ETV Bharat / entertainment

'ಅಶ್ವತ್ಥಾಮ'ನಾದ ಶಾಹಿದ್ ಕಪೂರ್: ಬಾಲಿವುಡ್ ನಟನಿಗೆ ಕನ್ನಡಿಗ ನಿರ್ದೇಶಕ - Ashwatthama

ಸ್ಯಾಂಡಲ್​ವುಡ್​ನ ಸಚಿನ್ ರವಿ ಹಾಗೂ ಬಾಲಿವುಡ್​ನ ಶಾಹಿದ್ ಕಪೂರ್ ಕಾಂಬಿನೇಶನ್​​ನಲ್ಲಿ 'ಅಶ್ವತ್ಥಾಮ' ಸಿನಿಮಾ ಮೂಡಿಬರಲಿದೆ.

Sachin Ravi ready to direct Shahid Kapoor starrer ashwatthama movie
'ಅಶ್ವತ್ಥಾಮ'ನಾದ ಶಾಹಿದ್ ಕಪೂರ್: ಬಾಲಿವುಡ್ ಸ್ಟಾರ್​​ಗೆ ಸ್ಯಾಂಡಲ್​ವುಡ್ ನಿರ್ದೇಶಕರ ಡೈರೆಕ್ಷನ್​​​​​
author img

By ETV Bharat Karnataka Team

Published : Mar 21, 2024, 9:09 AM IST

'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಸೂತ್ರಧಾರ ಸಚಿನ್ ರವಿ ಅವರು ಬಾಲಿವುಡ್ ನಟ ಶಾಹಿದ್ ಕಪೂರ್​ಗೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಸ್ಯಾಂಡಲ್​ವುಡ್-ಬಾಲಿವುಡ್​​ ಕ್ರೇಜಿ ಕಾಂಬಿನೇಷನ್ 'ಅಶ್ವತ್ಥಾಮ'ನ ಕಥೆ ಹೇಳಲು ಬರುತ್ತಿದೆ. ಮಂಗಳವಾರ ಸಂಜೆ ಮುಂಬೈನಲ್ಲಿ ನಡೆದ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿತ್ತು.

ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಸಿನಿಮಾಗೆ 'ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್' ಎಂಬ ಶೀರ್ಷಿಕೆ ಇಡಲಾಗಿದೆ. ಕನ್ನಡದ​ ನಿರ್ದೇಶಕ ಸಚಿನ್ ರವಿ ನಿರ್ದೇಶನದ ಬಹುನಿರೀಕ್ಷಿತ ಪ್ರೊಜೆಕ್ಟ್​ನಲ್ಲಿ​​​​ ಅಶ್ವತ್ಥಾಮನ ಪಾತ್ರಕ್ಕೆ ಶಾಹಿದ್ ಕಪೂರ್ ಜೀವ ತುಂಬಲಿದ್ದಾರೆ. ಇಲ್ಲಿ ಅಶ್ವತ್ಥಾಮನಾಗಿಯೇ ಶಾಹಿದ್ ಕಪೂರ್ ಕಾಣಿಸಿಕೊಳ್ಳುವರು. ಅಶ್ವತ್ಥಾಮ ಓರ್ವ ಶ್ರೇಷ್ಠ ಯೋಧ ಅನ್ನೋದು ಗೊತ್ತಿರುವಂಥದ್ದು. ಏಳು ಚಿರಂಜೀವಿಗಳಲ್ಲಿ ಆತನೂ ಓರ್ವ ಎಂಬುದು ಪೌರಾಣಿಕ ನಂಬಿಕೆ.

"ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಆಗಲಿದೆ. ಕಾಲ್ಪನಿಕ ಸನ್ನಿವೇಶಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆಗಳ ಕುರಿತು ಕಥೆ ರಚಿಸಿ ತೆರೆಗೆ ತರುವುದು ನಿರ್ದೇಶನಕಾಗಿ ಸವಾಲಿನ ಕೆಲಸ. ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮವಿದೆ. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹಿದ್ ಕಪೂರ್ ಜೊತೆ ಬಹಳಷ್ಟು ಚರ್ಚಿಸಿದ್ದೇನೆ" ಎಂದು ಚಿತ್ರದ ತಯಾರಿ ಕುರಿತು ಸಚಿನ್ ರವಿ ಅನುಭವ ವಿವರಿಸಿದರು.

ಇದನ್ನೂ ಓದಿ: 'ನಮ್‌‌ ಮನ್ಸು, ಒಳ್ಳೆದ್ ಮಾಡಿದ್ರೆ ದೇವ್ರು, ಏನಂತೀರಾ?': ನಾಳೆ ಸಿದ್ಲಿಂಗು ಸೀಕ್ವೆಲ್‌ ಮುಹೂರ್ತ

ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ ತಂಡದಲ್ಲಿ ಸಚಿನ್ ಬಿ.ರವಿ ಗುರುತಿಸಿಕೊಂಡಿದ್ದಾರೆ. ಸಂಕಲನಕಾರಾಗಿ, ಗ್ರಾಫಿಕ್ಸ್ ಪರಿಣಿತರಾಗಿ ಕೆಲಸ ನಿಭಾಯಿಸಿದ್ದಾರೆ. 'ಅವನೇ ಶ್ರೀಮನ್ನಾರಾಯಣ' ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದೀಗ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಸಚಿನ್ 'ಅಶ್ವತ್ಥಾಮನ‌' ಮೂಲಕ ಒಂದೊಳ್ಳೆ ಕಥೆ ಹೇಳಲಿದ್ದಾರೆ ಅನ್ನೋದು ಪ್ರೇಕ್ಷಕರ ನಿರೀಕ್ಷೆ. ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್​ಟೈನ್ಮೆಂಟ್ ನಿರ್ಮಾಣ ಮಾಡುತ್ತಿದೆ. ವಶು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್​ಶಿಕಾ ದೇಶ್​ಮುಖ್ ನಿರ್ಮಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಎದ್ದೇಳದ 'ರಂಗನಾಯಕ': ಪ್ರೇಕ್ಷಕರಲ್ಲಿ ಕ್ಷಮೆ ಯಾಚಿಸಿದ ನಟ ಜಗ್ಗೇಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.