ETV Bharat / state

ಪೊಲೀಸರು ಕಾನೂನು ಪ್ರಕಾರ ಸಿ.ಟಿ.ರವಿ ಬಂಧನ ಮಾಡಲಾಗಿದೆ ಅಂದಿದ್ದಾರೆ: ಜಿ.ಪರಮೇಶ್ವರ್ - HOME MINISTER G PARAMESHWARA

ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ ಬಂಧನ ಪ್ರಕರಣ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

g parameshwara
ಜಿ.ಪರಮೇಶ್ವರ್ (ETV Bharat)
author img

By ETV Bharat Karnataka Team

Published : 2 hours ago

ಬೆಂಗಳೂರು: ''ಸಿ.ಟಿ.ರವಿ ಪ್ರಕರಣ ಕೋರ್ಟ್​​ನಲ್ಲಿದೆ. ಪೊಲೀಸರು ಕಾನೂನು ಪ್ರಕಾರ ಕೆಲಸ ಮಾಡಿದ್ದೇವೆ ಅಂದಿದ್ದಾರೆ'' ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಸದಾಶಿವ ನಗರದಲ್ಲಿ ಮಾತನಾಡಿದ ಅವರು, ಸಿ.ಟಿ.ರವಿ ಪ್ರಕರಣದಲ್ಲಿ ಪೊಲೀಸರು ಕಾನೂನು ಪ್ರಕಾರ ನಿರ್ವಹಿಸಿಲ್ಲ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ''ಪ್ರಕರಣವು ಕೋರ್ಟ್​​​ನಲ್ಲಿದೆ. ಹಾಗಾಗಿ, ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ. ಪೊಲೀಸರು ಸರಿಯಾದ ರೀತಿಯಲ್ಲಿ ಮಾಡಿದ್ದೇವೆ ಅಂತ‌ ಹೇಳಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಮಾಹಿತಿ ಕೇಳಿದ್ದು, ಕೇಳದೇ ಜಡ್ಜ್‌ಮೆಂಟ್ ಬಂದಿದೆ ಅಂದಿದ್ದಾರೆ'' ಎಂದರು.‌

ಸದನದ ಒಳಗಿನ ಪ್ರಕರಣ, ಹೊರಗೆ ಕಾನೂನು ಕ್ರಮ ಸರಿಯೇ ಎಂಬ ಪ್ರಶ್ನೆಗೆ, ''ಕೆಲವರು ಮಾಧ್ಯಮದಲ್ಲಿ ತಾವೇ ವಾದ ಮಾಡಿದ್ದಾರೆ. ಸದನದಲ್ಲಿ ಕಲಾಪ ಮುಂದೂಡಿದ್ದಾಗ ಮಾತನಾಡಿದ್ದಾರೆ. ಹಾಗಾಗಿ, ದಾಖಲಾಗಿಲ್ಲ ಅಂತ ಕೆಲವರು, ಇಲ್ಲ ಇನ್ನೂ ಸದನ ನಡೆಯುತ್ತಿತ್ತು ಅಂತ ಕೆಲವರ ವಾದವಾಗಿದೆ'' ಎಂದು ಹೇಳಿದರು.

ನಾಲ್ಕು ಜಿಲ್ಲೆಗಳಲ್ಲಿ ಇಡೀ ರಾತ್ರಿ ಸುತ್ತಿಸಿದ ಆರೋಪ ವಿಚಾರವಾಗಿ ಮಾತನಾಡಿ, ''ಅದರ ಮಾಹಿತಿ ಇಲ್ಲ. ಅದನ್ನೇ ಪೊಲೀಸರಿಂದ ಮಾಹಿತಿ ಕೇಳುತ್ತಿದ್ದೇನೆ. ಮಾಹಿತಿ ಬಂದ ಬಳಿಕ ತಿಳಿಸುತ್ತೇನೆ'' ಎಂದರು. ''ಸುವರ್ಣಸೌಧದಲ್ಲಿ ಹಲ್ಲೆ‌ ಮಾಡಲು ಮುಂದಾದ 24 ಜನರನ್ನು ಅಂದೇ ಬಂಧನ ಮಾಡಲಾಯಿತು. ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಯಾವುದೇ ಪ್ರಕರಣ ನಡೆಯಬಾರದು ಅಂತ‌ ಮುನ್ನೆಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದರೆ ಮತ್ತಷ್ಟು ದೊಡ್ಡ ಸಮಸ್ಯೆ ಆಗುತ್ತಿತ್ತು'' ಎಂದು ತಿಳಿಸಿದರು.

ಎಲ್ಲದಕ್ಕೂ ನಾವು ಫುಲ್ ಸ್ಟಾಪ್ ಇಡುತ್ತೇವೆ ಎಂಬ ಸಿ.ಟಿ. ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಆಗಬಹುದು'' ಎಂದು ವ್ಯಂಗ್ಯವಾಡಿದರು.

ಎಫ್​ಐಆರ್​​ ಆಗದ್ದನ್ನು ವಿಚಾರ ಮಾಡೋಣ: ಲಕ್ಷ್ಮೀ ಹೆಬ್ಬಾಳ್ಕರ್, ಡಿ.ಕೆ.ಶಿವಕುಮಾರ್​​ ಪ್ರೇರಣೆಯಿಂದಲೇ ನನ್ನ ಕೊಲೆಗೆ ಯತ್ನ ನಡೆದಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದು, ಆದರೆ ಎಫ್​ಐಆರ್​​ ದಾಖಲಾಗಿಲ್ಲ ಎಂಬ ಪ್ರಶ್ನೆಗೆ, ''ದೂರು ಕೊಟ್ಟಿದ್ದಾರೆ. ನಾನೂ ಅವರ ಹೇಳಿಕೆ ಗಮನಿಸಿದ್ದೇನೆ. ಮಾಧ್ಯಮದಲ್ಲೂ ಕೊಲೆ ಬೆದರಿಕೆ ಬಗ್ಗೆ ಹೇಳಿದ್ದಾರೆ.‌ ಎಫ್​ಐಆರ್​​ ಆಗದಿರುವ ಬಗ್ಗೆ ವಿಚಾರ ಮಾಡೋಣ'' ಎಂದು ಪ್ರತಿಕ್ರಿಯಿಸಿದರು.

ಸೂಪರ್ ಸೀಡ್ ಮಾಡಿ ಆಪರೇಟ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ''ಆ ರೀತಿ ಮಾಡಲು ಸಾಧ್ಯವಿಲ್ಲ. ಮಾಡಲು ಸಾಧ್ಯವಾ?. ಮುಖ್ಯಮಂತ್ರಿಗಳು ಗೃಹ ಸಚಿವರ ಮೇಲಿದ್ದಾರೆ. ನಮ್ಮ ವ್ಯವಸ್ಥೆಯಲ್ಲಿ ಗೃಹ ಸಚಿವ ಅಥವಾ ಎಲ್ಲದರ ಮೇಲೆ ಅವರಿದ್ದಾರೆ '' ಎಂದರು.

ಇದನ್ನೂ ಓದಿ: ತಕ್ಷಣವೇ ಸಿ.ಟಿ.ರವಿ ಬಿಡುಗಡೆಗೆ ಆದೇಶಿಸಿ 'ಜನಪ್ರತಿನಿಧಿಗಳಾಗಿ ಆರೋಪಿ‌, ದೂರುದಾರರ ವರ್ತನೆ ದುರದೃಷ್ಟಕರ‌' ಎಂದ ಹೈಕೋರ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.