ETV Bharat / entertainment

ಅಂತಿಮ ಹಂತದಲ್ಲಿ 'ವೆಟ್ಟೈಯನ್' ಶೂಟಿಂಗ್: ಪೊಲೀಸ್​​ ಸಮವಸ್ತ್ರದಲ್ಲಿ ರಜನಿಕಾಂತ್-ವಿಡಿಯೋ - ವೆಟ್ಟೈಯನ್

ವೆಟ್ಟೈಯನ್ ಸಿನಿಮಾಗಾಗಿ ಪೊಲೀಸ್ ಯೂನಿಫಾರ್ಮ್​​​ನಲ್ಲಿರುವ ನಟ ರಜನಿಕಾಂತ್​ ಅವರ ವಿಡಿಯೋ ಆನ್​ಲೈನ್​ನಲ್ಲಿ ವೈರಲ್​ ಆಗಿದೆ.

Rajinikanth
ನಟ ರಜನಿಕಾಂತ್
author img

By ETV Bharat Karnataka Team

Published : Feb 28, 2024, 8:07 PM IST

ಭಾರತೀಯ ಚಿತ್ರರಂಗದ ಹೆಸರಾಂತ ನಟ ರಜನಿಕಾಂತ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ವೆಟ್ಟೈಯನ್. ಕೊನೆಯ 'ಜೈಲರ್' ಸಿನಿಮಾ ಸೂಪರ್ ಡೂಪರ್ ಹಿಟ್​ ಆಗಿದ್ದು, ಮುಂದಿನ 'ವೆಟ್ಟೈಯನ್' ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ವೆಟ್ಟೈಯನ್ ಚಿತ್ರದ ಚಿತ್ರೀಕರಣವನ್ನು ಪುನರಾರಂಭಿಸಲು ತಲೈವರ್​​ ಇತ್ತೀಚೆಗಷ್ಟೇ ಚೆನ್ನೈನಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದರು. ಇದೀಗ ಸೆಟ್‌ನಲ್ಲಿರುವ ರಜನಿಕಾಂತ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ವೆಟ್ಟೈಯನ್ 2024ರ ಬಹುನಿರೀಕ್ಷಿತ ಚಿತ್ರ. ಲೈಕಾ ಪ್ರೊಡಕ್ಷನ್ಸ್​ ನಿರ್ಮಾಣದ ಈ ಸಿನಿಮಾಗೆ ಟಿ.ಜೆ ಜ್ಞಾನವೆಲ್ ಅವರ ನಿರ್ದೇಶನವಿದೆ. ಅಮಿತಾಭ್​ ಬಚ್ಚನ್​, ಫಹಾದ್​ ಪಾಸಿಲ್​ ಸೇರಿದಂತೆ ಹಲವು ಸೂಪರ್​ ಸ್ಟಾರ್​ಗಳು ತೆರೆ ಹಂಚಿಕೊಂಡಿದ್ದಾರೆ. ಚಿತ್ರೀಕರಣ ಚುರುಕುಗೊಂಡಿದ್ದು, ಜನಪ್ರಿಯ ನಟ ರಜನಿಕಾಂತ್ ಅವರ ವಿಡಿಯೋ ವೈರಲ್ ಆಗಿದೆ. ​

ಸೋಷಿಯಲ್​​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿರುವ ವಿಡಿಯೋದಲ್ಲಿ, ರಜನಿಕಾಂತ್ ಅವರು ತಮ್ಮ ವೆಟ್ಟೈಯನ್‌ನ ಸೆಟ್‌ಗೆ ಕಾರಿನಲ್ಲಿ ಆಗಮಿಸುತ್ತಿರುವುದನ್ನು ಕಾಣಬಹುದು. ತಮ್ಮ ಮೆಚ್ಚಿನ ತಲೈವರ್ ಅವರನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ತಲೈವರ್​ ಎಂದು ಕಿರುಚಲು ಪ್ರಾರಂಭಿಸಿದ್ದಾರೆ. ರಜನಿಕಾಂತ್ ಪೊಲೀಸ್ ಸಮವಸ್ತ್ರವನ್ನು ಧರಿಸಿ ಕಾಣಿಸಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಪೊಲೀಸ್​ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ನಂಬಲಾಗಿದೆ.

