ETV Bharat / entertainment

ಕಲಾ ಕ್ಷೇತ್ರದ ಸಾಧಕರಿಗೆ ಗೌರವ: ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟ - ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟವಾಗಿದೆ.

Sangeet Natak Akademi Award winners
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರು
author img

By ETV Bharat Karnataka Team

Published : Feb 29, 2024, 10:49 AM IST

2022 ಮತ್ತು 2023ನೇ ಸಾಲಿನ ಗೌರವಾನ್ವಿತ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತರ ಪಟ್ಟಿ ಅನಾವರಣಗೊಂಡಿದೆ. ಅಕಾಡೆಮಿಯು ಬುಧವಾರದಂದು ವಿಜೇತರ ಹೆಸರು ಘೋಷಿಸಿದೆ. ಅಕಾಡೆಮಿ ರತ್ನ ಮತ್ತು ಅಕಾಡೆಮಿ ಪುರಸ್ಕಾರವನ್ನು ರಾಷ್ಟ್ರಪತಿ ಅವರು ಪ್ರದಾನ ಮಾಡಲಿದ್ದಾರೆ.

ವಿಶೇಷ ಪ್ರಶಸ್ತಿ ಪುರಸ್ಕೃತರಲ್ಲಿ ನಟರಾದ ರಾಜೀವ್ ವರ್ಮಾ, ಅಶೋಕ್ ಸರಫ್ ಮತ್ತು ಗಾಯಕರಾದ ಬಾಂಬೆ ಜಯಶ್ರೀ ಅವರ ಹೆಸರುಗಳಿವೆ. ಸಂಗೀತ, ನೃತ್ಯ ಮತ್ತು ನಾಟಕಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಅಕಾಡೆಮಿಯು ಅಕಾಡೆಮಿ ಫೆಲೋಗಳನ್ನೂ ಆಯ್ಕೆ ಮಾಡಿದೆ.

ಹೊಸದಾಗಿ ಆಯ್ಕೆಯಾಗಿರುವ ಫೆಲೋ ಪ್ರಶಸ್ತಿ (ಅಕಾಡೆಮಿ ರತ್ನ) ವಿಜೇತರ ಪೈಕಿ, ಪೈಕಿ ಪ್ರತಿಭಾವಂತ ವೀಣಾವಾದಕ ಆರ್ ವಿಶ್ವೇಶ್ವರನ್, ಕಥಕ್ ನೃತ್ಯಗಾರ್ತಿ ಸುನಯನಾ ಹಝಾರಿಲಾಲ್ ಮತ್ತು ಹೆಸರಾಂತ ಕೂಚಿಪುಡಿ ಜೋಡಿ ರಾಜಾ ಮತ್ತು ರಾಧಾ ರೆಡ್ಡಿ ಸೇರಿದ್ದಾರೆ. ಜಾನಪದ ತಜ್ಞ ಮತ್ತು ಲೇಖಕ ವಿನಾಯಕ್ ಖೇಡೇಕರ್, ರಂಗಭೂಮಿ ನಿರ್ದೇಶಕ ದುಲಾಲ್ ರಾಯ್ ಮತ್ತು ನಾಟಕಕಾರ ಡಿ.ಪಿ. ಸಿನ್ಹಾ ಅವರಂತಹ ಗಣ್ಯರು ಕೂಡ ಅಕಾಡೆಮಿ ಫೆಲೋಗಳಾಗಿ ಆಯ್ಕೆಯಾಗಿದ್ದಾರೆ. ಸಂಗೀತ ನಾಟಕ ಅಕಾಡೆಮಿಯ ಜನರಲ್ ಕೌನ್ಸಿಲ್ ತನ್ನ ಹೇಳಿಕೆಯಲ್ಲಿ, ಅಕಾಡೆಮಿ ಫೆಲೋಶಿಪ್‌ ಅನ್ನು ಪ್ರತಿಷ್ಠಿತ ಮತ್ತು ಅಪರೂಪದ ಗೌರವ ಎಂದು ಒತ್ತಿಹೇಳಿದೆ. ಪ್ರತೀ ಬಾರಿ ಸುಮಾರು 40 ಜನ ಪ್ರತಿಭಾವಂತರಿಗೆ ಈ ಫೆಲೋಶಿಪ್​ ಗೌರವ ಸಲ್ಲುತ್ತದೆ.

ಇದನ್ನೂ ಓದಿ: 'ಕೈಲಾಸ ಕಾಸಿದ್ರೆ' ಟ್ರೇಲರ್​ ರಿಲೀಸ್​: ಮಾ.8ಕ್ಕೆ ಸಿನಿಮಾ ಬಿಡುಗಡೆ

ಫೆಲೋಗಳ ಜೊತೆಗೆ, ಸಂಗೀತ, ನೃತ್ಯ, ರಂಗಭೂಮಿ ಮತ್ತು ಸಾಂಪ್ರದಾಯಿಕ ಕಲೆಗಳ ವಿವಿಧ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ 92 ಕಲಾವಿದರನ್ನು ಅಕಾಡೆಮಿ ಪುರಸ್ಕಾರ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಈ ಪ್ರತಿಭಾವಂತ ಕಲಾವಿದರು ಹಿಂದೂಸ್ತಾನಿ ಮತ್ತು ಕರ್ನಾಟಿಕ್ ಗಾಯನ, ವಾದ್ಯ ಸಂಗೀತ, ಭರತನಾಟ್ಯ, ಕಥಕ್, ಕೂಚಿಪುಡಿ ಮತ್ತು ಒಡಿಸ್ಸಿಯಂತಹ ಶಾಸ್ತ್ರೀಯ ನೃತ್ಯ ಪ್ರಕಾರಗಳು ಮತ್ತು ಸಮಕಾಲೀನ ನೃತ್ಯ ಶೈಲಿಗಳನ್ನು ಒಳಗೊಂಡಂತೆ ವೈವಿಧ್ಯಮಯ ಕಲೆಗಳನ್ನು ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ: 'ಶಭ್ಬಾಷ್' ಎರಡನೇ ಹಂತದ ಚಿತ್ರೀಕರಣ ಪೂರ್ಣ

ಪ್ರತಿಷ್ಠಿತ ಪ್ರಶಸ್ತಿಗಳನ್ನು ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ಪ್ರದಾನ ಮಾಡುತ್ತಾರೆ. ಈ ಗೌರವಾನ್ವಿತ ಸಮಾರಂಭದಲ್ಲಿ 80 ಯುವ ಕಲಾವಿದರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿಗಳನ್ನು ನೀಡಿ, ಕಲೆಗೆ ಅವರ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ. ಈ ಪ್ರಶಸ್ತಿಗಳು ಕಲಾವಿದರ ಪ್ರತಿಭೆಯನ್ನು ಪೋಷಿಸಲು ಮತ್ತು ಪ್ರದರ್ಶನ ಕಲೆಯ (performing arts) ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವುದು ಅಕಾಡೆಮಿಯ ಉದ್ದೇಶವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.