ETV Bharat / entertainment

'ವೆಟ್ಟೈಯನ್'​ ಕಲೆಕ್ಷನ್​: ಅಮಿತಾಭ್ ಬಚ್ಚನ್, ರಜನಿಕಾಂತ್​ ಸಿನಿಮಾ ಗಳಿಸಿದ್ದಿಷ್ಟು - VETTAIYAN COLLECTION

ಭಾರತೀಯ ಚಿತ್ರರಂಗದ ಹಿರಿಯ ನಟರಾದ ರಜನಿಕಾಂತ್ ಹಾಗೂ ಅಮಿತಾಭ್ ಬಚ್ಚನ್ ನಟನೆಯ 'ವೆಟ್ಟೈಯನ್' ಚಿತ್ರದ ಕಲೆಕ್ಷನ್​ ಮಾಹಿತಿ ಇಲ್ಲಿದೆ.

Vettaiyan Box Office collection
'ವೆಟ್ಟೈಯನ್' ಬಾಕ್ಸ್ ಆಫೀಸ್​ ಕಲೆಕ್ಷನ್​ (Film poster/ETV Bharat)
author img

By ETV Bharat Entertainment Team

Published : Oct 11, 2024, 4:24 PM IST

ಭಾರತೀಯ ಚಿತ್ರರಂಗದ ಹಿರಿಯ, ಹೆಸರಾಂತ ನಟ ಅಮಿತಾಭ್ ಬಚ್ಚನ್ ಅವರಿಂದು 82ನೇ ವರ್ಷ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 30 ವರ್ಷಗಳ ಬಳಿಕ ರಜನಿಕಾಂತ್ ಜೊತೆಗಿನ 'ವೆಟ್ಟೈಯನ್' ಚಿತ್ರ ಬಿಡುಗಡೆಯಾಗಿದ್ದು, ಹುಟ್ಟುಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ. ಬಹುನಿರೀಕ್ಷಿತ ಸ್ಟಾರ್ ಕಾಂಬಿನೇಶನ್​​ ಗಲ್ಲಾಪೆಟ್ಟಿಗೆ ವ್ಯವಹಾರದಲ್ಲೂ ಯಶಸ್ವಿಯಾಗಿದೆ. ಇಬ್ಬರು ಪ್ರತಿಭಾವಂತ ಕಲಾವಿದರ ವರ್ಚಸ್ಸು ಇನ್ನೂ ದೇಶಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ ಎಂಬುದನ್ನು ಸಾಬೀತುಪಡಿಸಿದೆ.

ವೆಟ್ಟೈಯನ್ ಬಾಕ್ಸ್ ಆಫೀಸ್​ ಕಲೆಕ್ಷನ್​: ಟಿ.ಜೆ.ಜ್ಞಾನವೆಲ್ ನಿರ್ದೇಶನದ 'ವೆಟ್ಟೈಯನ್' ಉತ್ತಮ ಅಂಕಿಅಂಶಗಳೊಂದಿಗೆ ಬಾಕ್ಸ್ ಆಫೀಸ್​​ ಪ್ರಯಾಣ ಆರಂಭಿಸಿದೆ. ಸೌತ್​ನ ಮತ್ತೋರ್ವ ಸೂಪರ್​ ಸ್ಟಾರ್ ದಳಪತಿ ವಿಜಯ್ ಅವರ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT) ನಂತರ ಈ ವರ್ಷ ತಮಿಳು ಚಿತ್ರದಲ್ಲಿ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಶುರುವಾದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಅಕ್ಟೋಬರ್ 10ರಂದು ಬಿಡುಗಡೆಯಾದ ವೆಟ್ಟೈಯನ್ ಭಾರತದಾದ್ಯಂತ 30 ಕೋಟಿ ರೂಪಾಯಿ (Net Collection) ಗಳಿಸುವ ಮೂಲಕ ಯಶಸ್ಸಿನ ಹಾದಿ ಹಿಡಿದಿದೆ. ತಮಿಳುನಾಡಿನಿಂದಲೇ ಹೆಚ್ಚು ಹಣ ಗಳಿಕೆಯಾಗಿರುವುದು ಗಮನಾರ್ಹ ಸಂಗತಿ. 30 ಕೋಟಿ ರೂಪಾಯಿ ಪೈಕಿ 26 ಕೋಟಿ ರೂ. ಕೇವಲ ತಮಿಳು ಪ್ರದೇಶದಿಂದ ಬಂದಿದೆ.

