ಸೌತ್ ಸೂಪರ್ ಸ್ಟಾರ್ ಸೂರ್ಯ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಕಂಗುವ'. ಸೂರ್ಯ ಜೊತೆ ಬಾಲಿವುಡ್ ಸ್ಟಾರ್ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿರುವ ಪೀರಿಯಾಡಿಕಲ್ ಆ್ಯಕ್ಷನ್ ಡ್ರಾಮಾವಿದು. ಕಂಗುವ ಟೀಸರ್ ಇಂದು ಅನಾವರಣಗೊಳ್ಳಲಿದೆ. ಅದಕ್ಕೂ ಮುನ್ನ ಸೂರ್ಯ ಅವರನ್ನೊಳಗೊಂಡ ಪೋಸ್ಟರ್ ಬಿಡುಗಡೆ ಆಗಿದ್ದು, ವೀಕ್ಷಕರು ಉತ್ಸುಕರಾಗಿದ್ದಾರೆ. ಬಹುನಿರೀಕ್ಷಿತ ಚಿತ್ರದ ಟೀಸರ್ ಇಂದು 4:30ಕ್ಕೆ ರಿಲೀಸ್ ಆಗಲಿದೆ.
ಇನ್ನೇನು ಕೆಲ ಕ್ಷಣಗಳಲ್ಲಿ ಟೀಸರ್ ಬಿಡುಗಡೆ ಆಗಲಿದ್ದು, ಬೆಳಗ್ಗೆ ನಟ ಸೂರ್ಯ ಶಿವಕುಮಾರ್ ಅವರನ್ನೊಳಗೊಂಡ ಪೋಸ್ಟರ್ ಅನ್ನು ಚಿತ್ರರಂಗ ರಿಲೀಸ್ ಮಾಡಿದೆ. ಈ ಮೂಲಕ ಸಿನಿಪ್ರಿಯರ ಕುತೂಹಲವನ್ನು ಚಿತ್ರತಂಡ ಹೆಚ್ಚಿಸಿದೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ತನ್ನ ಅಧಿಕೃತ ಇನ್ಸ್ಟಾಗ್ರಾಮ್, ಎಕ್ಸ್ ಖಾತೆಗಳಲ್ಲಿ ಹೊಸ ಪೋಸ್ಟರ್ ಹಂಚಿಕೊಂಡಿದೆ. ಪೋಸ್ಟ್ಗೆ "ನೀವು ಚಮತ್ಕಾರಕ್ಕೆ ರೆಡಿನಾ. ಕಂಗುವ ನಿಮ್ಮನ್ನು ಮೋಡಿಮಾಡಲಿದೆ. ಇಂದು ಸಂಜೆ 4:30ಕ್ಕೆ ಟೀಸರ್ ಬಿಡುಗಡೆಯಾಗುತ್ತಿದೆ" ಎಂಬ ಕ್ಯಾಪ್ಷನ್ ಕೊಟ್ಟಿದೆ.
ಶಿವ ನಿರ್ದೇಶನದ ಈ ಚಿತ್ರದಲ್ಲಿ ಬಹುಭಾಷಾ ನಟಿ ದಿಶಾ ಪಟಾನಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ಪ್ರೀ ಪ್ರೊಡಕ್ಷನ್ ಮತ್ತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ ಪ್ರಸ್ತುತ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಪ್ರಮುಖ ಪಾತ್ರದಲ್ಲಿರುವ ಸೂರ್ಯ ಇತ್ತೀಚೆಗೆ ತಮ್ಮ ಭಾಗಗಳ ಡಬ್ಬಿಂಗ್ ಕೆಲಸ ಪ್ರಾರಂಭಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ, ನಿರ್ಮಾಪಕ ಜ್ಞಾನವೆಲ್ ರಾಜ ಅವರು ಬಾಲಿವುಡ್ ನಟ ಬಾಬಿ ಡಿಯೋಲ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದರು. ಚಿತ್ರದ ಭಾಗವಾಗಿದ್ದಕ್ಕಾಗಿ ಪ್ರೀತಿಪೂರ್ವಕ ಧನ್ಯವಾದ ಅರ್ಪಿಸಿದ್ದರು. ಈ ಬಹುನಿರೀಕ್ಷಿತ ಚಿತ್ರದ ಹಿಂದಿರುವ 'ಸ್ಟುಡಿಯೋ ಗ್ರೀನ್' ಕಳೆದ 16 ವರ್ಷಗಳಿಂದ ಸಿಂಗಂ ಸರಣಿ, ಪರುತಿ ವೀರನ್, ಸಿರುತೈ, ನಾನ್ ಮಹನ್ ಅಲ್ಲಾ, ಮದ್ರಾಸ್, ಟೆಡ್ಡಿ, ಕೊಂಬನ್ ಪತ್ತು ತಾಳದಂತಹ ಹಲವು ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿದೆ.
ಇದನ್ನೂ ಓದಿ: 14 ವರ್ಷಗಳ ನಂತರ ಕೇರಳಕ್ಕೆ ವಿಜಯ್ ಭೇಟಿ; ನಟನ ಕಾರು ಡ್ಯಾಮೇಜ್
ಇತ್ತೀಚೆಗೆ ಬಾಬಿ ಡಿಯೋಲ್ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಅನಾವರಣಗೊಂಡಿದೆ. ಉಧಿರನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಬಾಬಿ ಡಿಯೋಲ್ ಅವರ ಪೋಸ್ಟರ್ ನಟನ ಹುಟ್ಟುಹಬ್ಬದಂದು ಅನಾವರಣಗೊಂಡಿತ್ತು. ಒಟ್ಟಾರೆ ಸಿನಿಮಾ ಬಗ್ಗೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದು, ಶೀಘ್ರ ಬಿಡುಗಡೆಗೆ ಚಿತ್ರತಂಡ ತಯಾರಿ ನಡೆಸುತ್ತಿದೆ.
ಇದನ್ನೂ ಓದಿ: ವಿಯೆಟ್ನಾಂನಲ್ಲಿ 'ಕೃಷ್ಣಂ ಪ್ರಣಯ ಸಖಿ' ಚಿತ್ರೀಕರಣ ಪೂರ್ಣ: ಗಣೇಶ್ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