ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಜನಪ್ರಿಯತೆ ಗಡಿ ಮೀರುತ್ತಿದೆ. ಖ್ಯಾತ ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್'ನ ಪುಷ್ಪ ಪುಷ್ಪ ಹಾಡು ನಿನ್ನೆಯಷ್ಟೇ ಅನಾವರಣಗೊಂಡು ಸಖತ್ ಸದ್ದು ಮಾಡುತ್ತಿದೆ. ಬುಧವಾರ ಬಿಡುಗಡೆ ಆದ ಈ ಹಾಡು ಈಗಾಗಲೇ ಯೂಟ್ಯೂಬ್‌ನಲ್ಲಿ 6 ಭಾಷೆಗಳಲ್ಲಿ 1 ಮಿಲಿಯನ್ಗೂ ಹೆಚ್ಚು ಲೈಕ್‌ಗಳನ್ನು ಸಂಪಾದಿಸಿದೆ. ತೆಲುಗು ಮತ್ತು ಹಿಂದಿ ಆವೃತ್ತಿಯ ಹಾಡು ಕೇವಲ 24 ಗಂಟೆಗಳಲ್ಲಿ ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಾಗಿ ಹೊರಹೊಮ್ಮಿವೆ.
ದೇಶ, ವಿದೇಶಗಳಲ್ಲಿ ದಾಖಲೆ: 2024ರ ಬಹುನಿರೀಕ್ಷಿತ ಚಿತ್ರದ ಹಿಂದಿರುವ ಮೈತ್ರಿ ಮೂವಿ ಮೇಕರ್ಸ್ ಪೋಸ್ಟರ್ ಹಂಚಿಕೊಂಡು ಮಾಹಿತಿ ನೀಡಿದೆ. "ಕಳೆದ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ತೆಲುಗು ಮತ್ತು ಹಿಂದಿ ಸಾಹಿತ್ಯವುಳ್ಳ ಪುಷ್ಪ ಪುಷ್ಪ ಸಾಂಗ್ಸ್ ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋಗಳಾಗಿವೆ" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರ ಪುಷ್ಪ ರಾಜ್ ಪಾತ್ರದ ನೋಟವಿದೆ. ಮತ್ತೊಂದು ಪೋಸ್ಟರ್ ಹಂಚಿಕೊಂಡು ಭಾರತದಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಲಿರಿಕಲ್ ವಿಡಿಯೋ ಸಾಂಗ್ ಎಂದು ಮಾಹಿತಿ ಕೊಟ್ಟಿದೆ.
- " class="align-text-top noRightClick twitterSection" data="">
15 ದೇಶಗಳಲ್ಲಿ ಟ್ರೆಂಡಿಂಗ್: ಚಿತ್ರನಿರ್ಮಾಪಕರು ಲೇಟೆಸ್ಟ್ ಆಗಿ ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಲೈಕ್ಸ್, ವೀವ್ಸ್ನ ಮಾಹಿತಿ ಹಂಚಿಕೊಳ್ಳಲಾಗಿದೆ. 6 ಭಾಷೆ ಸೇರಿ 24 ಗಂಟೆಯೊಳಗೆ ಹೆಚ್ಚು ವೀಕ್ಷಣೆಯಾದ ಭಾರತದ ಲಿರಿಕಲ್ ವಿಡಿಯೋ ಸಾಂಗ್ ಎಂದು ಶೀರ್ಷಿಕೆ ಕೊಡಲಾಗಿದೆ. ಉಳಿದಂತೆ, 40 ಮಿಲಿಯನ್ ಪ್ಲಸ್ ವೀವ್ಸ್, 1.27 ಮಿಲಿಯನ್ ಲೈಕ್ಸ್ ಪಡೆದಿದ್ದು, 15 ದೇಶಗಳಲ್ಲಿ ಟ್ರೆಂಡಿಂಗ್ನಲ್ಲಿದೆ. ಆಲ್ ಟೈಮ್ ರೆಕಾರ್ಡ್ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ಮರಳಿದ ಸಲ್ಮಾನ್: ಕ್ಯಾಮರಾಗೆ ಪೋಸ್ ಕೊಡದೇ ತೆರಳಿದ ನಟ - Salman Khan
ಬಿಡುಗಡೆ ಆದಾಗಿನಿಂದ ಪುಷ್ಪ ಪುಷ್ಪ ಸಾಂಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿದೆ. ದೇವಿ ಶ್ರೀ ಪ್ರಸಾದ್ ಅವರ ಮ್ಯೂಸಿಕ್ ಮ್ಯಾಜಿಕ್ ಅನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಆಕರ್ಷಕ ಬೀಟ್ಸ್, ಪವರ್ಫುಲ್ ಸಾಹಿತ್ಯ ಮತ್ತು ಬಲವಾದ ಸಂದೇಶ ಪ್ರೇಕ್ಷಕರ ಮನ ಗೆದ್ದಿದೆ.
ಇದನ್ನೂ ಓದಿ: ಬಂದೇ ಬಿಟ್ಟ ಪುಷ್ಪರಾಜ್: ಪುಷ್ಪ ಸೀಕ್ವೆಲ್ನ ಮೊದಲ ಹಾಡಿಗೆ ಫ್ಯಾನ್ಸ್ ಫಿದಾ - Pushpa 2
ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಬಿಗ್ ಬಜೆಟ್ನಲ್ಲಿ ಮೈತ್ರಿ ಮೂವಿ ಮೇಕರ್ಸ್ ಸಿನಿಮಾವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಪೋಸ್ಟರ್, ಟೀಸರ್, ಹಾಡುಗಳೊಂದಿಗೆ ಸಿನಿ ಪ್ರಚಾರ ಆರಂಭವಾಗಿದೆ. ಆಗಸ್ಟ್ 15 ರಂದು ಪುಷ್ಪ ಸೀಕ್ಚೆಲ್ ಚಿತ್ರಮಂದಿರ ಪ್ರವೇಶಿಸಲಿದೆ.