ETV Bharat / entertainment

'ವಿಡಿ 12' ರಿಲೀಸ್​ ಡೇಟ್​​, ಫಸ್ಟ್​​ ಲುಕ್​​ ರಿವೀಲ್​​: ದೇವರಕೊಂಡ ಮೊದಲ ನೋಟ 'ಬೆಂಕಿ' ಎಂದ ರಶ್ಮಿಕಾ - Rashmika Mandanna On VD12 Poster - RASHMIKA MANDANNA ON VD12 POSTER

ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸ್ಪೈ ಆಕ್ಷನ್ ಥ್ರಿಲ್ಲರ್ 'ವಿಡಿ 12'ನ ಚಿತ್ರ ತಯಾರಕರಿಂದು ಸಿನಿಮಾದ ಫಸ್ಟ್​ ಲುಕ್​​ ಮತ್ತು ಬಿಡುಗಡೆ ದಿನಾಂಕ ಬಹಿರಂಗಪಡಿಸಿದ್ದಾರೆ.

VD12 Poster, Rashmika Mandanna
ವಿಡಿ 12 ಪೋಸ್ಟರ್, ರಶ್ಮಿಕಾ ಮಂದಣ್ಣ (Photo: Instagram/Vijay Deverakonda, ANI)
author img

By ETV Bharat Entertainment Team

Published : Aug 2, 2024, 6:31 PM IST

ದಕ್ಷಿಣ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್​​ ಮಾಡಿಕೊಂಡಿರುವ ನಟ ವಿಜಯ್ ದೇವರಕೊಂಡ ಸ್ಪೈ ಆ್ಯಕ್ಷನ್ ಥ್ರಿಲ್ಲರ್‌ಗೆ ಸಜ್ಜಾಗಿದ್ದಾರೆ. ಈ ಚಿತ್ರವನ್ನು ತಾತ್ಕಾಲಿಕವಾಗಿ 'ವಿಡಿ 12' ಎಂದು ಹೆಸರಿಸಲಾಗಿದ್ದು, ಗೌತಮ್ ತಿನ್ನನೂರಿ ನಿರ್ದೇಶಿಸುತ್ತಿದ್ದಾರೆ. ಇಂದು ನಿರ್ಮಾಪಕರು ವಿಡಿ 12ರ ಬಿಡುಗಡೆಯ ದಿನಾಂಕ ಮತ್ತು ನಟನ ಫಸ್ಟ್​​ ಲುಕ್​​ ಅನಾವರಣಗೊಳಿಸಿದರು. ಮೊದಲ ನೋಟ ರಿಲೀಸ್‌ ಆಗುತ್ತಿದ್ದಂತೆ ನಾಯಕ ನಟ ವಿಜಯ್ ದೇವರಕೊಂಡ ಅವರ ರೂಮರ್​​ ಗರ್ಲ್​​​ಫ್ರೆಂಡ್​​​ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ.

Vijay Deverakonda's IG post
ವಿಜಯ್ ದೇವರಕೊಂಡ ಇನ್​ಸ್ಟಾಗ್ರಾಮ್​ ಪೋಸ್ಟ್​, ರಶ್ಮಿಕಾ ಕಾಮೆಂಟ್ (Vijay Deverakonda's IG post)

