ETV Bharat / entertainment

ಒಂದೇ ವಾರದಲ್ಲಿ 200 ಕೋಟಿಗೂ ಹೆಚ್ಚು: ಹ್ಯಾಟ್ರಿಕ್​​ ಗೆಲುವಿ​ಗೆ ರಶ್ಮಿಕಾ ರೆಡಿ, ವಿಕ್ಕಿ ವೃತ್ತಿಜೀವನದಲ್ಲೇ ಬಿಗ್​ ಹಿಟ್​​ ಸುಳಿವು - CHHAAVA COLLECTION

ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಒಂದು ವಾರದಲ್ಲಿ ಭಾರತದಲ್ಲಿ 219.75 ಕೋಟಿ ರೂಪಾಯಿ ಗಳಿಸಿದೆ.

Chhaava Box Office Collection Day 7
ರಶ್ಮಿಕಾ ಮಂದಣ್ಣ, ವಿಕ್ಕಿ ಕೌಶಲ್ ನಟನೆಯ ಛಾವಾ ಕಲೆಕ್ಷನ್​​​​ (Photo: Film poster)
author img

By ETV Bharat Entertainment Team

Published : Feb 21, 2025, 12:57 PM IST

ಖ್ಯಾತ ಕಲಾವಿದರಾದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಛಾವಾ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ನಿರೀಕ್ಷೆಗಳನ್ನು ಮೀರಿ ತನ್ನ ಬಾಕ್ಸ್ ಆಫೀಸ್ ಪ್ರಯಾಣವನ್ನು ಪ್ರಾರಂಭಿಸಿದ ಚಿತ್ರದ ವಾರದ ಗಳಿಕೆ ಉತ್ತಮವಾಗಿದೆ. ಮೊದಲ ದಿನವೇ ಉತ್ತಮ ಕಲೆಕ್ಷನ್​​ ಮಾಡಿದ ಸಿನಿಮಾ ನಂತರದ ವಾರದ ದಿನಗಳಲ್ಲಿಯೂ ಉತ್ತಮ ಅಂಕಿ - ಅಂಶಗಳನ್ನು ಕಾಯ್ದುಕೊಂಡಿತು. ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳ ಉತ್ತಮ ಪ್ರದರ್ಶನದಿಂದ ಛಾವಾ 200 ಕೋಟಿ ರೂಪಾಯಿಯ ಕ್ಲಬ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಈ ಸಾಧನೆಗೈದ ವಿಕ್ಕಿ ಕೌಶಲ್​​ ಅವರ ಮೊದಲ ಚಿತ್ರವೂ ಹೌದು. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಚಿತ್ರಕ್ಕೆ ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಬಂಡವಾಳ ಹೂಡಿದೆ.

'ಛಾವಾ' ಬಾಕ್ಸ್ ಆಫೀಸ್ ಕಲೆಕ್ಷನ್ (7ನೇ ದಿನ): ಫೆಬ್ರವರಿ 14ರಂದು ತೆರೆಗಪ್ಪಳಿಸಿದ ಛಾವಾ ತನ್ನ 7ನೇ ದಿನದಂದು, ಭಾರತದಲ್ಲಿ 22 ಕೋಟಿ (Net Collection) ರೂಪಾಯಿ ಕಲೆಕ್ಷನ್​​ ಮಾಡಿದೆ. ಬುಧವಾರದ ಗಳಿಕೆಯಲ್ಲಿ ಶೇ.26.73ರಷ್ಟು ಏರಿಕೆಯ ಹೊರತಾಗಿಯೂ, ಗುರುವಾರ ಶೇ.31.25ರಷ್ಟು ಕುಸಿತ ಕಂಡಿದೆ. ಅದಾಗ್ಯೂ, ಈ ಚಿತ್ರ ಭಾರತದಲ್ಲಿ 219.75 ಕೋಟಿ ರೂ. ಗಳಿಸಿದೆ. ಚಿತ್ರ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಪುಣೆಯಲ್ಲಿ ಮುಂಚೂಣಿಯಲ್ಲಿದೆ. ಮುಂಬೈ, ಹೈದರಾಬಾದ್ ಮತ್ತು ಚೆನ್ನೈನಲ್ಲಿಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಆಕರ್ಷಿಸುತ್ತಿದೆ.

ಛಾವಾ ಚಿತ್ರದ ಪ್ರತಿದಿನದ ಕಲೆಕ್ಷನ್​​ ಹೀಗಿದೆ:

ದಿನಇಂಡಿಯಾ ನೆಟ್​ ಕಲೆಕ್ಷನ್​​
ಮೊದಲ ದಿನ31 ಕೋಟಿ ರೂಪಾಯಿ.
ಎರಡನೇ ದಿನ37 ಕೋಟಿ ರೂಪಾಯಿ.
ಮೂರನೇ ದಿನ48.5 ಕೋಟಿ ರೂಪಾಯಿ.
ನಾಲ್ಕನೇ ದಿನ24 ಕೋಟಿ ರೂಪಾಯಿ.
ಐದನೇ ದಿನ25.25 ಕೋಟಿ ರೂಪಾಯಿ.
ಆರನೇ ದಿನ32 ಕೋಟಿ ರೂಪಾಯಿ.
ಏಳನೇ ದಿನ22 ಕೋಟಿ ರೂಪಾಯಿ (ಆರಂಭಿಕ ಅಂದಾಜು)
ಒಟ್ಟು219.75 ಕೋಟಿ ರೂಪಾಯಿ.

