ETV Bharat / entertainment

ಒಂದೇ ಒಂದು ಡೈಲಾಗ್ ಇಲ್ಲ, ಶಿವಣ್ಣನ ಕಣ್ಣೋಟವೇ ಸಾಕು: ಕುತೂಹಲ ಕೆರಳಿಸಿದ 'ಭೈರತಿ ರಣಗಲ್​' ಟೀಸರ್​ - BHAIRATHI RANAGAL TEASER

ನವೆಂಬರ್​​ 15ಕ್ಕೆ ತೆರೆಕಾಣಲಿರುವ ಬಹುನಿರೀಕ್ಷಿತ 'ಭೈರತಿ ರಣಗಲ್​' ಚಿತ್ರದ ಟೀಸರ್ ರಿಲೀಸ್ ಆಗಿದೆ.

Bhairathi Ranagal poster
'ಭೈರತಿ ರಣಗಲ್​' ಪೋಸ್ಟರ್ (Film poster, Shiva Rajkumar Instagram)
author img

By ETV Bharat Entertainment Team

Published : Oct 25, 2024, 3:46 PM IST

ಸ್ಯಾಂಡಲ್​ವುಡ್​ನ ಹ್ಯಾಟ್ರಿಕ್​ ಹೀರೋ ಶಿವ ರಾಜ್​ಕುಮಾರ್​ ಹಾಗೂ ಜನಪ್ರಿಯ ನಿರ್ದೇಶಕ ನರ್ತನ್​ ಕಾಂಬಿನೇಶನ್​ನಲ್ಲಿ ರೆಡಿಯಾಗಿರುವ 'ಭೈರತಿ ರಣಗಲ್​​' ಬಿಡುಗಡೆಯ ಹೊಸ್ತಿಲಿನಲ್ಲಿದೆ. ಅದ್ಭುತ ಮನರಂಜನೆ ಸಿಗಲಿದೆ ಎಂಬ ಭರವಸೆ ಮೂಡಿಸಿರುವ ಚಿತ್ರದ ಪ್ರಚಾರ ಕೆಲಸಗಳು ಸಾಗಿವೆ. ನವೆಂಬರ್​​ 15ಕ್ಕೆ ತೆರೆಗೆ ಬರಲಿರುವ ಚಿತ್ರದ ಹೊಸ ಟೀಸರ್​ ಅನಾವರಣಗೊಂಡಿದೆ. ಒಂದೇ ಒಂದು ಸಣ್ಣ ಡೈಲಾಗ್​​ ಕೂಡಾ ಇಲ್ಲದೇ ಇರುವ ಈ ಟೀಸರ್​​ನಲ್ಲಿ ಶಿವರಾಜ್ ಕುಮಾರ್ ತಮ್ಮ ಕಣ್ಣಲ್ಲೇ ಸಂದೇಶ ರವಾನಿಸಿದ್ದಾರೆ. ಶಿವಣ್ಣನ ಲುಕ್ಕೇ ಟೀಸರ್​​ನ ಹೈಲೆಟ್ಸ್ ಎನ್ನಬಹುದು.

2017ರಲ್ಲಿ ತೆರೆಕಂಡು ಹಿಟ್​ ಆದ 'ಮಫ್ತಿ' ಚಿತ್ರದಲ್ಲಿ ಶಿವ ರಾಜ್​​ಕುಮಾರ್ 'ಭೈರತಿ ರಣಗಲ್'​ ಎಂಬ ಪಾತ್ರ ನಿರ್ವಹಿಸಿದ್ದರು. ಆ ರೋಲ್​​​ ಪ್ರೇಕ್ಷಕರಿಗೆ ಹಿಡಿಸಿತ್ತು ಕೂಡಾ. ಇದೀಗ ಅದೇ ಪಾತ್ರವನ್ನು ಕೇಂದ್ರವಾಗಿರಿಸಿ ನಿರ್ದೇಶಕ ಕಥೆ ಕಟ್ಟಿಕೊಟ್ಟಿದ್ದಾರೆ. ಇದು ಮಫ್ತಿಯ ಪ್ರೀಕ್ವೆಲ್​ ಕೂಡಾ ಹೌದು. ಮಫ್ತಿ ಇಷ್ಟಪಟ್ಟಿದ್ದ ಪ್ರೇಕ್ಷಕರು ಮತ್ತು ಶಿವಣ್ಣನ ಅಭಿಮಾನಿಗಳು ಚಿತ್ರದ ಮತ್ತೊಂದು ಭಾಗ ವೀಕ್ಷಿಸಲು ಸಜ್ಜಾಗಿದ್ದಾರೆ. ಅವರ ಕುತೂಹಲವನ್ನು ಹೊಸ ಟೀಸರ್​ ಕೆರಳಿಸಿದೆ. ಟೀಸರ್​ನಲ್ಲಿ ಸಿನಿಮಾದ ಮೇಕಿಂಗ್​ ಹೇಗಿರಬಹುದು ಎಂಬ ಸಣ್ಣ ಸುಳಿವಿದೆ.

