ETV Bharat / entertainment

ಮೈಸೂರಿನ ಚಿದಾನಂದರ 'ಸನ್​ಫ್ಲವರ್ಸ್'ಗೆ ಕೇನ್ಸ್‌ನ ಪ್ರತಿಷ್ಠಿತ ಪ್ರಶಸ್ತಿ - Chidananda S Naik - CHIDANANDA S NAIK

'ಸನ್​ಫ್ಲವರ್ಸ್​​ ವರ್​ ದಿ ಫಸ್ಟ್ ಒನ್ಸ್ ಟು ನೋ' ಚಿತ್ರ 77ನೇ ಕೇನ್ಸ್​​ ಚಲನಚಿತ್ರೋತ್ಸವದಲ್ಲಿ ಲಾ ಸಿನೆಫ್ ಪ್ರಶಸ್ತಿ ಗೆದ್ದುಕೊಂಡಿದೆ.

Sunflowers Were the First Ones to Know
ಕೇನ್ಸ್ ಪ್ರಶಸ್ತಿ ಗೆದ್ದ ಚಿದಾನಂದರ 'ಸನ್​ಫ್ಲವರ್ಸ್​​ ವರ್​ ದಿ ಫಸ್ಟ್ ಒನ್ಸ್ ಟು ನೋ' ಚಿತ್ರ (Instagram)
author img

By ETV Bharat Karnataka Team

Published : May 24, 2024, 11:13 AM IST

ಫ್ರಾನ್ಸ್‌ನ ಕೇನ್ಸ್​​​ನಲ್ಲಿ ನಡೆಯುವ ಚಲನಚಿತ್ರೋತ್ಸವ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಐಶ್ವರ್ಯಾ ರೈ ಬಚ್ಚನ್​​ ಸೇರಿ ಹಲವರು ಭಾರತ ದೇಶವನ್ನು ಪ್ರತಿನಿಧಿಸಿದ್ದಾರೆ. ಗುರುವಾರ ಇದೇ ಚಿತ್ರೋತ್ಸವದಲ್ಲಿ ಭಾರತ ದೊಡ್ಡ ಮಟ್ಟದ ಗೆಲುವು ಕಂಡಿದೆ. ಲಾ ಸಿನೆಫ್​​​ನಲ್ಲಿ ಮೈಸೂರಿನ ಚಿದಾನಂದ ಅವರ 'ಸನ್​ಫ್ಲವರ್ಸ್​​ ವರ್​ ದಿ ಫಸ್ಟ್ ಒನ್ಸ್ ಟು ನೋ' (Sunflowers Were The First Ones to Know) ಚಿತ್ರ​​​ ಪ್ರಶಸ್ತಿ ಪಡೆದುಕೊಂಡಿದೆ.

ಅಧಿಕೃತ ಎಕ್ಸ್​ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡ ಎಫ್​​ಟಿಐಐ (Film and Television Institute of India) 'ಎಫ್​ಟಿಐಐ ಭಾರತಕ್ಕೆ ದೊಡ್ಡ ಗೌರವ ತಂದುಕೊಟ್ಟಿದೆ. ನಮ್ಮ ವಿದ್ಯಾರ್ಥಿಯ ಸನ್​​ಫ್ಲವರ್ಸ್ ವರ್​ ದಿ ಫಸ್ಟ್ ಒನ್ಸ್ ಟು ನೋ 77ನೇ ಕೇನ್ಸ್​​ ಚಲನಚಿತ್ರೋತ್ಸವದಲ್ಲಿ ಲಾ ಸಿನೆಫ್ ಪ್ರಶಸ್ತಿ ಗೆದ್ದಿದೆ. ವಿದ್ಯಾರ್ಥಿ ನಿರ್ದೇಶಕ ಚಿದಾನಂದ ಎಸ್.ನಾಯಕ್ ಮೇ 23ರಂದು ಕೇನ್ಸ್‌ನಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದರು' ಎಂದು ಬರೆದುಕೊಂಡಿದೆ.

