ETV Bharat / entertainment

ಯುಐ, ಮ್ಯಾಕ್ಸ್​​ ಯಶಸ್ಸಿನೊಂದಿಗೆ ಸ್ಯಾಂಡಲ್​ವುಡ್‌ನ 2024 ಪೂರ್ಣ​: ರಿಯಲ್ ಸ್ಟಾರ್​ ಸಿನಿಮಾ ಗಳಿಸಿದ್ದಿಷ್ಟು - UI COLLECTION

ಡಿಸೆಂಬರ್​​ 20ರ​ ಶುಕ್ರವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾದ 'ಯುಐ' ಸಿನಿಮಾದ ಬಾಕ್ಸ್​ ಆಫೀಸ್​ ಮಾಹಿತಿ ಇಲ್ಲಿದೆ.

real star upendra
ರಿಯಲ್​ ಸ್ಟಾರ್​ ಉಪೇಂದ್ರ (Photo: ETV Bharat)
author img

By ETV Bharat Entertainment Team

Published : Dec 31, 2024, 4:24 PM IST

ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ 'ಬುದ್ಧಿವಂತ ನಟ-ನಿರ್ದೇಶಕ'ನೆಂದು ಗುರುತಿಸಿಕೊಂಡ ರಿಯಲ್​ ಸ್ಟಾರ್ ಉಪೇಂದ್ರ ಸಾರಥ್ಯದಲ್ಲಿ ತೆರೆಗೆ ಬಂದ 'ಯುಐ' ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ಸ್ವೀಕರಿಸಿದೆ. ಕನ್ನಡ ಮಾತ್ರವಲ್ಲ, ದಕ್ಷಿಣ ಚಿತ್ರರಂಗದಲ್ಲಿ ಬಹುನಿರೀಕ್ಷೆಯ ಸಿನಿಮಾವಾಗಿ ಸಖತ್​​ ಸದ್ದು ಮಾಡಿದ್ದ ಚಿತ್ರ ಡಿಸೆಂಬರ್​​ 20ರ​ ಶುಕ್ರವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಸಿನಿಪ್ರಿಯರಿಂದ ಬಹುತೇಕ ಮೆಚ್ಚುಗೆ ಸ್ವೀಕರಿಸಿದ ಈ ಸಿನಿಮಾ ಬಾಕ್ಸ್​ ಆಫೀಸ್​​ನಲ್ಲೂ ಕಮಾಲ್​ ಮಾಡಿದೆ.

ಯುಐ ಬಾಕ್ಸ್​ ಆಫೀಸ್​ ಕಲೆಕ್ಷನ್​​​:

ದಿನ

ಇಂಡಿಯಾ ನೆಟ್​ ಕಲೆಕ್ಷನ್​​

ಮೊದಲ ದಿನ (ಶುಕ್ರವಾರ)6.95 ಕೋಟಿ ರೂಪಾಯಿ.
ಎರಡನೇ ದಿನ (ಶನಿವಾರ) 5.6 ಕೋಟಿ ರೂಪಾಯಿ.
ಮೂರನೇ ದಿನ (ಭಾನುವಾರ)5.95 ಕೋಟಿ ರೂಪಾಯಿ.
ನಾಲ್ಕನೇ ದಿನ (ಸೋಮವಾರ)2.3 ಕೋಟಿ ರೂಪಾಯಿ.
ಐದನೇ ದಿನ (ಮಂಗಳವಾರ)2.1 ಕೋಟಿ ರೂಪಾಯಿ.
ಆರನೇ ದಿನ (ಬುಧವಾರ)2.35 ಕೋಟಿ ರೂಪಾಯಿ.
ಏಳನೇ ದಿನ (ಗುರುವಾರ)1.05 ಕೋಟಿ ರೂಪಾಯಿ.
ಎಂಟನೇ ದಿನ (ಶುಕ್ರವಾರ) 0.95 ಕೋಟಿ ರೂಪಾಯಿ.
ಒಂಭತ್ತನೇ ದಿನ (ಶನಿವಾರ)1.05 ಕೋಟಿ ರೂಪಾಯಿ.
ಹತ್ತನೇ ದಿನ (ಭಾನುವಾರ)1.15 ಕೋಟಿ ರೂಪಾಯಿ.
ಹನ್ನೊಂದನೇ ದಿನ (ಸೋಮವಾರ)0.65 ಕೋಟಿ ರೂಪಾಯಿ.
ಒಟ್ಟು30.10 ಕೋಟಿ ರೂಪಾಯಿ.

(ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್).

ಸುದೀಪ್​ ಮ್ಯಾಕ್ಸ್​ ಕಲೆಕ್ಷನ್​ ಎಷ್ಟು?

ದಿನಕಲೆಕ್ಷನ್
ಮೊದಲ ದಿನ (ಬುಧವಾರ)8.7 ಕೋಟಿ ರೂಪಾಯಿ.
ಎರಡನೇ ದಿನ (ಗುರುವಾರ)3.85 ಕೋಟಿ ರೂಪಾಯಿ.
ಮೂರನೇ ದಿನ (ಶುಕ್ರವಾರ)4.7 ಕೋಟಿ ರೂಪಾಯಿ.
ನಾಲ್ಕನೇ ದಿನ (ಶನಿವಾರ)4.75 ಕೋಟಿ ರೂಪಾಯಿ.
ಐದನೇ ದಿನ (ಭಾನುವಾರ)5.65 ಕೋಟಿ ರೂಪಾಯಿ.
ಆರನೇ ದಿನ (ಸೋಮವಾರ)2.50 ಕೋಟಿ ರೂಪಾಯಿ.
ಒಟ್ಟು30.15 ಕೋಟಿ ರೂಪಾಯಿ.

ಮನಃಶಾಂತಿಯೇ ನಿಜವಾದ ಸಂತೋಷ- ಉಪೇಂದ್ರ: ಇತ್ತೀಚೆಗೆ ಮಾತನಾಡಿದ್ದ ಉಪೇಂದ್ರ, "ಹೇಳುವ ಪ್ರಯತ್ನ ನನ್ನದು. ಎಚ್ಚೆತ್ತುಕೊಳ್ಳುವುದು ಜನರಿಗೆ ಬಿಟ್ಟಿದ್ದು. ಇಲ್ಲಿ ಸಮಾಜ ಎನ್ನುವುದಕ್ಕಿಂತ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸರಿಯಾಗಿ ಮಾಡಿಕೊಂಡರೆ, ಸಮಸ್ಯೆಗಳೇ ಇರುವುದಿಲ್ಲ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು. ಇದೊಂದು ಸ್ಪರ್ಧಾತ್ಮಕ ಜಗತ್ತು. ಹೀಗೆ ಮಾಡಿದರೆ ಸಂತೋಷ ಸಿಗುತ್ತದೆ ಎಂದು ನಮಗೆ ಬಲವಾಗಿ ಹೇಳಿಕೊಟ್ಟುಬಿಟ್ಟಿದ್ದಾರೆ. ನಾನು ಅವನಿಗಿಂತ ಮೇಲೆ ಬೆಳೆದರೆ ಸಂತೋಷ ಸಿಗುತ್ತದೆ ಎಂದು ನಾವು ಬಲವಾಗಿ ನಂಬಿಕೊಂಡಿದ್ದೇವೆ. ಮೇಲೆ ಬೆಳೆದವನನ್ನು ಕೇಳಿ, ಅವರು ಸಂತೋಷವಾಗಿದ್ದಾರಾ? ಎಂದು. ಪ್ರಪಂಚದಲ್ಲಿ ನಂಬರ್ ಒನ್‍ ಸ್ಥಾನದಲ್ಲಿರುವವನು ಸಂತೋಷವಾಗಿರುವುದಿಲ್ಲ. ಏಕೆಂದರೆ, ಸಂತೋಷ ಎನ್ನುವುದು ಒಳಗಿದೆ. ಮನಃಶಾಂತಿ ಎನ್ನುವುದೇ ನಿಜವಾದ ಸಂತೋಷ" ಎಂದು ಹೇಳಿದ್ದರು.