(ಬಾಕ್ಸ್ ಆಫೀಸ್ ಡಾಟಾ ಮೂಲ: ಸ್ಯಾಕ್ನಿಲ್ಕ್).

ವಿಕ್ಕಿ ಕೌಶಲ್ ನಟನೆಯ ಟಾಪ್ ಕಲೆಕ್ಷನ್ ಚಿತ್ರಗಳು:

  • ಉರಿ: ದಿ ಸರ್ಜಿಕಲ್ ಸ್ಟ್ರೈಕ್ - 244.14 ಕೋಟಿ ರೂ.
  • ಛಾವಾ - 219.75 ಕೋಟಿ ರೂ. (ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿದಿದೆ).
  • ರಾಝಿ - 123.74 ಕೋಟಿ ರೂ.
  • ಸ್ಯಾಮ್ ಬಹದ್ದೂರ್ - 93.95 ಕೋಟಿ ರೂ.
  • ಜರಾ ಹಟ್ಕೆ ಜರಾ ಬಚ್ಕೆ - 88.35 ಕೋಟಿ ರೂ.
  • ಬ್ಯಾಡ್ ನ್ಯೂಸ್ - 64.53 ಕೋಟಿ ರೂ.
  • ಭೂತ್: ಭಾಗ ಒಂದು - 31.10 ಕೋಟಿ ರೂ.
  • ಮನ್ಮರ್ಜಿಯಾನ್ - 27.80 ಕೋಟಿ ರೂ.
  • ರಮಣ್ ರಾಘವ್ 2.0 - 7.03 ಕೋಟಿ ರೂ.
  • ಮಸಾನ್ - 3.43 ಕೋಟಿ ರೂ.

ರಶ್ಮಿಕಾ ಮಂದಣ್ಣಗೆ ಹ್ಯಾಟ್ರಿಕ್ ಹಿಟ್? ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 'ಪುಷ್ಪ 2: ದಿ ರೂಲ್' ಚಿತ್ರದ ಯಶಸ್ಸಿನಲೆಯಲ್ಲಿ ತೇಲುತ್ತಿದ್ದ ರಶ್ಮಿಕಾ ಮಂದಣ್ಣಗೆ ಛಾವಾ ಮತ್ತೊಂದು ಭರ್ಜರಿ ಹಿಟ್​ ತಂದುಕೊಟ್ಟಿದೆ. ಅವರ ಅಭಿನಯಕ್ಕೆ ಮಿಶ್ರ ವಿಮರ್ಶೆಗಳು ವ್ಯಕ್ತವಾದರೂ, ನಟಿ ಬಿಗ್​ ಬಜೆಟ್ ಚಿತ್ರಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಪುಷ್ಪ 2 ಮತ್ತು ಛಾವಾ ಚಿತ್ರಕ್ಕೂ ಮೊದಲು, ರಶ್ಮಿಕಾ ಅವರು ಬಾಲಿವುಡ್​ ನಟ ರಣ್​​ಬೀರ್​​ ಕಪೂರ್ ಜೊತೆ ನಟಿಸಿದ ಅನಿಮಲ್ ಚಿತ್ರದೊಂದಿಗೆ ಸೂಪರ್​ ಡೂಪರ್​​ ಹಿಟ್​ ಕಂಡಿದ್ದರು. ಮುಂದೆ, ಸೌತ್​ ಸೂಪರ್​ ಸ್ಟಾರ್ ಧನುಷ್ ಜೊತೆಗೆ ಕುಬೇರ ಮತ್ತು ಬಾಲಿವುಡ್​​ ಸೂಪರ್​ ಸ್ಟಾರ್​ ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಮಿಡ್​-ಬಜೆಟ್ ಪ್ರಾಜೆಕ್ಟ್​ಗಳಾದ ರೈನ್​​ಬೋ ಮತ್ತು ದಿ ಗರ್ಲ್‌ಫ್ರೆಂಡ್‌ಗಳ ಚಿತ್ರಗಳ ಚಿತ್ರೀಕರಣವನ್ನು ಸಹ ಪೂರ್ಣಗೊಳಿಸಿದ್ದಾರೆ. ಮುಂದೆ ಬಿಡುಗಡೆ ಆಗೋ ಸಿನಿಮಾ ಯಶ ಕಂಡರೆ ರಶ್ಮಿಕಾರಿಗೆ ಹ್ಯಾಟ್ರಿಕ್ ಹಿಟ್ ಸಿಕ್ಕಂತಾಗುತ್ತದೆ.

ಇದನ್ನೂ ಓದಿ: ದೃಶ್ಯಂ 3 ಕನ್ಫರ್ಮ್​​! ಮುಂದಿನ ಭಾಗಕ್ಕೆ ಕೈಜೋಡಿಸಿದ ಮೋಹನ್‌ಲಾಲ್ - ಜೀತು ಜೋಸೆಫ್

ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಶಾಂತ್​ ನೀಲ್​​-ಜೂ.ಎನ್​​ಟಿಆರ್​​ ಸಿನಿಮಾ ಶೂಟಿಂಗ್​ ಶುರು: ಮೊದಲ ಸೀನ್​ ಹೇಗಿದೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.