ETV Bharat / entertainment

ಸೂಪರ್ ಸ್ಟಾರ್ ರಜನಿಕಾಂತ್​ಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದಿಂದ ಗೋಲ್ಡನ್ ವೀಸಾ - Rajinikanth received Golden Visa - RAJINIKANTH RECEIVED GOLDEN VISA

ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಸೂಪರ್ ಸ್ಟಾರ್ ರಜನಿಕಾಂತ್​ಗೆ ಗೋಲ್ಡನ್​ ವೀಸಾ ನೀಡಿ ಗೌರವಿಸಿದೆ.

Rajinikanth
ಸೂಪರ್ ಸ್ಟಾರ್ ರಜನಿಕಾಂತ್ (ETV Bharat)
author img

By ETV Bharat Karnataka Team

Published : May 23, 2024, 10:29 PM IST

ಚೆನ್ನೈ (ತಮಿಳುನಾಡು): ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗೌರವಿಸಲು ಯುಎಇ ಸರ್ಕಾರ ಗೋಲ್ಡನ್ ವೀಸಾ ನೀಡುತ್ತಿದೆ. ಗೋಲ್ಡನ್ ವೀಸಾ ಹೊಂದಿರುವವರನ್ನು 10 ವರ್ಷಗಳ ಕಾಲ ಯುಎಇ ಪ್ರಜೆಗಳೆಂದು ಪರಿಗಣಿಸಲಾಗುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಅನೇಕ ಭಾರತೀಯ ನಟರಿಗೆ ಗೋಲ್ಡನ್ ವೀಸಾ ನೀಡಲಾಗಿದೆ. ಇದೀಗ ಖ್ಯಾತ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

ಇದಕ್ಕೂ ಮುನ್ನ ಕಳೆದ ವರ್ಷ 2018 ರಿಂದ ಗೋಲ್ಡನ್ ವೀಸಾ ನೀಡಲಾಗುತ್ತಿದೆ. ಬಾಲಿವುಡ್ ನಟರಾದ ಸಂಜಯ್ ದತ್, ಶಾರುಖ್ ಖಾನ್, ಮಲಯಾಳಂ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮತ್ತು ಗಾಯಕಿ ಚಿತ್ರಾ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಹಿಂದಿ ನಟಿ ಊರ್ವಶಿ ರೌಟೇಲಾ ಮತ್ತು ನಟಿ ಮೀರಾ ಜಾಸ್ಮಿನ್ ಅವರಿಗೂ ಗೋಲ್ಡನ್ ವೀಸಾ ನೀಡಲಾಗಿತ್ತು.

ಸದ್ಯ ವೆಟ್ಟೈಯಾನ್ ಚಿತ್ರದಲ್ಲಿ ನಟಿಸುತ್ತಿರುವ ರಜನಿಕಾಂತ್ ವಿಹಾರಕ್ಕೆಂದು ದುಬೈಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ಅವರಿಗೆ ಈ ಗೋಲ್ಡನ್ ವೀಸಾ ನೀಡಿರುವುದು ಗಮನಾರ್ಹ. ಈ ನಿಟ್ಟಿನಲ್ಲಿ ನಟ ರಜನಿಕಾಂತ್ ಅವರು ತಮಗೆ ಗೋಲ್ಡನ್ ವೀಸಾ ನೀಡಿದ್ದಕ್ಕಾಗಿ ದುಬೈ ಸರ್ಕಾರಕ್ಕೆ ಧನ್ಯವಾದ ಅರ್ಪಿಸುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ತಮಿಳು ನಟಿಯರಾದ ತ್ರಿಷಾ, ಅಮಲಾ ಪಾಲ್, ನಟ ಮತ್ತು ನಿರ್ದೇಶಕ ಪಾರ್ಥಿಪನ್, ವಿಜಯ್ ಸೇತುಪತಿ ಮತ್ತು ಕಮಲ್ ಹಾಸನ್ ಅವರಿಗೆ ಯುಎಇ ಸರ್ಕಾರವು ಗೋಲ್ಡನ್ ವೀಸಾ ನೀಡುವ ಮೂಲಕ ಗೌರವಿಸಿದೆ. ಅಲ್ಲದೆ, ನಟ ವಿಕ್ರಮ್ ಮತ್ತು ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರಿಗೂ ಗೋಲ್ಡನ್ ವೀಸಾ ನೀಡಲಾಗಿದೆ. ಚಿತ್ರರಂಗದ ಸೆಲೆಬ್ರಿಟಿಗಳಲ್ಲದೆ, ಉದ್ಯಮಿಗಳು, ಹೂಡಿಕೆದಾರರು ಮತ್ತು ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೋಲ್ಡನ್ ವೀಸಾ ನೀಡಲಾಗುತ್ತದೆ.

ಇದನ್ನೂ ಓದಿ : ಹೊಸ ದಾಖಲೆ.. ಯುಎಇ ಗೋಲ್ಡನ್ ವೀಸಾ ಪಡೆದ ಮಂಗಳೂರಿನ ಉದ್ಯಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.