ETV Bharat / entertainment

ಬಾಲಿವುಡ್​ನ ಹಾರರ್ ಕಾಮಿಡಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ: ಆಯುಷ್ಮಾನ್ ಖುರಾನಾ ಜೊತೆ ಸ್ಕ್ರೀನ್​ ಶೇರ್ - Rashmika Mandanna Bollywood Movie - RASHMIKA MANDANNA BOLLYWOOD MOVIE

ಬಹುಭಾಷೆಗಳಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಮಂದಣ್ಣ ಕೆಲ ದಿನಗಳ ಹಿಂದಷ್ಟೇ ಸೂಪರ್ ಸ್ಟಾರ್ ಆಯುಷ್ಮಾನ್​ ಖುರಾನಾ ಜೊತೆಗಿನ ಸಿನಿಮಾ ಘೋಷಿಸಿದ್ದರು. ಇದೀಗ ಆಯುಷ್ಮಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆಂದು ವರದಿಯಾಗಿದೆ.

Rashmika Mandanna, Ayushmann Khurrana
ರಶ್ಮಿಕಾ ಮಂದಣ್ಣ, ಆಯುಷ್ಮಾನ್ ಖುರಾನಾ (IANS)
author img

By ETV Bharat Karnataka Team

Published : Jun 25, 2024, 7:54 PM IST

ದಿನೇಶ್ ವಿಜನ್, ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಾಣ ಮಾಡೋ ಮೂಲಕ ಹೆಸರುವಾಸಿಯಾಗಿದ್ದಾರೆ. ನಿರ್ದೇಶಕರಾಗಿಯೂ ಮನರಂಜನಾ ಕ್ಷೇತ್ರದಲ್ಲಿ ತಮ್ಮ ಸೇವೆ ಮುಂದುವರಿಸಿದ್ದಾರೆ. 2018ರಲ್ಲಿ 'ಸ್ತ್ರೀ' ಸಿನಿಮಾ ನಿರ್ಮಾಣ ಮಾಡಿ ಹೆಸರುವಾಸಿಯಾದರು. ಈ ಹಾರರ್ ಕಾಮಿಡಿ ಸಿನಿಮಾ ಸಾಕಷ್ಟು ಜನಪ್ರಿಯವಾಗಿದೆ. ಇದರ ನಂತರ, ಭೇಡಿಯಾ ಮತ್ತು ಮುಂಜ್ಯ ಮೂಲಕ ತಮ್ಮ ಸಿನಿಕ್ಷೇತ್ರ, ಭಯಾನಕ ಮತ್ತು ಹಾಸ್ಯದೆಡೆಗೆ ನಟನೆಯನ್ನು ವಿಸ್ತರಿಸಿದರು.

ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ 2 ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 15 ರಂದು ಸಿನಿಮಾ ತೆರೆಗಪ್ಪಳಿಸಲಿದ್ದು, ಸಿನಿಪ್ರಿಯರು ಕಾತುರರಾಗಿದ್ದಾರೆ. ಇದೀಗ, ಹಾರರ್ ಡ್ರಾಮಾ ಯೂನಿವರ್ಸ್​ಗೆ 'ವಂಪೈರ್ಸ್ ಆಫ್ ವಿಜಯ್ ನಗರ್' ('Vampires of Vijay Nagar') ಸೇರ್ಪಡೆಯಾಗುತ್ತಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ಆದಿತ್ಯ ಸತ್ಪೋದರ್ ಅವರೊಂದಿಗೆ ದಿನೇಶ್ ವಿಜನ್ ಮತ್ತೊಮ್ಮೆ ಕೈ ಜೋಡಿಸುತ್ತಿದ್ದಾರೆ.

