ETV Bharat / entertainment

ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಿಷಬ್​ ಶೆಟ್ಟಿ: ಹುಟ್ಟೂರಿನ ಶಾಲೆ ಅಭಿವೃದ್ಧಿ ಮಾಡೋಣವೆಂದ ಡಿವೈನ್​ ಸ್ಟಾರ್​ - Rishab shetty Independence Day - RISHAB SHETTY INDEPENDENCE DAY

ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಕಳೆದ ದಿನ ತಮ್ಮೂರಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಹಂಚಿಕೊಂಡ ಕಾಂತಾರ ಸ್ಟಾರ್, ''ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆರಾಡಿ. ನಮ್ಮ ಶಾಲೆಯ ಸ್ವಾತಂತ್ರ್ಯ ದಿನಾಚರಣೆ'' ಎಂದು ಬರೆದುಕೊಂಡಿದ್ದಾರೆ.

Rishab shetty
ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ (ANI)
author img

By ETV Bharat Karnataka Team

Published : Aug 16, 2024, 1:16 PM IST

'ಕಾಂತಾರ'. ವಿಶೇಷ ಪರಿಚಯ ಬೇಕೆನಿಸದು. ಕನ್ನಡ ಚಿತ್ರರಂಗದ ಬ್ಲಾಕ್​ಬಸ್ಟರ್ ಸಿನಿಮಾ. ಈ​ ಚಿತ್ರದ ಮೂಲಕ ಜನಮನ್ನಣೆ ಹೆಚ್ಚಿಸಿಕೊಂಡಿರುವ ಡಿವೈನ್​ ಸ್ಟಾರ್​ ಖ್ಯಾತಿಯ ರಿಷಬ್​ ಶೆಟ್ಟಿ ಅವರು ಗುರುವಾರ ತಮ್ಮ ಹುಟ್ಟೂರಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗಿಯಾಗಿದ್ದಾರೆ.

ಕಾಂತಾರ ಚಾಪ್ಟರ್​-1 ಸಿನಿಮಾ ಕೆಲಸ ಸಲುವಾಗಿ ಸ್ಯಾಂಡಲ್​ವುಡ್​ನ ಜನಪ್ರಿಯ ನಟ ರಿಷಬ್​ ಶೆಟ್ಟಿ ತಮ್ಮೂರಲ್ಲೇ ಇದ್ದಾರೆ. ಇದೀಗ ಕೆರಾಡಿಯ ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಭಾಗಿಯಾಗಿದ್ದರು. ಆಚರಣೆಯ ವಿಡಿಯೋವನ್ನೀಗ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ರಿಷಬ್​ ಶೆಟ್ಟಿ ಪೋಸ್ಟ್​​: 78ನೇ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ ಹಂಚಿಕೊಂಡ ನಟ - ನಿರ್ದೇಶಕ - ನಿರ್ಮಾಪಕ, ''ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆರಾಡಿ. ನಮ್ಮ ಶಾಲೆಯ ಸ್ವಾತಂತ್ರ್ಯ ದಿನಾಚರಣೆ'' ಎಂಬ ಕ್ಯಾಪ್ಷನ್​​ ಕೊಟ್ಟಿದ್ದಾರೆ.

ವಿಡಿಯೋದಲ್ಲೇನಿದೆ? ಶಾಲಾ ಬಸ್​​ನಿಂದ ಮಕ್ಕಳು ಇಳಿಯುವ ದೃಶ್ಯದೊಂದಿಗೆ ವಿಡಿಯೋ ಆರಂಭವಾಗುತ್ತದೆ. ನಂತರ, ಶಾಲಾ ಕೊಠಡಿಯಲ್ಲಿರುವ ರಿಷಬ್​ ಅವರ ದೃಶ್ಯ ಕಂಡುಬಂದಿದ್ದು, ಹಿನ್ನೆಲೆಯಲ್ಲಿ ರಿಷಬ್​ ಅವರ ದನಿ ಕೇಳಿಬರುತ್ತದೆ. ನಾವೆಲ್ಲಾ ಇಂದು ಸೇರಿದ್ದೇವೆ. ನಮ್ಮ ಶಾಲೆ. ಮತ್ತೆ ಇಷ್ಟೊಂದು ಮಕ್ಕಳನ್ನು ಸಮವಸ್ತ್ರದಲ್ಲಿ ಕಂಡು ಬಹಳಷ್ಟು ಖುಷಿ ಆಯಿತು ಎಂದು ತಿಳಿಸಿದ್ದಾರೆ.