ಪೊಲೀಸ್ ಯೂನಿಫಾರ್ಮ್​​​ನಲ್ಲಿದ್ದ ರಜನಿಕಾಂತ್ ಅಭಿಮಾನಿಗಳತ್ತ ಕೈಬೀಸಿದ್ದು, ಫ್ಯಾನ್ಸ್ ನಟನ ಬಳಿ ಮುಗಿಬಿದ್ದರು. ವೆಟ್ಟೈಯನ್ ನಿವೃತ್ತ ಪೊಲೀಸ್ ಅಧಿಕಾರಿಯ ಕಥೆಯನ್ನು ಒಳಗೊಂಡಿದೆ. ಹಾಗಾಗಿ ರಜನಿಕಾಂತ್ ನಿವೃತ್ತ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬುದು ಈ ವಿಡಿಯೋ ಮೂಲಕ ಬಹುತೇಕ ಖಚಿತವಾಗಿದೆ. ವೆಟ್ಟೈಯನ್ ಸೆಟ್​ನ ಹಲವು ಫೋಟೋ-ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: 'ಪುರುಷೋತ್ತಮನ‌ ಪ್ರಸಂಗ'ದ​ ಅನುಭವ ತೆರೆದಿಟ್ಟ ಚಿತ್ರತಂಡ; ಶುಕ್ರವಾರ ಸಿನಿಮಾ ಬಿಡುಗಡೆ

ಸೆಟ್‌ನಿಂದ ಇತ್ತೀಚೆಗೆ ವೈರಲ್​ ಆದ ಫೋಟೋಗಳಲ್ಲಿ ರಜನಿಕಾಂತ್ ಅವರು ದೃಶ್ಯವೊಂದಕ್ಕೆ ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ನಟ ಗ್ರೀನ್​​ ಶರ್ಟ್, ಕ್ರೀಮ್ ಪ್ಯಾಂಟ್ ಮತ್ತು ಕಂದು ಬಣ್ಣದ ಶೂ, ಗ್ಲಾಸ್​​ ಧರಿಸಿದ್ದರು. ಇತ್ತೀಚೆಗೆ ನಿರ್ಮಾಪಕರು ಚಿತ್ರದ ಪ್ರಮೋಶನಲ್​ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ಸುಭಾಷ್ ಚಂದ್ರ ಬೋಸ್ ಅವರ ಚಿತ್ರವನ್ನೊಳಗೊಂಡ ಪುಸ್ತಕವನ್ನು ರಜನಿಕಾಂತ್ ಓದುವ ದೃಶ್ಯದೊಂದಿಗೆ ಈ ವಿಡಿಯೋ ಪ್ರಾರಂಭವಾಗಿತ್ತು. ಚಿತ್ರದ ಮತ್ತೊಂದು ಶಾಟ್‌ನಲ್ಲಿ, ಲಾಠಿ ಹಿಡಿದು ಕಾಣಿಸಿಕೊಂಡರು. ಈ ಚಿತ್ರದಲ್ಲಿ ನಟ ವಯಸ್ಸಾದವರಂತೆ ಕಾಣಿಸಿಕೊಳ್ಳಲಿದ್ದಾರಾ ಎಂದು ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದರು.

ಇದನ್ನೂ ಓದಿ: 58ನೇ ವಯಸ್ಸಿನಲ್ಲಿ ಎರಡನೇ ಮಗುವಿನ ತಾಯಿಯಾಗಲಿದ್ದಾರೆ ಗಾಯಕ ಸಿಧು ಮೂಸೆವಾಲಾ ತಾಯಿ!

ಈ ಹಿಂದೆ ತಮ್ಮ ಚಿತ್ರದ ಬಗ್ಗೆ ಮಾತನಾಡಿದ್ದ ರಜನಿಕಾಂತ್, "ವೆಟ್ಟೈಯನ್ ಚಿತ್ರೀಕರಣ ಶೇ.80 ಮುಗಿದಿದೆ. ಉಳಿದ ಕೆಲಸ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದರು. ಚಿತ್ರದಲ್ಲಿ ರಾಣಾ ದಗ್ಗುಬಾಟಿ, ದುಶಾರ ವಿಜಯನ್ ಮತ್ತು ರಿತಿಕಾ ಸಿಂಗ್ ಕೂಡ ಕಾಣಿಸಿಕೊಳ್ಲಲಿದ್ದಾರೆ. 2024ರ ಕೊನೆಗೆ ಚಿತ್ರ ಬಿಡುಗಡೆಯಾಗಲಿದೆ. ಮುಂದೆ, ತಾತ್ಕಾಲಿಕ ಶೀರ್ಷಿಕೆಯ 'ತಲೈವರ್ 171'ನಲ್ಲಿ ಕನಗರಾಜ್ ಅವರೊಂದಿಗೆ ಕೈ ಜೋಡಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.