ಮಾನ್ಸಿ ಮಹೇಶ್ವರಿ ನಿರ್ದೇಶನದ 'ಬನ್ನಿಹುಡ್' ಎಂಬ ಅನಿಮೇಟೆಡ್ ಚಿತ್ರ ಲಾ ಸಿನೆಫ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಗಳಿಸಿತು. ಎನ್​​ಐಎಫ್​ಟಿ-ದೆಹಲಿಯ ಮಾಜಿ ವಿದ್ಯಾರ್ಥಿನಿ ಹಾಗೂ ಮೀರತ್ ಮೂಲದ ಮಾನ್ಸಿ ಮಹೇಶ್ವರಿ ಅವರು ಯುಕೆಯ ನ್ಯಾಷನಲ್ ಫಿಲ್ಮ್ ಆ್ಯಂಡ್​​ ಟೆಲಿವಿಷನ್ ಸ್ಕೂಲ್​​​ನಲ್ಲಿರುವಾಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೇ, ಗ್ರೀಸ್‌ನ ಥೆಸ್ಸಲೋನಿಕಿಯ ಅರಿಸ್ಟಾಟಲ್ ಯೂನಿವರ್ಸಿಟಿಯ ನಿಕೋಸ್ ಕೊಲಿಯೊಕೋಸ್ ನಿರ್ದೇಶನದ 'ದಿ ಚಾಓಸ್ ಶಿ ಲೆಫ್ಟ್ ಬಿಹೈಂಡ್' ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಆಸ್ಯಾ ಸೆಗಾಲೊವಿಚ್ ಅವರ 'ಔಟ್ ಆಫ್ ದಿ ವಿಡೋ ಥ್ರೂ ದಿ ವಾಲ್' ಎರಡನೇ ಸ್ಥಾನ ಹಂಚಿಕೊಂಡಿದೆ.

ಇದನ್ನೂ ಓದಿ: ಗಣೇಶ್‌ ನಟನೆಯ 'ಕೃಷ್ಣಂ ಪ್ರಣಯ ಸಖಿ'ಯ ಮೊದಲ ಹಾಡು ನಾಳೆ ರಿಲೀಸ್ - Krishnam Pranaya Sakhi

ಕೇನ್ಸ್ ಚಲನಚಿತ್ರೋತ್ಸವದ ಮೊದಲ ಸ್ಥಾನದ ವಿಜೇತರು 15,000 ಯೂರೋ ಬಹುಮಾನ ಪಡೆಯುತ್ತಾರೆ. ರನ್ನರ್-ಅಪ್ 11,250 ಯುರೋ ಸ್ವೀಕರಿಸುತ್ತಾರೆ. ಮೂರನೇ ಸ್ಥಾನದ ವಿಜೇತರು 7,500 ಯುರೋ ಸಿಗುತ್ತದೆ. ಆಯ್ದ ಚಲನಚಿತ್ರಗಳು ಜೂನ್ 3ರಂದು ಸಿನಿಮಾ ಡು ಪ್ಯಾಂಥಿಯಾನ್‌ನಲ್ಲಿ ಮತ್ತು ಜೂನ್ 4ರಂದು ಎಮ್​ಕೆ2 ಕ್ವಾಯ್ ಡಿ ಸೀನ್‌ನಲ್ಲಿ ಪ್ರದರ್ಶನಗೊಳ್ಳುತ್ತವೆ. ಚಿದಾನಂದ ಎಸ್.ನಾಯಕ್ ಅವರಿಗಿದು ಮೊದಲ ಗೆಲುವಾಗಿದ್ದರೆ, ಕಳೆದ ಐದು ವರ್ಷಗಳಲ್ಲಿ ದೇಶದ ಎರಡನೇ ಗೆಲುವಾಗಿದೆ. ಎಫ್‌ಟಿಐಐನವರೇ ಆಗಿರುವ ಅಶ್ಮಿತಾ ಗುಹಾ ನಿಯೋಗಿ 2020ರಲ್ಲಿ ತಮ್ಮ ಕ್ಯಾಟ್‌ಡಾಗ್ ಚಿತ್ರಕ್ಕಾಗಿ ಬಹುಮಾನ ಗೆದ್ದುಕೊಂಡಿದ್ದರು.

ಇದನ್ನೂ ಓದಿ: ಬಾಹುಬಲಿಗೆ ಧ್ವನಿ ನೀಡಿದ್ದು ಖುಷಿ ಕೊಟ್ಟಿದೆ: ನಟ ಶರದ್ ಕೇಲ್ಕರ್ - Sharad Kelkar

ಮೈಸೂರಿನ ವೈದ್ಯರಾದ ಚಿದಾನಂದ ಎಸ್‌.ನಾಯ್ಕ್‌ ಅವರನ್ನು ಸಿನಿಮಾ ಎಂಬ ಬಣ್ಣದ ಜಗತ್ತು ಬಹುವಾಗಿ ಆಕರ್ಷಿಸಿತು. ನಂತರ ಇವರು ಎಫ್‌ಟಿಐಐ ವಿದ್ಯಾರ್ಥಿಯಾಗಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಪುಣೆಯ ಫಿಲ್ಮ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿರುವಾಗ ಸನ್​ಫ್ಲವರ್ಸ್​​​ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡ ಜಾನಪದ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.