ETV Bharat / entertainment

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೋರಿಂಗ್​ ಸ್ಟಾರ್: 'ಬಘೀರ' ರಿಲೀಸ್​​ ಡೇಟ್​ ಅನೌನ್ಸ್ - Bagheera release date - BAGHEERA RELEASE DATE

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಬಘೀರ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

Bagheera Poster
ಬಘೀರ ಪೋಸ್ಟರ್ (Social media)
author img

By ETV Bharat Karnataka Team

Published : Sep 11, 2024, 8:04 PM IST

'ಮದಗಜ' ಚಿತ್ರದ ಬಳಿಕ ಸ್ಯಾಂಡಲ್​ವುಡ್​ನ ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಶ್ರೀಮುರಳಿ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ 'ಬಘೀರ'. ಚಿತ್ರದ ಟೈಟಲ್ ಹಾಗೂ ಟೀಸರ್​​ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಬಘೀರ ಚಿತ್ರತಂಡದಿಂದ ಗುಡ್ ನ್ಯೂಸ್ ಬಂದಿದೆ. ಹೌದು, ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

ಬಘೀರ ಸಿನಿಮಾಗೆ ಬ್ಲಾಕ್​ಬಸ್ಟರ್ ಕೆಜಿಎಫ್​ ಕ್ಯಾತಿಯ ನಿರ್ದೇಶಕ ಪ್ರಶಾಂತ್‌ ನೀಲ್‌ ಕಥೆ ಬರೆದಿದ್ದಾರೆ. ಲಕ್ಕಿ ಸಿನಿಮಾ ಬಳಿಕ ಡಾ.ಸೂರಿ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಕಳೆದ ವರ್ಷ ಸೆಟ್ಟೇರಿದ ಬಘೀರ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತಾ ಶ್ರೀಮುರಳಿ ಅಭಿಮಾನಿಗಳಲ್ಲಿ ಪ್ರಶ್ನೆಯೊಂದು ಕಾಡುತ್ತಿತ್ತು. ಈಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟೀಸರ್​ನಿಂದಲೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ಬಘೀರ ಇದೇ ವರ್ಷ ಅಕ್ಟೊಬರ್ 31ಕ್ಕೆ ವಿಶ್ವದ್ಯಾಂತ ಬಿಡುಗಡೆ ಆಗಲಿದೆ.

ಇತ್ತೀಚೆಗಷ್ಟೇ ಬಘೀರ ಚಿತ್ರದ ಆ್ಯಕ್ಷನ್‌ ಸನ್ನಿವೇಶ ಚಿತ್ರೀಕರಣದ ವೇಳೆ ಶ್ರೀಮುರಳಿ ಪೆಟ್ಟು ಮಾಡಿಕೊಂಡಿದ್ದರು. ಆ್ಯಕ್ಷನ್‌ ಸೀಕ್ವೆನ್ಸ್‌ ಮಾಡುವಾಗ ಶ್ರೀಮುರಳಿ ಮೇಲಿಂದ ಬಿದ್ದು ಹಿಮ್ಮಡಿಗೆ ಪೆಟ್ಟು ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದರು.

ಇದನ್ನೂ ಓದಿ: ದುಬೈನಲ್ಲಿ ಈ ಜಾಕೆಟ್ ಖರೀದಿಸಿದ್ದೇಕೆ ಗಣಿ; GF ಅನ್ನೋದರಲ್ಲೇ ಇದೆ ಅದರ ಗುಟ್ಟು - Ganesh Jacket Secret

ಶ್ರೀಮುರಳಿಗೆ ಜೋಡಿಯಾಗಿ ರುಕ್ಮಿಣಿ ವಸಂತ್‌ ಅಭಿನಯಿಸುತ್ತಿದ್ದಾರೆ. ಇವರ ಜೊತೆ ಪ್ರಕಾಶ್‌ ರಾಜ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಗರುಡ ರಾಮ್‌ ಮುಖ್ಯ ತಾರಾಗಣದಲ್ಲಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ, ಎ.ಜೆ ಶೆಟ್ಟಿ ಛಾಯಾಗ್ರಹಣ, ಪ್ರಣವ್‌ ಶ್ರೀ ಪ್ರಸಾದ್‌ ಸಂಕಲನ ಈ ಚಿತ್ರಕ್ಕಿದೆ.

ಇದನ್ನೂ ಓದಿ: ನಾಳೆ "ರಾನಿ" ಸಿನಿಮಾ ಬಿಡುಗಡೆ: ನಿನ್ನೆ ಅಪಘಾತಕ್ಕೊಳಗಾದ ಕಿರಣ್ ರಾಜ್, ಇಂದು ಹೇಗಿದ್ದಾರೆ? - Kiran Raj Accident

ಹಿಟ್​​ ಚಿತ್ರಗಳನ್ನು ಕೊಟ್ಟಿರುವ ಹೊಂಬಾಳೆ ಫಿಲ್ಮ್ ಸಂಸ್ಥೆ ಬಘೀರ ಸಿನಿಮಾವನ್ನು ಬಹಳ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಡಾ.ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಶ್ರೀಮುರಳಿ ಎರಡು ಶೇಡ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಅಭಿಮಾನಿ ಬಳಗದಲ್ಲಿ ಈಗಾಗಲೇ ದೊಡ್ಡ ಮಟ್ಟದ ಕುತೂಹಲ, ನಿರೀಕ್ಷೆ ಹುಟ್ಟಿದೆ. ಈ ಚಿತ್ರ ಶ್ರೀಮುರಳಿಗೆ ಎಷ್ಟರ ಮಟ್ಟಿಗೆ ಸಕ್ಸಸ್ ತಂದು ಕೊಡುತ್ತದೆ ಅನ್ನೋದು ಅಕ್ಟೋಬರ್ 31ರಂದು ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.