ವಿವಿಧ ಭಾಷೆಗಳ ಕಲೆಕ್ಷನ್​ ಮಾಹಿತಿ:

  • ತಮಿಳು: 26.15 ಕೋಟಿ ರೂಪಾಯಿ.
  • ತೆಲುಗು: 3.2 ಕೋಟಿ ರೂಪಾಯಿ.
  • ಹಿಂದಿ: 0.6 ಕೋಟಿ ರೂಪಾಯಿ.
  • ಕನ್ನಡ: 0.05 ಕೋಟಿ ರೂಪಾಯಿ.
  • ಒಟ್ಟು: 30 ಕೋಟಿ ರೂಪಾಯಿ. (ಆರಂಭಿಕ ಅಂದಾಜುಗಳು-ಡಾಟಾ ಮೂಲ: ಸ್ಯಾಕ್ನಿಲ್ಕ್).

ತಮಿಳುನಾಡಿನಲ್ಲಿ ಚಿತ್ರದ ಪ್ರದರ್ಶನ ಉತ್ತಮವಾಗಿ ನಡೆದಿದೆ. ಆದ್ರೆ ತೆಲುಗಿನಲ್ಲಿ ಕೇವಲ 3 ಕೋಟಿ ರೂ. ಕಲೆಕ್ಷನ್​ ಆಗಿದೆ. ಮತ್ತೊಂದೆಡೆ, ಒಟಿಟಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಗಳಿಂದಾಗಿ ಹಿಂದಿ ಆವೃತ್ತಿಯು ರಾಷ್ಟ್ರೀಯ ಮಟ್ಟದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿಲ್ಲ. ಇದು ಒಟ್ಟಾರೆ ಬಾಕ್ಸ್ ಆಫೀಸ್ ಕಲೆಕ್ಷನ್​ನನ್ನು ಮಿತಿಗೊಳಿಸಿರಬಹುದು.

ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಅವರ ಪ್ರಕಾರ, ವೆಟ್ಟೈಯನ್ ಯುಎಸ್ಎ, ಯುಎಇ, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲಿ ಸಿನಿಪ್ರಿಯರ ಮೊದಲ ಆಯ್ಕೆಯಾಗಿದೆ.

ಇದನ್ನೂ ಓದಿ: 'ಮಾರ್ಟಿನ್​' ಬಿಡುಗಡೆ: ಚಿತ್ರಮಂದಿರಗಳ ನಿರ್ವಹಣೆ ಕೊರತೆಗೆ ಅಭಿಮಾನಿಗಳ ಆಕ್ರೋಶ

ಟಿ.ಜೆ.ಜ್ಞಾನವೆಲ್ ಆ್ಯಕ್ಷನ್​ ಕಟ್ ಹೇಳಿರುವ ಈ ಸಿನಿಮಾದಲ್ಲಿ ಮಂಜು ವಾರಿಯರ್ ಮತ್ತು ಫಹದ್ ಫಾಸಿಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎಸ್‌.ಆರ್.ಕಥಿರ್ ಛಾಯಾಗ್ರಹಣ ನಿರ್ವಹಿಸಿದ್ದರೆ, ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಸಂಗೀತ ಒದಗಿಸಿದ್ದಾರೆ. ಕ್ಲಾಸ್ ಆ್ಯಂಡ್​ ಮಾಸ್ ಅಂಶಗಳ ಮಿಶ್ರಣವಾಗಿರುವ ಚಿತ್ರ ವಾರಾಂತ್ಯದಲ್ಲಿ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: 13 ಭಾಷೆಗಳಲ್ಲಿ, 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್'​​

ದಸರಾ ಅವಧಿಯಲ್ಲಿ ಸಿನಿಮಾ ಬಿಡುಗಡೆ ಆಗಿರುವ ಹಿನ್ನೆಲೆ, ಗಳಿಕೆಯ ಅಂಕಿಅಂಶ ಮತ್ತಷ್ಟು ಏರುವ ನಿರೀಕ್ಷೆಗಳಿವೆ. ಪ್ರತಿಕ್ರಿಯೆಗಳು ಹೀಗೆ ಸಕಾರಾತ್ಮಕವಾಗಿ ಮುಂದುವರಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಸಾಮರ್ಥ್ಯವನ್ನು ವೆಟ್ಟೈಯನ್ ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.