ETV Bharat / entertainment

ಬಿಗ್​​ ಬಾಸ್​​ನಿಂದ ಯಮುನಾ ಔಟ್; ಮನೆಯಲ್ಲಿ ಮತ್ತೆ ಕಿರುಚಾಟ: ನಿಮ್ಮ ಅಭಿಪ್ರಾಯವೇನು? - BIGG BOSS KANNADA 11

''ಒಡಕು, ಬಿರುಕು, ಮಸಿ : ಮನೆ ಈಗ ರಣಾಂಗಣ'' ಶೀರ್ಷಿಕೆಯಡಿ ಬಿಗ್​ ಬಾಸ್​ನ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ.

Yamuna shrinidhi elimination
ನಟಿ ಯಮುನಾ ಶ್ರೀನಿಧಿ ಎಲಿಮಿನೇಶನ್​ (Photo Source: Colors kannada IG)
author img

By ETV Bharat Karnataka Team

Published : Oct 7, 2024, 1:02 PM IST

Updated : Oct 7, 2024, 1:08 PM IST

ಬಿಗ್​ ಬಾಸ್ ಕನ್ನಡ ಸೀಸನ್ 11ರ ಮೊದಲ ಎಲಿಮಿನೇಶನ್​ ಪೂರ್ಣಗೊಂಡಿದೆ. ಮೊದಲ ವಾರ ನಟಿ ಯಮುನಾ ಶ್ರೀನಿಧಿ ಅವರು ಮನೆಯಿಂದ ಹೊರನಡೆದಿದ್ದಾರೆ. ದನಿ ಏರಿಸಿ ಸುದ್ದಿಯಾಗಿದ್ದ ನಟಿ ಮೊದಲ ವಅರವೇ ಮನೆಯಿಂದ ಹೊರನಡೆದಿರುವುದು ಬಹುತೇಕರಿಗೆ ಆಶ್ಚರ್ಯ ಮೂಡಿಸಿದೆ. ಜನಪ್ರಿಯ ಕಾರ್ಯಕ್ರಮದ ಫಿನಾಲೆ ಹಂತ ತಲುಪಬೇಕು, ಟ್ರೋಫಿ ಎತ್ತಿ ಹಿಡಿಯಬೇಕು ಎಂದು ಅಂದುಕೊಂಡು ಬಂದ ಯಮುನಾ ಅವರಿಗೆ ನಿರಾಸೆಯಾಗಿದೆ.

ಕಳೆದ ಭಾನುವಾರ ಅದ್ಧೂರಿಯಾಗಿ ಕಾರ್ಯಕ್ರಮ ಆರಂಭಗೊಂಡಿತ್ತು. ನೋಡ ನೋಡುತ್ತಿದ್ದಂತೆ ಒಂದು ವಾರ ಪೂರ್ಣಗೊಂಡು, ಎರಡನೇ ವಾರ ಶುರುವಾಗಿಬಿಟ್ಟಿದೆ. ಮನೆಯೊಳಗೆ ಮೊದಲ ವಾರವೇ ಊಹೆಗೂ ಮೀರಿ ಚರ್ಚೆ, ವಾದ ವಿವಾದ, ಜಗಳ, ಕಿರುಚಾಟಗಳು ನಡೆದಿವೆ. ಯಮುನಾ ಶ್ರೀನಿಧಿ ಜೊತೆ ಹಂಸಾ, ಗೌತಮಿ ಜಾದವ್​, ಭವ್ಯಾ, ಚೈತ್ರಾ ಕುಂದಾಪುರ, ಮಾನಸಾ, ಶಿಶಿರ್​​​ ಮತ್ತು ಮೋಕ್ಷಿತಾ ಅವರು ಎಲಿಮಿನೇಟ್​ ಅಗಿದ್ದರು. ಹಂಸಾ ಕ್ಯಾಪ್ಟನ್​ ಆದ ಹಿನ್ನೆಲೆ ಈ ವಾರ ಮನೆಯಿಂದ ಹೊರನಡೆಯುವುದಿಲ್ಲ ಎಂದು ಊಹಿಸಲಾಗಿತ್ತು. ಆದ್ರೆ ಮನೆಯಲ್ಲಿ ಸೇಫ್ ಆಗಿ ಕೊನೆಯಲ್ಲಿ ಉಳಿದ ಎರಡು ಹೆಸರುಗಳೇ ಯಮುನಾ ಶ್ರೀನಿಧಿ ಮತ್ತು ಹಂಸಾ. ಈ ಇಬ್ಬರಲ್ಲಿ ಯಮುನಾ ಅವರು ಎಲಿಮಿನೇಟ್​ ಆಗಿ, ಹಂಸಾ ಈ ವಾರ ಅಲ್ಲದೇ ಮೂರನೇ ವಾರಕ್ಕೂ ಎಂಟ್ರಿ ಪಡೆದುಕೊಂಡಿದ್ದಾರೆ. ಕ್ಯಾಪ್ಟನ್​ ಆದ ಹಿನ್ನೆಲೆ ಈ ವಾರ ನಾಮಿನೇಶನ್​ನಿಂದ ಪಾರಾಗಿದ್ದಾರೆ.

