ETV Bharat / entertainment

ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ ನಟ ಗುರುಚರಣ್​ ಸಿಂಗ್​ ನಾಪತ್ತೆ: ದೂರು ದಾಖಲಿಸಿದ ತಂದೆ - Gurucharan Singh Missing - GURUCHARAN SINGH MISSING

ಜನಪ್ರಿಯ ನಟ ಗುರುಚರಣ್​ ಸಿಂಗ್ ನಾಪತ್ತೆ ಆಗಿರುವುದಾಗಿ ಅವರ ತಂದೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.

Gurucharan Singh Missing
ಗುರುಚರಣ್​ ಸಿಂಗ್​ ನಾಪತ್ತೆ
author img

By ETV Bharat Karnataka Team

Published : Apr 27, 2024, 12:30 PM IST

ನವದೆಹಲಿ: ಜನಪ್ರಿಯ ಕಾರ್ಯಕ್ರಮ 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಮೂಲಕ ಗಮನ ಸೆಳೆದಿರುವ ನಟ ಗುರುಚರಣ್ ಸಿಂಗ್ ಅವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ. ನಟನ ತಂದೆ ಮಗ ಕಾಣೆಯಾಗಿರುವ ಬಗ್ಗೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ದೆಹಲಿ ಪೊಲೀಸರಿಗೆ ತಂದೆ ನೀಡಿರುವ ದೂರಿನ ಪ್ರಕಾರ, 50ರ ಹರೆಯದ ನಟ ಏಪ್ರಿಲ್ 22 ರಂದು ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಿದ್ದಾರೆ. ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ. ಅವರು ಮುಂಬೈಗೆ ಬಂದಿಳಿಯಬೇಕಿತ್ತು, ಆದರೆ ಮುಂಬೈ ತಲುಪಿಲ್ಲ. ಮನೆಗೂ ವಾಪಸಾಗಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗಲಿಲ್ಲ. ಈ ಹಿನ್ನೆಲೆ ಪೊಲೀಸ್​ ಠಾಣಾ ಮೆಟ್ಟಿಲೇರಬೇಕಾಯಿತು.

"ಅವರು ಮಾನಸಿಕವಾಗಿ ಸ್ಥಿರವಾಗಿದ್ದು, ನಾವು ಅವರುನ್ನು ಹುಡುಕಿದ್ದೇವೆ. ಆದ್ರೀಗ ಅವರು ಕಾಣೆಯಾಗಿದ್ದಾರೆ" ಎಂದು ಗುರುಚರಣ್ ಸಿಂಗ್​​ ತಂದೆ ಪೊಲೀಸರಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಈ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಾವು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುಚರಣ್ ಅವರು 'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ' ಚಿತ್ರದಲ್ಲಿ ಸೋಧಿ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಜನಪ್ರಿಯತೆ ಸಂಪಾದಿಸಿದ್ದರು. ಅದಾಗ್ಯೂ, ಅವರು ಕೆಲ ವರ್ಷಗಳ ಹಿಂದೆ ಕಾರ್ಯಕ್ರಮವನ್ನು ತೊರೆದರು. ತಂದೆಯ ಅನಾರೋಗ್ಯ ಹಿನ್ನೆಲೆ ಶೋ ಬಿಡಬೇಕಾಯಿತು.

ಇದನ್ನೂ ಓದಿ: ಕೆಲವೇ ಗಂಟೆಗಳಲ್ಲಿ 'ಕಲ್ಕಿ 2898 AD' ಚಿತ್ರ ತಂಡದಿಂದ ಬಿಗ್​ ಅಪ್​ಡೇಟ್​: ಅಭಿಮಾನಿಗಳಿಗೆ ಕಾದಿದೆ ಸರಪ್ರೈಸ್ - Kalki 2898 AD

'ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ'ದಲ್ಲಿ 'ರೋಷನ್ ಸಿಂಗ್ ಸೋಧಿ' ಪಾತ್ರದಲ್ಲಿ ನಟಿಸಿದ್ದ ನಟ ಗುರುಚರಣ್ ಸಿಂಗ್ ಅವರ ಪತ್ನಿ - ಮಿಸಸ್ ಸೋಧಿ ಪಾತ್ರ ನಿರ್ವಹಿಸಿದ್ದ ಜೆನಿಫರ್ ಮಿಸ್ಟ್ರಿ ಪ್ರತಿಕ್ರಿಯಿಸಿ, ನಟನ ನಾಪತ್ತೆ ಪ್ರಕರಣ ಶಾಕ್​ ನೀಡಿದೆ. ಅವರು ಎಲ್ಲಿದ್ದರೂ ಸುರಕ್ಷಿತವಾಗಿರುತ್ತಾರೆ ಎಂದು ನಾನು ಭಾವಿಸುತ್ತೇನೆ. ಇದು ಬಹಳ ಆಘಾತಕಾರಿ ಸಂಗತಿ. ಅವರು ಸುರಕ್ಷಿತವಾಗಿರಲೆಂದು ನಾನು ಬಯಸುತ್ತೇನೆ. ಗುರುಚರಣ್​​ ಬಹಳ ಆಧ್ಯಾತ್ಮಿಕ ಮತ್ತು ಉತ್ತಮ ವ್ಯಕ್ತಿ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.