ಚೆನ್ನೈ(ತಮಿಳುನಾಡು): 2022ರ ಅಕ್ಟೋಬರ್ 21ರಂದು ಪಿ.ಎಸ್.ಮಿತ್ರನ್ ನಿರ್ದೇಶನದಲ್ಲಿ ಕಾರ್ತಿಕ್ ದ್ವಿಪಾತ್ರಗಳಲ್ಲಿ ನಟಿಸಿರುವ 'ಸರ್ದಾರ್' ಚಿತ್ರ ಬಿಡುಗಡೆಯಾಗಿ, ಸೂಪರ್ ಹಿಟ್ ಆಗಿತ್ತು. ಪ್ರಿನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್.ಲಕ್ಷ್ಮಣ್ ಕುಮಾರ್ ಚಿತ್ರ ನಿರ್ಮಿಸಿದ್ದರು. ಜಿ.ವಿ.ಪ್ರಕಾಶ್ ಸಂಗೀತ ನೀಡಿದ್ದು, ಜಾರ್ಜ್ ಸಿ.ವಿಲಿಯಮ್ಸ್ ಸಿನಿಮಾಟೋಗ್ರಫಿ ಮಾಡಿದ್ದರು.
ಕಾರ್ತಿಕ್ ಜೊತೆಗೆ ನಟಿ ರಾಶಿ ಖನ್ನಾ, ಲೈಲಾ, ಹಿಂದಿ ಚಲನಚಿತ್ರ ನಟ ಸಂಘಿ ಪಾಂಡೆ, ರಿಥ್ವಿಕ್, ಯುಗಿ ಸೇತು, ಅವಿನಾಶ್, ಬಾಲಾಜಿ ಶಕ್ತಿವೇಲ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಸಂಘಿ ಪಾಂಡೆ ಇದೇ ಚಿತ್ರದ ಮೂಲಕ ತಮಿಳು ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ್ದರಿಂದ ಮತ್ತು ಲೈಲಾ 16 ವರ್ಷಗಳ ನಂತರ ದೊಡ್ಡ ಪರದೆಗೆ ಮರಳಿದ್ದರಿಂದ ಚಿತ್ರ ಹೈಲೈಟ್ ಆಗಿತ್ತು.
ವಿಮರ್ಶಾತ್ಮಕ ಮತ್ತು ವಾಣಿಜ್ಯಿಕ ಯಶಸ್ಸು ಕಂಡ ಚಿತ್ರ ತಮಿಳು ಸಿನಿಮಾಭಿಮಾನಿಗಳಲ್ಲಿ ಉತ್ತಮ ಸಾಹಸಮಯ ಚಿತ್ರವಾಗಿ ಪ್ರತಿಕ್ರಿಯೆ ಪಡೆಯಿತು. ವಿಶ್ವಾದ್ಯಂತ 100 ಕೋಟಿ ರೂ ಗಳಿಸಿತು. ಅಷ್ಟು ಮಾತ್ರವಲ್ಲದೇ 2022ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಲನಚಿತ್ರಗಳ ಪೈಕಿ ಒಂದೆಮ್ಮೆ ಹಿರಿಮೆಯನ್ನೂ ಪಡೆಯಿತು.
ಸರ್ದಾರ್ ಶೂಟಿಂಗ್ ಇತ್ತೀಚೆಗಷ್ಟೇ ಪೂಜೆಯೊಂದಿಗೆ ಆರಂಭವಾಗಿದ್ದು, ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಿನ್ನೆ ರಾತ್ರಿ ಫೈಟಿಂಗ್ ದೃಶ್ಯಗಳ ಚಿತ್ರೀಕರಣ ನಡೆದಿದೆ. ಈ ಸಂದರ್ಭದಲ್ಲಿ ಯೆಲುಮಲೈ (54) ಯಾವುದೇ ಸುರಕ್ಷತಾ ಪರಿಕರಗಳಿಲ್ಲದೆ ಅಭ್ಯಾಸ ಮಾಡುತ್ತಿದ್ದ ಕಾರಣ ಅನಿರೀಕ್ಷಿತವಾಗಿ 20 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿದ್ದ ಕಲಾವಿದರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಯೆಲುಮಲೈ ಎದೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ಶ್ವಾಸಕೋಶದಲ್ಲಿ ತೀವ್ರ ರಕ್ತಸ್ರಾವವಾಗಿತ್ತು. ಹೀಗಾಗಿ, ಚಿಕಿತ್ಸೆ ಪಡೆಯುತ್ತಿದ್ದಾಗಲೇ ಸಾವನ್ನಪ್ಪಿದ್ದಾರೆ.
ಯೆಲುಮಲೈ ಕಳೆದ 35 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಫೈಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದಾರೆ. ರಜನಿಕಾಂತ್, ಕಮಲ್ ಹಸನ್, ವಿಜಯ್ ಮತ್ತು ಅಜಿತ್ ಅವರಂತಹ ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದಾರೆ.
ಶೂಟಿಂಗ್ ಸೈಟ್ಗಳಲ್ಲಿ ಸಾಕಷ್ಟು ಸುರಕ್ಷತಾ ಸಲಕರಣೆ ಇಲ್ಲದಿರುವುದೇ ಇಂತಹ ಅವಘಡಗಳಿಗೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ವಿರುಗಂಪಕ್ಕಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಂಬಾನಿ ಪುತ್ರನ ಮದುವೆಯಲ್ಲಿ ಯಶ್-ರಾಧಿಕಾ: ಫೋಟೋ ಹಂಚಿಕೊಂಡ ಮಾಧುರಿ ದೀಕ್ಷಿತ್ ಪತಿ - Yash Radhika