ETV Bharat / entertainment

'ರೇಣುಕಾಸ್ವಾಮಿಯಿಂದ ಯಾವುದೇ ಮೆಸೇಜ್ ಬಂದಿಲ್ಲ': ರಾಗಿಣಿ ದ್ವಿವೇದಿ, ಶುಭಾ ಪೂಂಜಾ ಸ್ಪಷ್ಟನೆ - Renukaswamy Messages to Actress - RENUKASWAMY MESSAGES TO ACTRESS

ಕನ್ನಡದ ಕೆಲ ನಟಿಮಣಿಯರಿಗೂ ರೇಣುಕಾಸ್ವಾಮಿ ಮೆಸೇಜ್​ ಮಾಡಿದ್ದರು ಎಂಬ ಸುದ್ದಿ ಸಖತ್​ ಸದ್ದು ಮಾಡಿತ್ತು. ಈ ಬಗ್ಗೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಶುಭಾ ಪೂಂಜಾ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

Ragini Dwivedi and Shubha Poonja
ರಾಗಿಣಿ ದ್ವಿವೇದಿ, ಶುಭಾ ಪೂಂಜಾ (ETV Bharat)
author img

By ETV Bharat Karnataka Team

Published : Sep 10, 2024, 7:38 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಜೈಲುವಾಸ ಮುಂದುವರಿದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ನ್ಯಾಯಾಲಯಕ್ಕೆ ಚಾರ್ಚ್ ಶೀಟ್​​ ಸಲ್ಲಿಕೆಯಾಗಿದೆ. ಚಾರ್ಚ್ ಶೀಟ್​ನಲ್ಲಿರುವ ಯಾವುದೇ ರಹಸ್ಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಹೈಕೋರ್ಟ್ ಇಂದು ನಿರ್ಬಂಧ ಹೇರಿದೆ.

ನಿನ್ನೆವರೆಗೆ ಆರೋಪ ಪಟ್ಟಿಯ ಕೆಲ ಅಚ್ಚರಿ ವಿಷಯಗಳು ಹೊರಬಂದಿದ್ದವು. ಕನ್ನಡದ ಕೆಲ ನಟಿಮಣಿಯರಿಗೂ ರೇಣುಕಾಸ್ವಾಮಿ ಮೇಸೇಜ್​ ಮಾಡಿದ್ದರೆಂಬ ಸುದ್ದಿ ಸಖತ್​ ಸದ್ದು ಮಾಡಿತ್ತು.

ರೇಣುಕಾಸ್ವಾಮಿ ಕೇವಲ ಪವಿತ್ರಾ ಗೌಡ ಅವರಿಗೆ ಮಾತ್ರವಲ್ಲದೇ ಕನ್ನಡದ ಸ್ಟಾರ್ ನಟಿಯರಿಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದನೆಂಬ ಸುದ್ದಿ ಹಲವು ದಿನಗಳಿಂದ ಇದೆ. ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿದ್ದನೆಂಬ ವಿಚಾರ ಕಳೆದ ದಿನ ಸಖತ್​​ ಸದ್ದು ಮಾಡಿತ್ತು. ವಿಚಾರಣೆ ವೇಳೆ ಆರೋಪಿಗಳಾದ ಪ್ರದೋಷ್ ಮತ್ತು ವಿನಯ್‍ ಇಬ್ಬರೂ ರೇಣುಕಾಸ್ವಾಮಿ ಮೊಬೈಲ್​​ನಲ್ಲಿ ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ಆತ ಅಶ್ಲೀಲ ಮಸೇಜ್ ಕಳುಹಿಸಿದ್ದನ್ನು ನಾವು ನೋಡಿದ್ದೇವೆ ಎಂದು ಪೊಲೀಸರಿಗೆ ಹೇಳಿದ್ದಾರೆ.

ರಾಗಿಣಿ ದ್ವಿವೇದಿ ಸ್ಪಷ್ಟನೆ ಹೀಗಿದೆ: ಈ ಸುದ್ದಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿರುವ ನಟಿ ರಾಗಿಣಿ ದ್ವಿವೇದಿ, ನಮ್ಮ ಪರ್ಸನಲ್ ಸೋಷಿಯಲ್ ಮೀಡಿಯಾವನ್ನು ನೋಡಿಕೊಳ್ಳುವ ಟೀಮ್ ಇದೆ. ಅವರು ಎಲ್ಲವನ್ನು ನೋಡಿಕೊಳ್ಳುತ್ತಿರುತ್ತಾರೆ. ಅದು ನನ್ನ ಗಮನಕ್ಕೆ ಬಂದಿರುವುದಿಲ್ಲ. ಜೊತೆಗೆ ರೇಣುಕಾಸ್ವಾಮಿ ಅವರಿಂದ ನಮಗೆ ಯಾವುದೇ ರೀತಿಯ ಅಶ್ಲೀಲ ಸಂದೇಶಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ರಮೇಶ್​ ಅರವಿಂದ್​​​ಗೆ ವಯಸ್ಸು 60 ಅಂದ್ರೆ ನಂಬ್ತೀರಾ?: ಅರವತ್ತರಲ್ಲೂ 30ರ ಚಾರ್ಮ್​ - ಹ್ಯಾಂಡ್ಸಂ ಲುಕ್​​ಗೆ ಫ್ಯಾನ್​ ಫಿದಾ - Ramesh Aravind

ನಟಿ ಶುಭಾ ಪೂಂಜಾ ಹೇಳಿದ್ದಿಷ್ಟು: ಮತ್ತೊಂದೆಡೆ ಶುಭಾ ಪೂಂಜಾ ಕೂಡಾ ಈ ಕುರಿತು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ''ನನ್ನ ಎಲ್ಲಾ ಮಾಧ್ಯಮ ಮಿತ್ರರೇ, ಬೆಳಗ್ಗೆಯಿಂದ ರೇಣುಕಾಸ್ವಾಮಿ ಪ್ರಕರಣದ ಕುರಿತು ತಿಳಿಯಲು ನನಗೆ ಕರೆ ಮಾಡುತ್ತಿದ್ದೀರಾ, ಅದಕ್ಕೆಲ್ಲಾ ಸ್ಪಷ್ಟನೆ ನೀಡಲು ನಾನು ಬಯಸುತ್ತೇನೆ. ನನ್ನ ವೈಯಕ್ತಿಕ ಖಾತೆಗೆ ಅಂತಹ ಯಾವುದೇ ಮೆಸೇಜ್‌ಗಳು ಬಂದಿಲ್ಲ'' ಎಂದು ತಮ್ಮ ಸೋಷಿಯಲ್​ ಮೀಡಿಯಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ದಿಗಂತ್​​ ಜೊತೆ ಮತ್ತೆ ನಟಿಸಲ್ಲ': ನಟಿ ಐಂದ್ರಿತಾ ರೇ ಸಿನಿಮಾ ಸಂಖ್ಯೆ ಕಡಿಮೆಯಾಗಿದ್ದೇಕೆ ಗೊತ್ತಾ? - Aindrita Ray Interview

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಪ್ರದೋಷ್ ಮತ್ತು ವಿನಯ್‍ ಕೊಟ್ಟಿರುವ ಈ ಹೇಳಿಕೆಯಿಂದ ಕನ್ನಡದ ಈ ಇಬ್ಬರು ನಟಿಯರಿಗೆ ಡಿಸ್ಟರ್ಬ್ ಆಗಿರೋದಂತೂ ಸತ್ಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.