ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಮುಂದಿನ ಸಿನಿಮಾವನ್ನು ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ಸಕಲ ತಯಾರಿಗಳು ಆರಂಭವಾಗಿವೆ. ಸದ್ಯಕ್ಕೆ ‘SSMB 29’ ಎಂದು ಚಿತ್ರಕ್ಕೆ ಹೆಸರು ಇಡಲಾಗಿದ್ದು, ಚಿತ್ರ ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಚಿತ್ರದಲ್ಲಿ ನಾಯಕ ನಟ ಮಹೇಶ್ ಬಾಬು ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ಸಿದ್ಧತೆ ಕೂಡ ನಡೆಸಿದ್ದಾರೆ.
ಇತ್ತೀಚೆಗೆ ಮದುವೆಯೊಂದರಲ್ಲಿ ಮಹೇಶ್ ಬಾಬು ಪಾಲ್ಗೊಂಡಿದ್ದು, ಅಲ್ಲಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಉದ್ದನೆಯ ಕೂದಲು ಹೊಂದಿರುವುದನ್ನು ಕಾಣಬಹುದು. ಕ್ರಿಕೆಟರ್ ಎಂಎಸ್ ಧೋನಿ ರೀತಿಯಲ್ಲಿ ಉದ್ದನೆ ಕೂದಲು ಬಿಟ್ಟುಕೊಂಡಿದ್ದು, ಸದ್ಯ ಅವರ ಈ ಹೊಸ ಗೆಟಪ್ ಜಾಲತಾಣದಲ್ಲಿ ರಿವೀಲ್ ಆಗಿದೆ. ಈ ಗೆಟಪ್ ಅವರ ಮುಂದಿನ ಚಿತ್ರದ್ದಾಗಿರಬಹುದು ಎಂದು ಅಭಿಮಾಮಿಗಳು, ನೆಟಿಜನ್ಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಚಿತ್ರತಂಡ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.
-
Body Bulk Iyendi💥💥💥🔥🔥🔥
— Nikhil_Prince🚲 (@Nikhil_Prince01) April 28, 2024
He Is Getting Ready For GLOBE TROTTING😎😎& World Is Waiting...🥵#SSMB29 #MaheshBabu pic.twitter.com/5agio0t83I
ಎಸ್‌ಎಸ್ ರಾಜಮೌಳಿ ನಿರ್ದೇಶನದ ಬತ್ತಳಿಕೆಯಿಂದ ಮೂಡಿ ಬರುತ್ತಿರುವ ಚಿತ್ರ ಎಂದ ಮೇಲೆ ಮೇಕಿಂಗ್ ಮತ್ತು ಅದ್ಧೂರಿತನಕ್ಕೆ ಯಾವುದೇ ಕೊರತೆ ಇರದು. ಚಿಕ್ಕ ಚಿಕ್ಕ ಪಾತ್ರಕ್ಕೂ ಹೆಚ್ಚು ಒತ್ತು ನೀಡುವ ರಾಜಮೌಳಿ, ನಾಯಕ ನಟ ಮಹೇಶ್ ಬಾಬು ಅವರನ್ನು ಮುಂಬರುವ ಚಿತ್ರದಲ್ಲಿ ಡಿಫ್ರೆಂಟ್ ಗೆಟಪ್ನಲ್ಲಿ ತೋರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಪಾತ್ರಕ್ಕೆ ತಕ್ಕಂತೆ ಮಹೇಶ್ ಬಾಬು ತಮ್ಮ ತೂಕವನ್ನು ಸಹ ಹೆಚ್ಚಿಸಿಕೊಂಡಿದ್ದಾರಂತೆ.
ಇನ್ನು ನಟರ ಗೆಟಪ್ ಸೇರಿದಂತೆ ಪ್ರತಿ ಚಲನವಲನದ ಮೇಲೂ ಕಣ್ಣಿಟ್ಟಿರುವ ರಾಜಮೌಳಿ, ಈ ಬಹಿರಂಗಪಡಿಸದಂತೆ ಮಹೇಶ್ ಬಾಬುಗೆ ಖಡಕ್ ಸೂಚನೆ ನೀಡಿದ್ದಾರಂತೆ. ಈ ಸೂಚನೆ ನಡುವೆ ಮಹೇಶ್ ಬಾಬು ಅವರ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ. ಆದರೆ, ಈ ಗೆಟಪ್ ಅವರ ಮುಂಬರುವ ಚಿತ್ರದ್ದಾಗಿದೆಯೋ ಅಥವಾ ಬೇರೆಯೋ ಅನ್ನೋದನ್ನು ಚಿತ್ರತಂಡ ಹೇಳಬೇಕು. ಸದ್ಯ ಬಿಗ್ ಬಜೆಟ್ ಜೊತೆಗೆ ಜಾಗತಿಕ ಮಟ್ಟದಲ್ಲಿ ಸಿದ್ಧವಾಗುತ್ತಿರೋ ಈ ಸಿನಿಮಾ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ.
ಜಪಾನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ SSMB29 ಕುರಿತು ಕೆಲವು ಅನಿಸಿಕೆ ವ್ಯಕ್ತಪಡಿಸಿದ್ದ ನಿರ್ದೇಶಕ ಎಸ್‌ಎಸ್ ರಾಜಮೌಳಿ, ನಾವು ಬರವಣಿಗೆಯನ್ನು ಮುಗಿಸಿದ್ದೇವೆ. ಸದ್ಯ ನಿರ್ಮಾಣಕ್ಕೆ ತಯಾರಿ ನಡೆಸುತ್ತಿದ್ದೇವೆ. ಆದರೆ, ನಾವು ಇನ್ನೂ ಕಾಸ್ಟಿಂಗ್ ಅನ್ನು ಪೂರ್ಣಗೊಳಿಸಬೇಕಾಗಿದೆ. ಮಹೇಶ್ ಬಾಬು ಸೇರಿದಂತೆ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಕೆಲವೇ ದಿನಗಳಲ್ಲಿ ಶೂಟಿಂಗ್ ಸಹ ಆರಂಭಿಸುವುದಾಗಿ ಹೇಳಿದ್ದರು.
ಇದನ್ನೂ ಓದಿ: ಬೇರುಗಳೊಂದಿಗೆ ಮರು ಸಂಪರ್ಕ; ದೈವಕೋಲದ ವಿಡಿಯೋ ಹಂಚಿಕೊಂಡ ನಟಿ ಶಿಲ್ಪಾ ಶೆಟ್ಟಿ - Shilpa Shetty Reconnects with Roots