ಇದನ್ನೂ ಓದಿ: ದರ್ಶನ್​​ಗೂ ನಂಗೂ ಯಾವುದೇ ಸಮಸ್ಯೆಯಿಲ್ಲ: 'ಬಾಸಿಸಮ್​​ ಕೇಕ್​' ವಿವಾದದ ಬಗ್ಗೆ ಸುದೀಪ್​ ಸ್ಪಷ್ಟನೆ

"ಒಬ್ಬ ಹುಡುಗನಿಗೆ ಯಶಸ್ಸು ಎಂದರೆ ಹೀಗೆ, ಸಂತೋಷ ಎಂದರೆ ಹೀಗೆ ಎಂದು ತಲೆಗೆ ತುಂಬಿಸಿ ಕಳಿಸಿದರೆ, ಅವನು ಅದೇ ಸಂತೋಷ ಎಂದು ನಂಬಿಕೊಳ್ಳುತ್ತಾನೆ. ಅದರ ಬದಲು ನಿನಗೆ ಯಾವುದರಲ್ಲಿ ಸಂತೋಷ ಸಿಗುತ್ತದೆ ಎಂದು ಕೇಳಿ. ಒಬ್ಬೊಬ್ಬರಿಗೆ ಒಂದೊಂದು ವಿಷಯದಲ್ಲಿ ಸಂತೋಷ ಸಿಗುತ್ತದೆ. ಒಬ್ಬರಿಗ ನೃತ್ಯದಲ್ಲಿ ಸಿಗಬಹುದು. ಇನ್ನೊಬ್ಬರಿಗೆ ಪೇಂಟಿಂಗ್​​​ನಲ್ಲಿ ಸಿಗಬಹುದು. ಮತ್ತೊಬ್ಬರಿಗೆ ಮತ್ತ್ಯಾವುದೋ ವಿಷಯದಲ್ಲಿ ಸಿಗಬಹುದು. ಆದರೆ, ನಾವು ಅವರ ಮೇಲೆ ಒತ್ತಡ ಹಾಕಿ ಇದೇ ಸಂತೋಷ ಎಂದು ನಂಬಿಸುವುದರ ಜೊತೆಗೆ, ಅವರ ನಿಜವಾದ ಸಂತೋಷವನ್ನು ಹಾಳು ಮಾಡುತ್ತಿದ್ದೇವೆ. ನಾವು ನಮ್ಮ ಸಂತೋಷವನ್ನು ಅನುಭವಿಸಬೇಕೇ ಹೊರತು, ಬೇರೆಯವರ ಸಂತೋಷವನ್ನು ಅನುಭವಿಸುವುದಕ್ಕೆ ಸಾಧ್ಯವೇ ಇಲ್ಲ. ಸಂತೋಷದಲ್ಲೂ ಬೇರೆಬೇರೆ ವಿಧಗಳಿವೆ. ಹಾಗಾಗಿ, ಸಂತೋಷ ಎನ್ನುವುದಕ್ಕಿಂತ ಮನಃಶಾಂತಿ ಮುಖ್ಯ" ಎಂದು ಉಪೇಂದ್ರ ತಿಳಿಸಿದ್ದರು.

ಇದನ್ನೂ ಓದಿ: ಕಳೆದ ಜನ್ಮದಿನದಂದು ನಡೆದಿತ್ತು ದುರಂತ!: 'ಈ ಬಾರಿ ನನ್ನ ಮನಸ್ಸಿಗೆ ನೋವು ಕೊಡಬೇಡಿ' ಎಂದ್ರು​ ಯಶ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.