ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಕೊಡುತ್ತಿರುವ ನಟ. ನಿನ್ನೆಯಷ್ಟೇ ಕೇರಳದಲ್ಲಿ ಸರಳವಾಗಿ ಕುಟುಂಬಸ್ಥರೊಂದಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದು, ಜನ್ಮದಿನದ ವಿಶೇಷವಾಗಿ ಉಡುಗೊರೆಗಳು ಶಿವಸೈನ್ಯಕ್ಕೆ ಸಿಕ್ಕಿದೆ. ಆ ಸ್ಪೆಷಲ್ ಗಿಫ್ಟ್ಗಳ ಪೈಕಿ ತುಂಬಾನೇ ಸ್ಪೆಷಲ್ ಎನಿಸಿಕೊಂಡಿರುವುದು ಶಿವಣ್ಣನ 131ನೇ ಚಿತ್ರದ ಝಲಕ್.
The History You Know, The Man You Don’t #IntroducingDeva@KarthikFilmaker @Bhuvaneswaripi @Snreddy09 @sudheerbza @SamCSmusic @humanbaghe @writerJkrishna @nimmaprasanna @ramviswams @PROHarisarasu @The_BigLittle pic.twitter.com/pL9W5Jtc6l
— DrShivaRajkumar (@NimmaShivanna) July 12, 2024
ಈ ಹಿಂದೆ ಕನ್ನಡ ಚಿತ್ರರಂಗಕ್ಕೆ ರಾಮ್ ಗೋಪಾಲ್ ವರ್ಮಾ ಅವರನ್ನು ಕರೆ ತಂದು ಶಿವಣ್ಣನಿಗೆ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಮಾಡಿಸಿದ್ದ ಸುಧೀರ್ ಮತ್ತೊಮ್ಮೆ ಕರುನಾಡ ಕಿಂಗ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ತಮಿಳಿನ ಯುವ ನಿರ್ದೇಶಕ ಕಾರ್ತಿಕ್ ಅದ್ವೈತ್ ಶಿವಣ್ಣನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೊದಲ ಝಲಕ್ ಶಿವಣ್ಣನ ಹುಟ್ಟುಹಬ್ಬಕ್ಕೆ ಅನಾವರಣಗೊಂಡಿದೆ.
ಶಿವಣ್ಣನ ಜನ್ಮದಿನದ ನಿಮಿತ್ತ ಈ 131ನೇ ಚಿತ್ರದ ಮೊದಲ ತುಣುಕನ್ನು ಬಿಡುಗಡೆ ಮಾಡಲಾಗಿದೆ. 3 ನಿಮಿಷ 49 ಸೆಕೆಂಡ್ ಇರುವ ವಿಡಿಯೋ ತುಣುಕಿನಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ರಗಡ್ ಡೈಲಾಗ್ ಮೂಲಕ ಹೀರೋನ ಇಂಟ್ರೊಡ್ಯೂಸ್ ಮಾಡಲಾಗುತ್ತದೆ. ಶಿವಣ್ಣನನ್ನು ಅಚ್ಯುತ್ ಕುಮಾರ್ ವರ್ಣನೆ ಮಾಡುವ ರೀತಿ ಅದ್ಭುತವಾಗಿದೆ. ಆದರೆ ಶಿವಣ್ಣ ಈ ವಿಡಿಯೋದಲ್ಲಿ ಕಾಣಿಸಿಕೊಳ್ಳಲ್ಲ. ಐ ಆಮ್ ಕಮಿಂಗ್ ಎನ್ನುವ ಕರುನಾಡ ಕಿಂಗ್ನ ಫೋಟೋ ಒಂದು ಬಿಟ್ಟು ಚಿತ್ರತಂಡ ಥ್ರಿಲ್ ಹೆಚ್ಚಿಸಿದೆ. ಅಚ್ಯುತ್ ಕುಮಾರ್, ರವೀಂದ್ರ ವಿಜಯ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭೈರತಿ ರಣಗಲ್ ಟೀಸರ್ನಲ್ಲಿ ಕರುನಾಡ ಚಕ್ರವರ್ತಿ ದರ್ಬಾರ್, ಅಭಿಮಾನಿಗಳು ದಿಲ್ ಖುಷ್ - Shivaraj kumar Birthday
ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ಪಾಯುಮ್ ಒಲಿ ನೀ ಎನಕ್ಕು ಚಿತ್ರವನ್ನು ನಿರ್ದೇಶಿಸಿದ್ದ ಕಾರ್ತಿಕ್ ಅದ್ವೈತ್, ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದ ಹಾಗೇ ಇವರಿಗೆ ಇದು ನಿರ್ದೇಶಕನಾಗಿ ಎರಡನೇ ಸಿನಿಮಾ. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ನಲ್ಲಿ, ವಿಭಿನ್ನ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮುಹೂರ್ತ ನಡೆಯಲಿದೆ. ಇತರ ಕಲಾವಿದರ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಚಿತ್ರೀಕರಣಕ್ಕೆ ತೆರಳಲು ಎದುರು ನೋಡುತ್ತಿದೆ ಚಿತ್ರತಂಡ. ಸ್ಯಾಮ್ ಸಿ.ಎಸ್ ಸಂಗೀತ ಒದಗಿಸಲಿದ್ದಾರೆ. ಎ.ಜೆ ಶೆಟ್ಟಿ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ದೀಪು ಎಸ್ ಕುಮಾರ್ ಅವರ ಸಂಕಲನ ಹಾಗೂ ರವಿ ಸಂತೆಹಕ್ಲು ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿರಲಿದೆ. ಭುವನೇಶ್ವರಿ ಪ್ರೊಡಕ್ಷನ್ ಅಡಿ ಎಸ್ ಎನ್ ರೆಡ್ಡಿ ಹಾಗೂ ಸುಧೀರ್ ಪಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.