ಹೊಸದಾಗಿ ಬಿಡುಗಡೆಯಾಗಿರುವ ಟೀಸರ್​ನಲ್ಲಿ ಒಂದೇ ಒಂದು ಡೈಲಾಗ್​​ ಇಲ್ಲ. ಆದಾಗ್ಯೂ ದೃಶ್ಯಗಳು ಕಿಚ್ಚು ಹಚ್ಚುವಂತಿವೆ. ಸೆಂಚುರಿ ಸ್ಟಾರ್​ನ ಆ ನೋಟವಷ್ಟೇ ಸಾಕು ಅಂತಿದ್ದಾರೆ ಫ್ಯಾನ್ಸ್. ಸದ್ದಿಲ್ಲದೇ ಒಂದು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತಹ ಪಾತ್ರಕ್ಕೆ ಶಿವ ರಾಜ್​​ಕುಮಾರ್​ ಜೀವ ತುಂಬಿದ್ದಾರೆ. ಹಾಗಾಗಿ ಸಂಪೂರ್ಣ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.

ಇದನ್ನೂ ಓದಿ: ನ.8ಕ್ಕೆ ದರ್ಶನ್​ ಮುಖ್ಯಭೂಮಿಕೆಯ 'ನವಗ್ರಹ' ಮರು ಬಿಡುಗಡೆ: ಹಬ್ಬ ಆಚರಿಸಲು ಅಭಿಮಾನಿಗಳು ಸಜ್ಜು

ಮಫ್ತಿ ನಿರ್ದೇಶಕ ನರ್ತನ್​ ಆ್ಯಕ್ಷನ್​ ಕಟ್​ ಹೇಳಿರುವ ಚಿತ್ರದಲ್ಲಿ ಶಿವ ರಾಜ್​​​ಕುಮಾರ್​ ಜೊತೆಗೆ ರುಕ್ಮಿಣಿ ವಸಂತ್​ ತೆರೆ ಹಂಚಿಕೊಂಡಿದ್ದಾರೆ. ಜೊತೆಗೆ, ಅವಿನಾಶ್, ದೇವರಾಜ್‍, ಗೋಪಾಲ ಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಛಾಯಾ ಸಿಂಗ್‍, ಬಾಬು ಹಿರಣ್ಣಯ್ಯ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ನವೀನ್​ ಕುಮಾರ್​ ಕ್ಯಾಮರಾ ಕೈಚಳಕವಿರುವ ಸಿನಿಮಾದ ಸಂಕಲನದ ಜವಾಬ್ದಾರಿಯನ್ನು ಆಕಾಶ್​ ಹಿರೇಮಠ ಹೊತ್ತಿದ್ದಾರೆ. ‌ಗುಣ ಅವರ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ ಮತ್ತು ಚೇತನ್ ಡಿಸೋಜ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅವರು ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ನವೆಂಬರ್ 15ಕ್ಕೆ ರಾಜ್ಯಾದ್ಯಂತ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: 'ಬಘೀರ'ನ 'ಪರಿಚಯವಾದೆ' ಸಾಂಗ್​: ಶ್ರೀಮುರುಳಿ, ರುಕ್ಮಿಣಿ ವಸಂತ್​ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ; ಮನಸೆಳೆಯುವಂತಿದೆ ಸಾಹಿತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.