ನಂತರ ಧ್ವಜಾರೋಹಣ ಮಾಡಿ, ನಾನು ಇಲ್ಲಿಗೆ ಹೊಸಬನೇನಲ್ಲ. ಹಳೇ ವಿದ್ಯಾರ್ಥಿ. ನಾವೆಲ್ಲರೂ ಸೇರಿ ಈ ಶಾಲೆಯನ್ನು ಇನ್ನೂ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡೋಣ ಎಂದು ತಿಳಿಸಿದ್ದಾರೆ. ವಿಡಿಯೋ ಕೊನೆಯಲ್ಲಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಜೈ ಹಿಂದ್,​ ಜೈ ಕರ್ನಾಟಕ ಮಾತೆ ಎಂದು ತಿಳಿಸಿದ್ದಾರೆ.

ರಿಷಬ್​ ಶೆಟ್ಟಿಯವರು ಭಾರತೀಯ ಚಿತ್ರರಂಗದಾದ್ಯಂತ ಹೆಸರು ಮಾಡಿದ್ದಾರೆ. ಆದರೂ ತಾನು ಕಲಿತ ಶಾಲೆ, ನಮ್ಮೂರ ಶಾಲೆ ಎಂಬ ಅಭಿಮಾನದಿಂದ ಈ ಶಾಲೆಯ ಅಭಿವೃದ್ಧಿಯಲ್ಲಿ ಕೈ ಜೋಡಿಸಿದ್ದಾರೆ ಎಂದು ಶಾಲಾ ಶಿಕ್ಷಕರೊಬ್ಬರು ಹೇಳಿರುವುದನ್ನು ಈ ವಿಡಿಯೋದಲ್ಲಿ ಕೇಳಬಹುದು.

ಗುರುವಾರ ಸಂಜೆ ಫೋಟೋಗಳನ್ನು ಹಂಚಿಕೊಂಡಿದ್ದ ನಟ, ''ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು'' ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: 'ಹೋರಾಟಗಳು ನೂರೆಂಟು, ಸ್ವಾತಂತ್ರ್ಯಕ್ಕೆ ವರುಷ ಎಪ್ಪತ್ತೆಂಟು': ಕಿಚ್ಚ ಸೇರಿ ಸೆಲೆಬ್ರಿಟಿಗಳ ಶುಭಾಶಯ - Celebrities Independence Day Wishes

ಸದ್ಯ ನಟನ ಈ ಫೋಟೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಯೋರ್ವರು ಪ್ರತಿಕ್ರಿಯಿಸಿ, 'ನಮ್ ಶೆಟ್ರ್ ನಮ್ ಹೆಮ್ಮೆ' ಎಂದು ಬರೆದುಕೊಂಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, 'ಎಷ್ಟೇ ಎತ್ತರಕ್ಕೆ ಬೆಳೆದರೂ ನಾವು ನಮ್ಮ ಹಿಂದಿನ ದಿನಗಳನ್ನು ಮರೆಯಬಾರದು ಎಂದು ತಿಳಿಸಿಕೊಟ್ರಿ' ಎಂದು ಹೇಳಿದ್ದಾರೆ. 'ಇದು ನಿಜವಾದ ಕನ್ನಡ ಪ್ರೀತಿ' ಎಂದಿದ್ದಾರೆ.

ಇದನ್ನೂ ಓದಿ: 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಮುಹೂರ್ತ ಫಿಕ್ಸ್: ರಕ್ಷಿತ್​ ಶೆಟ್ಟಿ ನಿರ್ಮಾಣದ ಚಿತ್ರ ನೋಡಲು ಅಭಿಮಾನಿಗಳ ಕಾತರ - Ibbani Tabbida Ileyali

ಸದ್ಯ ರಿಷಬ್​ ಅವರ 'ಲಾಫಿಂಗ್​ ಬುದ್ಧ' ಸಿನಿಮಾವು ಬಿಡುಗಡೆ ಹೊಸ್ತಿಲಿನಲ್ಲಿದೆ. ರಿಷಬ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಮೋದ್​​ ಶೆಟ್ಟಿ ನಾಯಕನ ಪಾತ್ರ ವಹಿಸಿದ್ದಾರೆ. ಕಳೆದ ದಿನವಷ್ಟೇ ಟ್ರೇಲರ್​ ಅನಾವರಣಗೊಂಡಿದ್ದು, ಇದೇ ತಿಂಗಳ​​ 30ರಂದು ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.