ವರದಿಗಳ ಪ್ರಕಾರ, ನಿರ್ಮಾಪಕ ದಿನೇಶ್ ವಿಜನ್ ಮತ್ತು ನಿರ್ದೇಶಕ ಆದಿತ್ಯ ಸತ್ಪೋದರ್ ಸಾರಥ್ಯದ ಹಾರರ್​ ಕಾಮಿಡಿ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. 2019ರ ಬಾಲಾ ಸಿನಿಮಾದಲ್ಲಿ ಆಯುಷ್ಮಾನ್ ಖುರಾನಾ ಮತ್ತು ದಿನೇಶ್ ವಿಜನ್ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸದ್ಯ ಈ ಸಿನಿಮಾಗಾಗಿ ಕೆಲ ಸಮಯದಿಂದ ಈ ನಟ-ನಿರ್ಮಾಪಕ ಜೋಡಿ ಚರ್ಚಿಸುತ್ತಿದ್ದಾರೆ. ಈ ವರ್ಷದ ಅಂತ್ಯದ ವೇಳೆಗೆ ಚಿತ್ರವನ್ನು ಆರಂಭಿಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಕತ್ರಿನಾ ಕೈಫ್​​ ಗರ್ಭಿಣಿಯೇ? ಮತ್ತೊಮ್ಮೆ ಹರಡಿತು ವದಂತಿ, ವೈರಲ್​​ ವಿಡಿಯೋ ನೋಡಿ - Katrina Kaif Pregnant Rumour

ಇತ್ತೀಚಿನ ಮುಂಜ್ಯ ಯಶಸ್ಸಿನ ನಂತರ, ಆದಿತ್ಯ ಸತ್ಪೋದರ್ ಮತ್ತು ದಿನೇಶ್ ವಿಜನ್ ಎರಡನೇ ಬಾರಿಯೂ ಹಾರರ್ ಸಿನಿಮಾಗೆ ಕೈ ಜೋಡಿಸಿದ್ದಾರೆ. ಇನ್ನು, ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಚೊಚ್ಚಲ ಚಿತ್ರ. ಚಿತ್ರದಲ್ಲಿ ಇಬ್ಬರೂ ನಟರು ವಿಶಿಷ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಿಗೆ ಆಶ್ಚರ್ಯ ಕಾದಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಸ್ಕ್ರಿಪ್ಟ್ ಕೆಲಸ ಸಾಗಿದೆ.

ಇದನ್ನೂ ಓದಿ: 28 ವರ್ಷಗಳ ನಂತರ ಬರ್ತಿದೆ ಕಮಲ್‌ ಹಾಸನ್‌ ನಟನೆಯ 'ಇಂಡಿಯನ್ 2'​​; ಸಂಜೆ 7ಕ್ಕೆ ಟ್ರೇಲರ್ ನೋಡಿ - Indian 2 Trailer

ಈ ಚಿತ್ರಾರಂಭಕ್ಕೂ ಮೊದಲು ನಾಯಕ ನಟ ಆಯುಷ್ಮಾನ್ ಖುರಾನಾ, ಅನುರಾಗ್ ಸಿಂಗ್ ನಿರ್ದೇಶನದ ಬಾರ್ಡರ್ 2 ಚಿತ್ರೀಕರಣವನ್ನು ಪ್ರಾರಂಭಿಸಬಹುದು. ಮತ್ತೊಂದೆಡೆ, ರಶ್ಮಿಕಾ ಮಂದಣ್ಣ ಅಲ್ಲು ಅರ್ಜುನ್ ಜೊತೆಗಿನ ಪುಷ್ಪ 2 ಮತ್ತು ಸಲ್ಮಾನ್ ಖಾನ್ ಜೊತೆಗಿನ ಸಿಖಂದರ್ ಚಿತ್ರೀಕರಣವನ್ನು ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚಿದೆ. ಇದಲ್ಲದೇ ರಶ್ಮಿಕಾ, ದಿ ಗರ್ಲ್​ಫ್ರೆಂಡ್​​, ರೈನ್​ಬೋ ಮತ್ತು ಛಾವಾ ಪ್ರೊಜೆಕ್ಟ್​ಗಳನ್ನೂ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.