ಒಟಿಟಿಗಳಲ್ಲಿ ಕನ್ನಡ ಸಿನಿಮಾಗಳನ್ನು ಸೂಕ್ತ ಬೆಲೆ ಕೊಟ್ಟು ಖರೀದಿಸುವುದಿಲ್ಲ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿವೆ. ಅಷ್ಟೇ ಅಲ್ಲ, ಸ್ಟಾರ್ ನಟರ ಚಿತ್ರಗಳನ್ನು ಹೊರತುಪಡಿಸಿದರೆ ಬೇರಾವುದೇ ಸಿನಿಮಾಗಳನ್ನೂ ಅವರು ಖರೀದಿಸುವುದಿಲ್ಲ ಎಂಬ ದೂರುಗಳೂ ಇವೆ. ಈ ವಿಚಾರ ನಟ, ನಿರ್ದೇಶಕ ಹಾಗು ನಿರ್ಮಾಪಕ ರಿಷಬ್ ಶೆಟ್ಟಿ ಅವರಿಗೂ ಅನುಭವ ಆದಂತಿದೆ.
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದ ಬಳಿಕ ದೊಡ್ಡ ವೆಚ್ಚದಲ್ಲಿ ನಿರ್ಮಾಣವಾಗಿರುವ ಲಾಫಿಂಗ್ ಬುದ್ಧ ಬಿಡುಗಡೆಯ ಹೊಸ್ತಿಲಲ್ಲಿದೆ. ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಭರತ್, ನಟ ಪ್ರಮೋದ್ ಶೆಟ್ಟಿ, ನಟಿ ತೇಜು ಬೆಳವಾಡಿ ಹಾಗು ರಿಷಬ್ ಶೆಟ್ಟಿ ಉಪಸ್ಥಿತರಿದ್ದರು. ಈ ಲಾಫಿಂಗ್ ಬುದ್ದ ಒಳ್ಳೆಯ ಕಂಟೆಂಟ್ ಇರುವ ಸಿನಿಮಾ ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದರು.
ಮುಂದುವರೆದು ಮಾತನಾಡಿದ ಅವರು, ಒಟಿಟಿ ಪ್ಲಾಟ್‌ಫಾರಂ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದರು. ಒಟಿಟಿಗಳಲ್ಲಿ ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳಿಗೆ ಬೆಲೆ ಇಲ್ಲ. ನಮ್ಮ ಲಾಫಿಂಗ್ ಬುದ್ದ ಸಿನಿಮಾವನ್ನು ಒಟಿಟಿಯವರು ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ: ಎಲ್ಲವೂ 'ಪೌಡರ್'ಮಯ: ದಿಗಂತ್, ಧನ್ಯಾ, ಶರ್ಮಿಳಾ ಚಿತ್ರದ ಟ್ರೇಲರ್ ನೋಡಿ - Powder Trailer
ಹೀಗಾಗಿ, 'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಹೊಂದಿರುವ ರಿಷಬ್ ಶೆಟ್ಟಿ ಅವರಂಥ ನಟರ ಸಿನಿಮಾಗಳಿಗೆ ಬೆಲೆ ಇಲ್ಲಾ ಅಂದ್ರೆ ಹೊಸ ಕನಸು ಹೊತ್ತು ಬರುವ ಹೊಸ ಪ್ರತಿಭೆಗಳ ಕಥೆಯೇನು ಅನ್ನೋದು ಗಾಂಧಿನಗರದ ಮಂದಿಯ ಪ್ರಶ್ನೆ.
ಇದನ್ನೂ ಓದಿ: ಚಿತ್ರಮಂದಿರಗಳಿಗೆ ಪ್ರೇಕ್ಷಕರು ಯಾಕೆ ಬರಬೇಕು?: ನಟ ಕಿರಣ್ ರಾಜ್ ಕೊಟ್ಟ ಉತ್ತರ ಹೀಗಿದೆ - Come To Theatres