ETV Bharat / entertainment

ಸುಶ್ಮಿತಾ ಸೇನ್​ ಮಿಸ್​ ಯುನಿವರ್ಸ್​​ ಸಂಭ್ರಮಕ್ಕೆ 30 ವರ್ಷ; ಆ ಕ್ಷಣವನ್ನು ವಿಶೇಷ ಚಿತ್ರದ ಮೂಲಕ ಹಂಚಿಕೊಂಡ ನಟಿ - SUSHMITA SEN - SUSHMITA SEN

1994ರ ಮಿಸ್​ ಯುನಿವರ್ಸ್​ ಪಟ್ಟ ಅಲಂಕರಿಸಿದ ಮೊದಲ ಭಾರತೀಯಳು ಎಂಬ ಕೀರ್ತಿ ನಟಿ ಸುಶ್ಮಿತಾ ಸೇನ್​ ಹೊಂದಿದ್ದಾರೆ.

sushmita-sen-celebrates-30th-anniversary-of-historic-miss-universe-win-with-touching-post
sushmita-sen-celebrates-30th-anniversary-of-historic-miss-universe-win-with-touching-post (Etv bharat kannada)
author img

By ETV Bharat Karnataka Team

Published : May 21, 2024, 12:23 PM IST

ಹೈದರಾಬಾದ್​: ಇಂದಿಗೆ ಸರಿಯಾಗಿ 30 ವರ್ಷದ ಹಿಂದೆ ಅಂದರೆ, ಮೇ 21, 1994ರಂದು ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಮುಡಿಗೆ ವಿಶ್ವ ಸುಂದರಿ ಕಿರೀಟ ಏರಿತು. ಈ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯಳು ಎಂಬ ಕೀರ್ತಿ ಕೂಡ ಅವರಿಗಿದೆ. ಈ ವಿಶೇಷ ದಿನದ ಮೆಲುಕನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಹಳೆಯ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ನೆನಪಿನ ಬುತ್ತಿಗೆ ಅಭಿಮಾನಿಗಳನ್ನು ಕರೆದೊಯ್ದಿದ್ದಾರೆ.

ಚಿತ್ರದಲ್ಲಿ ಪುಟ್ಟ ಮಗುವನ್ನು ತಮ್ಮ ಬಗಲಲ್ಲಿ ಕೂರಿಸಿಕೊಂಡು ಮಗುವಿನ ಮುಗ್ದತೆಯನ್ನು ದಿಟ್ಟಿಸಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ಮಾಜಿ ವಿಶ್ವ ಸುಂದರಿ ಮಿಂಚಿದ್ದಾರೆ. ಈ ಚಿತ್ರಕ್ಕೆ ಅಡಿ ಬರಹ ಬರೆದಿರುವ ನಟಿ, 'ಈ ಪುಟ್ಟ ಬಾಲಕಿಯನ್ನು ನಾನು ಅನಾಥಾಶ್ರಮದಲ್ಲಿ ಭೇಟಿಯಾಗಿದ್ದೆ. 18 ವರ್ಷ ವಯಸ್ಸಿನ ನನಗೆ ಜೀವನದ ಕೆಲವು ಮುಗ್ಧ ಮತ್ತು ಆಳವಾದ ಪಾಠವನ್ನು ಆ ಮಗು ಕಲಿಸಿತು. ಆ ಮೌಲ್ಯದೊಂದಿಗೆ ಇಂದಿಗೂ ನಾನು ಜೀವಿಸುತ್ತಿದ್ದೇನೆ. ಆ ಕ್ಷಣಕ್ಕೆ ಇಂದಿಗೆ 30 ವರ್ಷ ತುಂಬಿದೆ. ಭಾರತದ ಮೊದಲ ವಿಶ್ವ ಸುಂದರಿ ವಿಜಯಗಳಿಸಿದ ಸಂಭ್ರಮ' ಎಂದು ತಿಳಿಸಿದ್ದಾರೆ.

ಮುಂದುವರೆದು ಬರೆದಿರುವ ಅವರು, 'ಎಂಥಾ ಅದ್ಭುತ ಪ್ರಯಾಣ ಅದು ಮತ್ತು ಮುಂದುವರೆಯುತ್ತಿದೆ. ನನ್ನ ಬಲ ಮತ್ತು ಗುರುತಾಗಿದ್ದ ಇಂಡಿಯಾ ಥ್ಯಾಂಕ್​ಯೂ' ಎಂದಿರುವ ಅವರು ತಮ್ಮ ಈ ಪ್ರಯಾಣದಲ್ಲಿ ಸಾಗಿದ ಫಿಲಿಫೈನ್ಸ್​ ಸುಂದರಿಯನ್ನು ನೆನಪಿಸಿಕೊಂಡಿದ್ದಾರೆ.

