ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವವರಲ್ಲಿ ಒಬ್ಬರಾದ ಕೋಡ್ಲು ರಾಮಕೃಷ್ಣ ಈಗ ಮತ್ತೊಂದು ಅಂತಹದ್ದೇ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ 'ಶಾನುಭೋಗರ ಮಗಳು' ಚಿತ್ರದ ಮೂಲಕ ಸ್ವಾತಂತ್ರ್ಯಪೂರ್ವದ ಕಥೆಯನ್ನು ಬೆಳ್ಳಿ ತೆರೆ ಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ.
![shanubhogara magalu](https://etvbharatimages.akamaized.net/etvbharat/prod-images/15-07-2024/kn-bng-01-shaynabhohara-magalgi-kannadigar-manasu-kadiyalu-raginiprajwal-ready-7204735_15072024110451_1507f_1721021691_487.jpg)
ಬಹುತೇಕ ಚಿತ್ರೀಕರಣ ಮುಗಿಸಿರುವ ಶಾನುಭೋಗರ ಮಗಳು ಸಿನಿಮಾ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಚಿತ್ರದ ಬಗ್ಗೆ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
![shanubhogara magalu](https://etvbharatimages.akamaized.net/etvbharat/prod-images/15-07-2024/kn-bng-01-shaynabhohara-magalgi-kannadigar-manasu-kadiyalu-raginiprajwal-ready-7204735_15072024110451_1507f_1721021691_1103.jpg)
'ಲಾ' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಾಗಿಣಿ ಪ್ರಜ್ವಲ್, ಶಾನುಭೋಗರ ಮಗಳ ಪಾತ್ರದಲ್ಲಿ ಮಿಂಚಿದ್ದಾರೆ. ಇವರ ಜೊತೆ ನಿರಂಜನ್ ಶೆಟ್ಟಿ, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಸುಧಾ ಬೆಳವಾಡಿ, ವಾಣಿಶ್ರೀ, ಪದ್ಮಾ ವಾಸಂತಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಖ್ಯಾತ ನಟ ಕಿಶೋರ್ ಅಭಿನಯಿಸಿದ್ದಾರೆ.
![shanubhogara magalu](https://etvbharatimages.akamaized.net/etvbharat/prod-images/15-07-2024/kn-bng-01-shaynabhohara-magalgi-kannadigar-manasu-kadiyalu-raginiprajwal-ready-7204735_15072024110451_1507f_1721021691_109.jpg)
ಭುವನ್ ಫಿಲಂಸ್ ಲಾಂಛನದಲ್ಲಿ ಸಿ.ಎಂ.ನಾರಾಯಣ್ ನಿರ್ಮಿಸಿರುವ 'ಶಾನುಭೋಗರ ಮಗಳು' ಹಲವು ವಿಶೇಷಗಳನ್ನು ಒಳಗೊಂಡಿದೆ. ಜೈ ಆನಂದ್ ಛಾಯಾಗ್ರಹಣ ಹಾಗೂ ಬಿ.ಎಸ್.ಕೆಂಪರಾಜ್ ಅವರ ಸಂಕಲನವಿದೆ. ವಸಂತ ಕುಲಕರ್ಣಿ ಕಲಾ ನಿರ್ದೇಶನ, ರಮೇಶ್ ಕೃಷ್ಣನ್ ಸಂಗೀತ, ಕರಣ್ ಮಯೂರ್ ನಿರ್ಮಾಣ ನಿರ್ವಹಣೆ ಹಾಗೂ ಎಸ್.ನಾಗರಾಜ್ ರಾವ್(ಹಾಸ್ನ), ರಘು ಕಲ್ಪತರು ಸಹ ನಿರ್ದೇಶನವಿರುವ ಚಿತ್ರಕ್ಕೆ, ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಶಾನುಭೋಗರ ಮಗಳು ಸಿನಿಮಾವು ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಇದನ್ನೂ ಓದಿ: ಸೆಂಚುರಿ ಸ್ಟಾರ್ ಇಂಟ್ರೊಡಕ್ಷನ್ ಟೀಸರ್ ಬೊಂಬಾಟ್.. ಐ ಆಮ್ ಕಮಿಂಗ್ ಅಂತಿದ್ದಾರೆ ಶಿವರಾಜ್ಕುಮಾರ್ - Shivarajkumar