ನವದೆಹಲಿ/ಕೋಲ್ಕತ್ತಾ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಕಾರ್ಯದರ್ಶಿ ಸೌರವ್ ಗಂಗೂಲಿ ಅವರ ಕಾರು ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಕ್ಕೀಡಾಗಿದೆ. ಗಂಗೂಲಿ ಅವರ ಕಾರಿಗೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಗುರುವಾರ ರಾತ್ರಿ ಸೌರವ್ ಗಂಗೂಲಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಕಾರನ್ನು ನಿಯಂತ್ರಣಕ್ಕೆ ತರಲು ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರಿಂದ ಹಿಂದೆ ಇದ್ದ ಬೆಂಗಾವಲು ಪಡೆಯ ವಾಹನಗಳು ಒಂದರ ಹಿಂದೆ ಒಂದರಂತೆ ಡಿಕ್ಕಿಯಾಗಿವೆ. ಬೆಂಗಾವಲು ವಾಹನಗಳಿಗೆ ಮಾತ್ರ ಹಾನಿಯಾಗಿದ್ದು ಸೌರವ್ ಗಂಗೂಲಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಘಟನೆ ಬಳಿಕ ಭಾಗವಹಿಸಬೇಕಾಗಿದ್ದ ಕಾರ್ಯಕ್ರಮಕ್ಕೆ ಗಂಗೂಲಿ ಬೆಂಗಾವಲು ಪಡೆ ವಾಹನದಲ್ಲಿ ತೆರಳಿದ್ದಾರೆ. ಅಧಿಕೃತ ಮಾಧ್ಯಮಗಳ ಪ್ರಕಾರ ಸೌರವ್ ಗಂಗೂಲಿ ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ.
ಇದನ್ನೂ ಓದಿ:ಮುಂಬೈನ ಕೊಳೆಗೇರಿ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ: 150-200 ಗುಡಿಸಲುಗಳು ಬೆಂಕಿಗೆ ಆಹುತಿ