್ ಅವರು ಸಂದರ್ಶನವೊಂದರಲ್ಲಿ, ತಮ್ಮ (ವಿಜಯ್​ - ತಮನ್ನಾ) ಐದು ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಹೊಂದಿರುವುದಾಗಿ ಬಹಿರಂಗಪಡಿಸಿದರು. ಆದರೆ ಈ ನೆನಪುಗಳನ್ನು ಸೋಷಿಯಲ್​ ಮೀಡಿಯಾದಿಂದ ದೂರ ಇರಿಸಲು ಆದ್ಯತೆ ನೀಡಿದ್ದಾರೆ.

ಇದನ್ನೂ ಓದಿ: 'ನನ್ನ ಹುಡುಗ, ಮದುವೆ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುವುದೇ': ಹಾಗಾದ್ರೆ, ರಶ್ಮಿಕಾ ಮಂದಣ್ಣ ಬಾಯ್​ಫ್ರೆಂಡ್​ ಯಾರು?

ವಿಜಯ್ ವರ್ಮಾ ಹೈದರಾಬಾದ್ ಮೂಲದವರಾಗಿದ್ದು, ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೇ ವಿದ್ಯಾರ್ಥಿ. ಗಲ್ಲಿ ಬಾಯ್, ಮಿರ್ಜಾಪುರ್ ಮತ್ತು ಐಸಿ 814ನಲ್ಲಿನ ತಮ್ಮ ಅಮೋಘ ಅಭಿನಯದ ಮೂಲಕ ಬಾಲಿವುಡ್‌ನಲ್ಲಿ ಭದ್ರ ಸ್ಥಾನ ಹೊಂದಿದ್ದಾರೆ. ಇನ್ನೂ ತಮನ್ನಾ ಭಾಟಿಯಾ ದಕ್ಷಿಣ ಭಾರತದ ಖ್ಯಾತ ನಟಿ. ಸದ್ಯ ಬಾಲಿವುಡ್‌ನಲ್ಲೂ ಯಶಸ್ವಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಈ ಇಬ್ಬರು ಮದುವೆ ಸುತ್ತಲಿನ ವದಂತಿಗಳಿಗೆ ಪ್ರತಿಕ್ರಿಯಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.