'ನನ್ನ ಪ್ರೀತಿಯ ಅಭಿಮಾನಿಗಳು, ಸ್ನೇಹಿತರು, ಕುಟುಂಬ ಮತ್ತು ಜಗತ್ತಿನೆಲ್ಲೆಡೆಯ ಹಿತೈಷಿಗಳು, ನೀವೆಲ್ಲರೂ ನನ್ನ ಜೀವಿನದ ವಿಭಿನ್ನ ಹಾದಿಯಲ್ಲಿ ಸ್ಪೂರ್ತಿ ತುಂಬಿದ್ದೀರ. ಆ ಪ್ರೀತಿಯನ್ನು ನಾನು ಅನುಭವಿಸಿದ್ದೇನೆ. ಧನ್ಯವಾದಗಳು. ಎಂಥಹ ಗೌರವ 'ಎಂದು 30 ವರ್ಷದ ಬಳಿಕವೂ ಆ ದಿನದ ಕುರಿತು ಸ್ಮರಿಸಿದ್ದಾರೆ.

ಸುಶ್ಮಿತಾ ಸೇನ್​ ಮೊದಲ ಬಾರಿಗೆ ಮಿಸ್ ಯುನಿವರ್ಸ್​ ಆದ ಬಳಿಕ ಯುಕ್ತಾ ಮುಖಿ, ಲಾರಾ ದತ್ತಾ, ಮತ್ತು, ತೀರಾ ಇತ್ತೀಚೆಗೆ, ಹರ್ನಾಜ್ ಸಂಧು ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 1994 ಘಟನೆಯಲ್ಲಿ ಕಡೆಯ ಸುತ್ತಿನಲ್ಲಿ ಸುಶ್ಮಿತಾ ಸೇನ್​ಗೆ, ಮಹಿಳೆ ಎಂಬ ಮೂಲತತ್ವ ಏನು ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ಸೇನ್​, ದೇವರ ಉಡುಗೊರೆಯೇ ಮಹಿಳೆ, ಅದನ್ನು ನಾವು ಆಸ್ವಾದಿಸಬೇಕು. ಮಹಿಳೆಯಿಂದ ಮಗು ಜನಿಸುತ್ತದೆ. ಕಾಳಜಿ, ಹಂಚಿಕೊಳ್ಳುವಿಕೆ ಮತ್ತು ಪ್ರೀತಿಸುವುದು ಏನು ಎಂಬುದನ್ನು ಅವಳು ಪ್ರದರ್ಶಿಸುತ್ತಾಳೆ. ಅದು ಹೆಣ್ಣಾಗಿರುವುದರ ಮೂಲಸ್ವರೂಪ ಎಂದು ಉತ್ತರಿಸಿದ್ದಳು.

ಬಾಲಿವುಡ್​ನಲ್ಲಿ ಸದ್ಯ ಬ್ಯುಸಿಯಾಗಿರುವ ನಟಿ, ಇತ್ತೀಚಿಗೆ ಡಿಸ್ನಿ + ಹಾಟ್​ಸ್ಟಾರ್​ನಲ್ಲಿ ಆರ್ಯಾ-ಅಂತಿಮ್​ ವಾರ್​ನಲ್ಲಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಪ್ರತ್ಯಕ್ಷ್ ಪನ್ವಾರ್, ಗೀತಾಂಜಲಿ ಕುಲಕರ್ಣಿ, ಮಾಯಾ ಸರಾವ್, ಇಲಾ ಅರುಣ್, ಸಿಕಂದರ್ ಖೇರ್, ಇಂದ್ರನೇಲ್ ಸೆಂಗುಪ್ತಾ, ವಿಕಾಸ್ ಕುಮಾರ್ ಮತ್ತು ಶ್ವೇತಾ ಪಸ್ರಿಚಾ ಅವರನ್ನು ಒಳಗೊಂಡ ಕಾರ್ಯಕ್ರಮದಲ್ಲಿ ಮಿಂಚಿದ್ದರು.

ಇದನ್ನೂ ಓದಿ: ದೀಕ್ಷಿತ್​ ಶೆಟ್ಟಿ ಹೊಸ ಸಿನಿಮಾ 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ' ಪೋಸ್ಟರ್ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.