ಚಿತ್ರದ ಫಸ್ಟ್ ಲುಕ್​​​​, 'ವಿಡಿ 12' ಚಿತ್ರದಲ್ಲಿ ವಿಜಯ್​ ದೇವರಕೊಂಡ ಹೇಗಿರಲಿದ್ದಾರೆ ಎಂಬುದರ ಸುಳಿವು ಬಿಟ್ಟುಕೊಟ್ಟಿದೆ. ವಿಜಯ್ ರಗಡ್​ ಲುಕ್​​​​​ನಲ್ಲಿ ಕಾಣಿಸಿಕೊಂಡಿದ್ದು, ಒರಟಾದ ವ್ಯಕ್ವಿತ್ವದಂತೆ ತೋರುತ್ತಿದೆ. ಶಾರ್ಟ್​ ಹೇರ್, ದಟ್ಟವಾದ ಗಡ್ಡದ ನೋಟ ಹೊಂದಿರುವ ವಿಜಯ್ ಪಾತ್ರದ ಸುತ್ತಲಿನ ಕುತೂಹಲ ಕೆರಳಿಸಿದೆ. ಆ್ಯಕ್ಷನ್-ಪ್ಯಾಕ್ಡ್ ಚಿತ್ರದಲ್ಲಿ ನಟನ ಸಂಪೂರ್ಣ ನೋಟ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ ಪೋಸ್ಟ್ ಶೇರ್ ಮಾಡಿ ವಿಜಯ್, 'ಅವನ ಡೆಸ್ಟಿನಿ ಅವನಿಗಾಗಿ ಕಾಯುತ್ತಿದೆ. ತಪ್ಪುಗಳು, ರಕ್ತಪಾತ, ಪ್ರಶ್ನೆಗಳು, ಮರುಹುಟ್ಟು. 28 ಮಾರ್ಚ್, 2025. ವಿಡಿ12' ಎಂದು ಬರೆದುಕೊಂಡಿದ್ದಾರೆ. ಮುಂದಿನ ವರ್ಷ ಮಾರ್ಚ್​ 28ರಂದು ಸಿನಿಮಾ ತೆರೆಗಪ್ಪಳಿಸಲಿದೆ ಎಂದು ತಿಳಿಸಿರುವ ವಿಜಯ್ ದೇವರಕೊಂಡ ಅವರ ಈ ಪೋಸ್ಟ್​​ಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರತಿಕ್ರಿಯಿಸಿದ್ದಾರೆ. ಕೈಗಳು ಮತ್ತು ಫೈಯರ್​​ ಎಮೋಜಿಯನ್ನು ಪೋಸ್ಟ್​​ನ ಕಾಮೆಂಟ್​​ ಸೆಕ್ಷನ್​​ಗೆ ಹಾಕಿದ್ದಾರೆ.

ಮೂಲತಃ ಕನ್ನಡದವರಾದ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್​ ಸ್ಟಾರ್​​ ಹೀರೋ ವಿಜಯ್​ ದೇವರಕೊಂಡ ರಿಲೇಶನ್​ಶಿಪ್​​​ನಲ್ಲಿದ್ದಾರೆ ಎಂಬುದು ದೀರ್ಘಕಾಲದ ವದಂತಿ. ಈ ಊಹಾಪೋಹಗಳಿಗೆ ಪೂರಕವೆಂಬಂತೆ ಕೆಲ ಫೋಟೋ, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​​ ಆಗುತ್ತವೆಯಾದರೂ, ಈ ಇಬ್ಬರು ಮಾತ್ರ ಮೌನ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಸಿದ್ದಗಂಗಾ ಮಠಕ್ಕೆ ಧ್ರುವ ಸರ್ಜಾ ಭೇಟಿ: ನಟನ ನೋಡಲು ಮುಗಿಬಿದ್ದ ಫ್ಯಾನ್ಸ್- ವಿಡಿಯೋ - Dhruva Sarja

2025ರ ಮಾರ್ಚ್ 28ರಂದು ವಿಡಿ12 ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ ಎಂದು ಚಿತ್ರ ತಯಾರಕರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳೀಗ ಅಧಿಕೃತ ಶೀರ್ಷಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಕೆಲ ದೃಶ್ಯಗಳನ್ನು ಶ್ರೀಲಂಕಾದಲ್ಲಿ ಚಿತ್ರೀಕರಿಸಲಾಗಿದೆ. ಸೆಟ್‌ನಿಂದ ವೈರಲ್​ ಆಗಿರುವ ಫೋಟೋಗಳು ವಿಜಯ್​ ದೇವರಕೊಂಡರನ್ನು ಮಾಸ್​​​​ ಲುಕ್​ನಲ್ಲಿ ತೋರಿಸಿದೆ.

ಇದನ್ನೂ ಓದಿ: ಕನ್ನಡದ ಹಾಡನ್ನು ಕನ್ನಡ ಚಿತ್ರಗಳಲ್ಲಿ ಬಳಸಬಾರದೇ?: ರಕ್ಷಿತ್ ಶೆಟ್ಟಿ - Rakshit Shetty

ವಿಜಯ್​ ಹೊರತುಪಡಿಸಿ ಇತರೆ ನಟರ ಹೆಸರುಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಹೀಗಿದ್ದರೂ ಭಾಗ್ಯಶ್ರೀ ಬೋರ್ಸೆ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂದು ವರದಿಗಳು ಸೂಚಿಸಿವೆ. ಅಧಿಕೃತ ಘೋಷಣೆಯಾದರೆ ಇದು ಟಾಲಿವುಡ್‌ನಲ್ಲಿ ಅವರ ಎರಡನೇ ಚಿತ್ರವಾಗಲಿದೆ. ಹೆಸರಾಂತ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.