ಮುಂಬೈ(ಮಹಾರಾಷ್ಟ್ರ): ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯ ಸಮೀಪ ಇತ್ತೀಚಿಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮಹಾರಾಷ್ಟ್ರ ಸರ್ಕಾರ ವೈ ಪ್ಲಸ್ ವಿಶೇಷ ಭದ್ರತೆ ಒದಗಿಸಿದೆ. ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಕಾಣಿಸಿಕೊಂಡಿದ್ದು, ದುಬೈಗೆ ಪ್ರಯಾಣ ಬೆಳೆಸಿದರು.
ಈ ಕುರಿತ ವಿಡಿಯೋಗಳನ್ನು ಪಾಪರಾಜಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ವೈಯಕ್ತಿಕ ಭದ್ರತಾ ಸಿಬ್ಬಂದಿಗಳ ಕಣ್ಗಾವಲಿನಲ್ಲಿ ಕೆಲಕಾಲ ಫೋಟೋಗ್ರಾಫರ್ಗಳೊಂದಿಗೆ ಮಾತುಕತೆ ನಡೆಸಿದರು.
ಏಪ್ರಿಲ್ 14ರಂದು ಭಾನುವಾರ ಬೆಳಗ್ಗೆ ಮೋಟರ್ಸೈಕಲ್ನಲ್ಲಿ ಬಂದಿದ್ದ ಇಬ್ಬರು ಮುಸುಕುಧಾರಿಗಳು ಸಲ್ಮಾನ್ ಖಾನ್ ನೆಲೆಸಿರುವ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಹೊರಗೆ ಗುಂಡಿನ ದಾಳಿ ನಡೆಸಿದ್ದರು. ಅಪಾರ್ಟ್ಮೆಂಟ್ನಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್, ತಾಯಿ ಸಲ್ಮಾ ಮತ್ತು ಮಲತಾಯಿ ಹೆಲೆನ್ ವಾಸವಿದ್ದಾರೆ. ಮುಂಬೈ ಅಪರಾಧ ದಳ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಮೇಲೆ ದಾಳಿ ಪ್ರಕರಣ: ಬಂಧಿತರು ಅನಕ್ಷರಸ್ಥರು ಎಂದ ನಟನ ತಂದೆ ಸಲೀಂ ಖಾನ್