ETV Bharat / entertainment

'ರೂಪಾಂತರ ನನಗೆ ಬಹಳ ಇಷ್ಟವಾದ ಸಿನಿಮಾ': ರಾಜ್ ಬಿ ಶೆಟ್ಟಿ - Roopantara

author img

By ETV Bharat Karnataka Team

Published : Jul 17, 2024, 7:27 PM IST

ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರ ವಹಿಸಿರುವ 'ರೂಪಾಂತರ' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ‌.

Roopantara team
'ರೂಪಾಂತರ' ಚಿತ್ರತಂಡ (ETV Bharat)

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ, ಬಹು ಬೇಡಿಕೆ ನಟ ರಾಜ್ ಬಿ ಶೆಟ್ಟಿ. ಇತ್ತೀಚೆಗಷ್ಟೇ ಮಳಯಾಳಂ ಚಿತ್ರ 'ಟರ್ಬೋ'ದಲ್ಲಿ ವೆಟ್ರಿವೇಲ್ ಷಣ್ಮುಗಸುಂದರಂ ಎಂಬ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸದ್ಯ 'ರೂಪಾಂತರ' ಎಂಬ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ‌. ಟ್ರೇಲರ್​ನಲ್ಲಿ ರಾಜ್ ಬಿ ಶೆಟ್ಟಿಯಿಂದ ಹಿಡಿದು ಒಂದೊಂದು ಪಾತ್ರಗಳು ಬಹಳ ಕುತೂಹಲ ಮೂಡಿಸುತ್ತಿದೆ.

ಮೊದಲಿಗೆ ರೂಪಾಂತರ ಚಿತ್ರದ ಕುರಿತು ಮಾತನಾಡಿದ ನಟ ರಾಜ್ ಬಿ ಶೆಟ್ಟಿ, ನಾವು ಮಂಗಳೂರಿನಲ್ಲಿ ಸಿನಿಮಾ ಮಾಡಬೇಕಾದರೆ ಮಾರ್ಕೆಟ್​​ ಬೇಡಿಕೆಗೂ ಹೊರತಾದ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು, ಆಗ ಜನರು ಸಿನಿಮಾಗಳನ್ನು ವೀಕ್ಷಿಸುತ್ತಾರೆ ಎಂಬ ಉದ್ದೇಶದೊಂದಿಗೆ ಸಿನಿಮಾ ಮಾಡಲು ಆರಂಭಿಸಿದ್ದೆವು. ಅದೇ ಉದ್ದೇಶದಿಂದ ಈ ಸಿನಿಮಾವನ್ನು ಮಾಡಿದ್ದೇವೆ. ರೂಪಾಂತರ ನನಗೆ ಬಹಳ ಇಷ್ಟವಾದ ಸಿನಿಮಾ. ಏಕೆಂದರೆ, ಈ ಚಿತ್ರದಲ್ಲಿ ನಾನು ನಟ ಮಾತ್ರ. ಸಂಭಾಷಣೆಗೆ ಸ್ವಲ್ಪ ಸಹಾಯ ಮಾಡಿದ್ದೇನೆ. ಮಿಕ್ಕಿದೆಲ್ಲವೂ ಈ ತಂಡದ ಕನಸು. ನನ್ನ ಬಿಟ್ಟು ಬೇರೆ ಮುಖ್ಯಪಾತ್ರಗಳು ಈ ಚಿತ್ರದಲ್ಲಿದೆ. ಅವರೆಲ್ಲರೂ ರೂಪಾಂತರಗೊಳ್ಳುವುದೇ ಚಿತ್ರದ ಕಥೆ. 'ಒಂದು ಮೊಟ್ಟೆಯ ಕಥೆ' ಚಿತ್ರ ಮಾಡಿದ ತಂಡದೊಂದಿಗೆ ಈ ಚಿತ್ರ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.

Roopantara team
'ರೂಪಾಂತರ' ಚಿತ್ರತಂಡ (ETV Bharat)

ಬಳಿಕ ನಿರ್ದೇಶಕ ಮಿಥಿಲೇಶ್ ಎಡವಲತ್ ಮಾತನಾಡಿ, ಐದು ಪ್ರಮುಖಪಾತ್ರಗಳ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ತಿಳಿಸಿದರು.

Raj B Shetty
ರಾಜ್ ಬಿ ಶೆಟ್ಟಿ (ETV Bharat)

ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರವನ್ನು ಪ್ರೇಕ್ಷಕರೇಗೆ ರಿಸೀವ್ ಮಾಡುತ್ತಾರೆನ್ನುವ ಭಯವಿತ್ತು: ಚಂದನ್ ಶೆಟ್ಟಿ - Vidhyarthi Vidyarthiniyare

ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆಗೆ ಸೋಮಶೇಖರ್ ಬೋಲೇಗಾಂವ್, ಲೇಖಾ ನಾಯ್ಡು, ಹನುಮ್ಮಕ್ಕ, ಭರತ್ ಜಿ.ಬಿ, ಅಂಜನ್ ಭಾರಧ್ವಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ನಿರ್ಮಾಪಕ ಸುಹಾನ್ ಪ್ರಸಾದ್ 'ರೂಪಾಂತರ'ವನ್ನು ನಿರ್ಮಾಣ ಮಾಡಿದ್ದು, ಮಿಥುನ್ ಮುಕುಂದನ್ ಅವರ ಸಂಗೀತವಿದೆ. ಭುವನೇಶ್ ಮಣಿವಣ್ಣನ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಪ್ರವೀಣ್ ಮತ್ತು ಅರ್ಷದ್ ನಾಕ್ಕೋತ್ ನಿರ್ಮಾಣ ವಿನ್ಯಾಸವಿರುವ ಈ ಚಿತ್ರಕ್ಕೆ ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: 'ಮೊನಾಲಿಸಾ' ಚಿತ್ರಕ್ಕೆ 20 ವರ್ಷ: ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಗೌರಿ' ಈವೆಂಟ್​ನಲ್ಲಿ ಹಂಸಲೇಖ - Gowri

'ಟರ್ಬೋ' ಚಿತ್ರವನ್ನು ಕರ್ನಾಟಕದಾದ್ಯಂತ ಯಶಸ್ವಿಯಾಗಿ ಹಂಚಿಕೆ ಮಾಡಿದ ಲೈಟರ್ ಬುದ್ಧ ಫಿಲಂಸ್ ಈ ಚಿತ್ರವನ್ನೂ ಹಂಚಿಕೆ ಮಾಡುತ್ತಿದೆ. ಸದ್ಯ ಟ್ರೇಲರ್​ಗೆ ಬಹುತೇಕ ಮೆಚ್ಚುಗೆ ಕೇಳಿ ಬರುತ್ತಿದೆ ಎಂದು ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಬಾಲಕೃಷ್ಣ ಅರ್ವನಕರ್ ತಿಳಿಸಿದ್ದಾರೆ. ಚಿತ್ರ ಜುಲೈ 26ರಂದು ಬಿಡುಗಡೆಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.