2024ರ ಏಳು ತಿಂಗಳುಗಳು ಉರುಳಿದ್ದು ತಿಳಿಯಲೇ ಇಲ್ಲ. ಆದ್ರೆ ಈ ಸಾಲಿನಲ್ಲಿ ಕನ್ನಡದ ಯಾವು ಸಿನಿಮಾಗಳೂ ಕೂಡ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ ಅನ್ನೋ ಬೇಸರ ಸ್ಯಾಂಡಲ್ವುಡ್ ಸೇರಿದಂತೆ ಕನ್ನಡಿಗರಲ್ಲೂ ಇದೆ. ಹಲವು ಸಿನಿಮಾಗಳು ಬಿಡುಗಡೆ ಆಗಿ ಯಶಸ್ವಿ ಆದವಾದರೂ ಭಾರತೀಯ ಚಿತ್ರರಂಗದ ಗಮನ ಸೆಳೆಯುವಂತ ಸಿನಿಮಾಗಳು ಬರಲಿಲ್ಲ. ಆದ್ರೀಗ ಹಲವು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ಭರವಸೆಯ ಕಿರಣ ಮೂಡಿದೆ. ಆ ಸಾಲಿನಲ್ಲಿ ಖ್ಯಾತ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರವೂ ಒಂದು.
How beautifully the visuals complement the music in this song.. Grandness in every single frame and note! You guys are going to love this ☺️ #Radhe out now.
— Rakshit Shetty (@rakshitshetty) August 10, 2024
Watch Here : https://t.co/DBw70HpyLy #IbbaniTabbidaIleyali in cinemas from September 2024 ♥️ pic.twitter.com/ji8buiGrJS
2022ರಲ್ಲಿ ಕೆಜಿಎಫ್ 2, ಕಾಂತಾರ, ವಿಕ್ರಾಂತ್ ರೋಣದಂತಹ ಸಿನಿಮಾಗಳು ತೆರೆಕಂಡು ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿತ್ತು. ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಕೆಜಿಎಫ್ 2 ಬಾಕ್ಸ್ ಅಫೀಸ್ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ, ಸ್ಯಾಂಡಲ್ವುಡ್ನ ಬ್ಲಾಕ್ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಸುದೀಪ್ ನಟನೆಯ ವಿಕ್ರಾಂತ್ ರೋಣ ಕೂಡ ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿತ್ತು. ಇನ್ನು, ಕಾಂತಾರ ಚಿತ್ರದ್ದು ಇತಿಹಾಸ ಅಂತಲೇ ಹೇಳಬಹುದು. ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಖ್ಯಾತನಾಮರು ಮೆಚ್ಚಿ ಕೊಂಡಾಡಿದರು. ಕಥೆ, ನಿರ್ದೇಶನಾ ಶೈಲಿಗೆ ಪ್ರಶಂಸೆಯ ಮಳೆ ಹರಿದು ರಿಷಬ್ ಡಿವೈನ್ ಸ್ಟಾರ್ ಎಂದೇ ಜನಪ್ರಿಯರಾದರು. ನಂತರ 2023ರಲ್ಲಿ ಕಾಟೇರ ಜೊತೆ ಒಂದಿಷ್ಟು ಚಿತ್ರಗಳು ಯಶಸ್ವಿಯಾದವು. ಆದ್ರೆ ಈ ಸಾಲಿನಲ್ಲಿ ಕಳೆದ ಅರ್ಧ ವರ್ಷ ಯಾವ ಸ್ಟಾರ್ ನಟರ ಸಿನಿಮಾಗಳೂ ಬಿಡುಗಡೆ ಆಗದೇ ಸ್ಯಾಂಡಲ್ವುಡ್ ಕೊಂಚ ಸೈಲೆಂಟ್ ಆಗಿತ್ತು ಎಂದೇ ಹೇಳಬಹುದು.
ಆದ್ರೆ ಆಗಸ್ಟ್ನಲ್ಲಿ ಸ್ಯಾಂಡಲ್ವುಡ್ನಲ್ಲಿ ಸಿನಿಸುಗ್ಗಿ ಶುರುವಾಗಿದೆ. ಹಲವು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ನಿನ್ನೆಯಷ್ಟೇ ತೆರೆಕಂಡಿರೋ ಭೀಮ ಭರವಸೆ ಮೂಡಿಸಿದ್ದಾನೆ. ಅದರಂತೆ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗಿರುವ ಕನ್ನಡ ಚಿತ್ರರಂಗದ ಹೊಸ ಚಿತ್ರ.
ಆಕರ್ಷಕ ಟೈಟಲ್ ಮೂಲಕ ಗಮನ ಸೆಳೆಯುತ್ತಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಮುಂದಿನ ತಿಂಗಳು ಚಿತ್ರಮಂದಿರ ಪ್ರವೇಶಿಸಲಿದೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿರೋ ಹಿನ್ನೆಲೆ ಸಿನಿಮಾ ಹೆಚ್ಚು ಗಮನ ಸೆಳೆದಿದೆ. ಈಗಾಗಲೇ ಪ್ರಚಾರ ಪ್ರಾರಂಭವಾಗಿದ್ದು, ಚಿತ್ರದ ಕೆಲ ಗೀತೆಗಳು ಅನಾವರಣಗೊಂಡಿವೆ. ಇಂದು ರಾಧೆ ಶೀರ್ಷಿಕೆಯ ಹೊಸ ಹಾಡು ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ತರುಣ್ ಸುಧೀರ್ - ಸೋನಾಲ್: ಫೋಟೋಗಳನ್ನು ನೋಡಿ - Tharun Sonal Haldi Ceremony
'ರಾಧೆ - ದಿ ವೆಡ್ಡಿಂಗ್ ಸಾಂಗ್'ಗೆ ಚಂದ್ರಜಿತ್ ಬೆಳ್ಳಿಯಪ್ಪ ಅವರ ಸಾಹಿತ್ಯವಿದ್ದು, ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ಜೊತೆಗೆ ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಲ್ಲಿ ಮಧುರ ಗೀತೆ ಮೂಡಿಬಂದಿದೆ. ಹಾಡಿಗೆ ದೀಕ್ಷಿತ್ ಕುಮಾರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ವಿಹಾನ್, ಅಂಕಿತ ಅಮರ್ ಹಾಗೂ ಮಯೂರಿ ನಟರಾಜ್ ನಟಿಸಿದ್ದಾರೆ. ಪರಂವಃ ಸ್ಟುಡಿಯೋಸ್ ಮೂಲಕ ಜಿ.ಎಸ್.ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.