ನಟಿ ಯಮುನಾ ಶ್ರೀನಿಧಿ ಮೊದಲ ವಾರ ಸಾಕಷ್ಟು ಸಕ್ರಿಯರಾಗಿ ತಮ್ಮನ್ನು ಮನೆಯವರೊಂದಿಗೆ ತೊಡಗಿಸಿಕೊಂಡಿದ್ದರೂ ಕೂಡಾ ಕಡಿಮೆ ಮತಗಳ ಹಿನ್ನೆಲೆ ಮನೆಯಿಂದ ಹೊರ ನಡೆದಿದ್ದಾರೆ. ಇದು ಬಹುತೇಕ ಜನರಿಗೆ ಶಾಕಿಂಗ್​ ನ್ಯೂಸ್​​. ಹಲವು ಸನ್ನಿವೇಶಗಳಲ್ಲಿ ಧೈರ್ಯದಿಂದ, ಗಟ್ಟಿ ದನಿಯೊಂದಿಗೆ ಮುನ್ನುಗ್ಗಿದರೂ ಕೂಡಾ ಎಲಿಮಿನೇಶನ್​ ಬಿಸಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಎಲಿಮಿನೇಶನ್​​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸೋಮವಾರದ ಪ್ರೋಮೋ: ''ಒಡಕು, ಬಿರುಕು, ಮಸಿ : ಮನೆ ಈಗ ರಣಾಂಗಣ! ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ 9:30'' ಎಂಬ ಕ್ಯಾಪ್ಷನ್​ನೊಂದಿಗೆ ಇಂದಿನ ಪ್ರೋಮೋ ಅನಾವರಣಗೊಂಡಿದೆ. ಇಂದಿನ ಸಂಚಿಕೆ ಕೂಡಾ ಅದೇ ಹಳೇ ಕಿರುಚಾಟಗಳಿಂದ ಕೂಡಿದೆ ಎಂಬುದರ ಸುಳಿವನ್ನು ಈ ಪ್ರೋಮೋ ಕೊಟ್ಟಿದೆ.

ಇದನ್ನೂ ಓದಿ: ಮಕ್ಕಳಿಂದ ದೊಡ್ಡವರವರೆಗೂ ಫೇವರೆಟ್ ಪ್ಲೇಸ್​​: 'ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್​ ಅಡ್ವೆಂಚರ್ಸ್'ಗೆ ವರ್ಷದ ಸಂಭ್ರಮ - Jollywood Studios and Adventures

ವೇದಿಕೆಯಲ್ಲಿ ನಿಂತಿರುವ ಸದಸ್ಯ ಮನೆಯಲ್ಲಿರಲು ಏಕೆ ಅನರ್ಹರು ಎಂಬ ವಾದ ಪ್ರತಿವಾದವನ್ನು ಮಂಡಿಸಬೇಕು ಎಂದು ಬಿಗ್​ ಬಾಸ್​​ ಟಾಸ್ಕ್ ಕೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಆಯ್ಕೆಯ ಸ್ಪರ್ಧಿಗೆ ಮಸಿ ಬಳಿದು ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ವಾದ ಪ್ರತಿವಾದ ಕಿರುಚಾಟಕ್ಕೆ ತಿರುಗಿದೆ.

ಇದನ್ನೂ ಓದಿ: 'ಬಿಗ್​ ಬಾಸ್​ ಹೆಸರು ಹಾಳ್​ ಮಾಡೋಕೆ ನಿಮ್ಮ ಅಪ್ಪನಾಣೆ ಸಾಧ್ಯವಿಲ್ಲ': ಲಾಯರ್​ ಜಗದೀಶ್​ ಮಾತಿಗೆ ನಯವಾಗೇ ಟಾಂಗ್​ ಕೊಟ್ಟ ಸುದೀಪ್​ - Sudeep On Lawyer Jagdish

'ಕ್ಯಾಪ್ಟನ್ ಹಂಸಾ ಬಿಗ್ ಬಾಸ್ ಮನೆಯಲ್ಲಿ ತರಬೇಕಿರೋ ಒಂದು ಚೇಂಜ್ ಯಾವುದು?' ಎಂದು ಕಳೆದ ದಿನ ಪೋಸ್ಟ್ ಒಂದನ್ನು ವಾಹಿನಿ ಹಂಚಿಕೊಂಡಿತ್ತು. ಈ ಬಗ್ಗೆಯೂ ಸೋಷಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆಗಳು ಮುಂದುವರಿದಿವೆ.

Last Updated : Oct 7, 2024, 1:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.