ETV Bharat / entertainment

'ಯಾರಿಗೂ ಹೀಗಾಗಬಾರದು': ಸಲ್ಮಾನ್ ಮನೆ ಹೊರಗಿನ ಗುಂಡಿನ ದಾಳಿ ಬಗ್ಗೆ ಮಾಜಿ ಗೆಳತಿ ಸೋಮಿ ಅಲಿ ಪ್ರತಿಕ್ರಿಯೆ - Somy Ali on Salman - SOMY ALI ON SALMAN

ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ಬಗ್ಗೆ ಮಾಜಿ ಗೆಳತಿ ಸೋಮಿ ಅಲಿ ಪ್ರತಿಕ್ರಿಯಿಸಿದ್ದಾರೆ.

Somy Ali on Salman Khan
ಸಲ್ಮಾನ್ ಪ್ರಕರಣದ ಬಗ್ಗೆ ಸೋಮಿ ಅಲಿ ಪ್ರತಿಕ್ರಿಯೆ (Photo: Salman & Somy Instagram)
author img

By ETV Bharat Karnataka Team

Published : May 11, 2024, 5:41 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ಮುಂದುವರೆದಿದೆ. ಈ ಪ್ರಕರಣದಲ್ಲಿ ಈವರೆಗೆ 5 ಮಂದಿಯನ್ನು ಬಂಧಿಸಲಾಗಿದೆ. ಐವರು ಆರೋಪಿಗಳ ಪೈಕಿ ಅನುಜ್ ಥಾಪನ್ ಪೊಲೀಸ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಒಟ್ಟಾರೆ, ಅನುಜ್ ಥಾಪನ್ ಆತ್ಮಹತ್ಯೆ, ಗುಂಡಿನ ದಾಳಿ ಪ್ರಕರಣದ ತನಿಖೆ ಸಾಗಿದ್ದು, ಇದೀಗ ಸಲ್ಮಾನ್ ಖಾನ್​​ ಅವರ ಮಾಜಿ ಗೆಳತಿ ಸೋಮಿ ಅಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಸಲ್ಮಾನ್ ಖಾನ್ ಮನೆ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣದ ಬಗ್ಗೆ ನಟಿ ಸೋಮಿ ಅಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ನನ್ನ ಶತ್ರುವಿಗೂ ಹೀಗಾಗಲಿ ಎಂದು ನಾನು ಬಯಸುವುದಿಲ್ಲ. ಯಾರೂ ಆ ಪರಿಸ್ಥಿತಿ ಎದುರಿಸಬಾರದು. ನನ್ನ ಪ್ರಾರ್ಥನೆಗಳು ಸಲ್ಮಾನ್​​ ಅವರೊಂದಿಗಿವೆ. ಹಿಂದೆ ಏನೇ ನಡೆದಿದ್ದರೂ, ಪ್ರಸ್ತುತ ಅವು ಮಹತ್ವದ್ದಲ್ಲ. ಹಿಂದಿನ ವಿಚಾರಗಳು ಗತಕಾಲದಂತಿರಲಿ. ಸಲ್ಮಾನ್ ಆಗಿರಲಿ, ಶಾರುಖ್ ಆಗಿರಲಿ ಅಥವಾ ನನ್ನ ನೆರೆಹೊರೆಯವರಾಗಿರಲಿ ಯಾರಿಗೂ ಹೀಗಾಗಬಾರದು ಎಂದು ತಿಳಿಸಿದ್ದಾರೆ.

ಸಮಸ್ಯೆ ಏನೇ ಇರಲಿ ಕಾನೂನು ಕ್ರಮಗಳಿವೆ. ಅದೇ ಜೀವಕ್ಕೆ ತೊಂದರೆ ಕೊಡುವುದು ಸ್ವೀಕಾರ್ಹವಲ್ಲ. ಸಲ್ಮಾನ್ ಅಥವಾ ಅವರ ಕುಟುಂಬ ಯಾವುದೇ ತೊಂದರೆ ಎದುರಿಸಬೇಕೆಂದು ನಾನೆಂದಿಗೂ ಬಯಸುವುದಿಲ್ಲ. ನಾನು ಮತ್ತು ನನ್ನ ತಾಯಿ ಅವರಿಗೆ ಶುಭ ಹಾರೈಸುತ್ತೇನೆ. ಸುರಕ್ಷತೆಗೆ ಪ್ರಾರ್ಥನೆ ಮಾಡುತ್ತೇವೆ. ಒಟ್ಟಾರೆ ಘಟನೆ ಬಗ್ಗೆ ನಾವು ಆಘಾತಕ್ಕೊಳಗಾಗಿದ್ದೇವೆ. ಸಲ್ಮಾನ್‌ನೊಂದಿಗೆ ಹೀಗಾಗಬಾರದಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ - Salman House Firing Case

ಪ್ರಕರಣದ ಹಿನ್ನೆಲೆ: ಏಪ್ರಿಲ್ 14ರ ಮುಂಜಾನೆ ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಇಬ್ಬರು ಬಂದುಕೋರರು ಬೈಕ್‌ನಲ್ಲಿ ಆಗಮಿಸಿ, ಕೆಲ ಸುತ್ತುಗಳ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ಕೂಡಲೇ ಪ್ರಕರಣ ದಾಖಲಾಗಿ, ತನಿಖೆ ಆರಂಭವಾಯ್ತು. ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಜೊತೆಗೆ ಇಬ್ಬರು ಶಸ್ತ್ರಾಸ್ತ್ರ ಪೂರೈಕೆದಾರರಾದ ಸೋನು ಸುಭಾಷ್ ಚಂದರ್ ಮತ್ತು ಅನುಜ್ ಥಾಪನ್ ನನ್ನು ಬಂಧಿಸಿತ್ತು. ಈ ಪೈಕಿ ಅನುಜ್ ಥಾಪನ್ ಲಾಕಪ್​​​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಕುಟುಂಬಸ್ಥರು ಕೊಲೆ ಎಂದು ಆರೋಪಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬುಧವಾರವಾರದಂದು ಮೇ. 27ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯ್ತು. ಮತ್ತೋರ್ವ ಆರೋಪಿ ಸೋನು ಕುಮಾರ್ ಬಿಷ್ಣೋಯ್​ನ ನ್ಯಾಯಾಂಗ ಬಂಧನವನ್ನು ಸಹ ಇದೇ ದಿನಾಂಕದವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ 'ಸಿಖಂದರ್‌'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.