ETV Bharat / entertainment

ಇಂದಿನಿಂದ 'ಪುಷ್ಪ' ಜಾತ್ರೆ: ಬಿಗ್ ಅನೌನ್ಸ್​​ಮೆಂಟ್; ಅಲ್ಲು ಅರ್ಜುನ್​​, ರಶ್ಮಿಕಾ ಅಭಿಮಾನಿಗಳಲ್ಲಿ ಕುತೂಹಲ - Pushpa Mass Jaathara - PUSHPA MASS JAATHARA

ಇಂದು ಸಂಜೆ 4.05ಕ್ಕೆ ಬಹುನಿರೀಕ್ಷಿತ ಚಿತ್ರ ''ಪುಷ್ಪ 2: ದಿ ರೂಲ್​''ರ ಅಪ್​ಡೇಟ್ಸ್ ಹೊರಬೀಳಲಿದೆ.

Pushpa 2
ಪುಷ್ಪ 2: ದಿ ರೂಲ್​
author img

By ETV Bharat Karnataka Team

Published : Apr 2, 2024, 1:30 PM IST

''ಪುಷ್ಪ 2: ದಿ ರೂಲ್​'', ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಹಾಗೂ ಬಹುಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇಂದು 'ಪುಷ್ಪ ಮಾಸ್​​ ಜಾತ್ರೆ' (Pushpa Mass Jaathara) ಶುರುವಾಗಲಿದೆ ಎಂದು ಚಿತ್ರತಂಡ ಘೋಷಿಸಿದ್ದು, ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಏಪ್ರಿಲ್​ 5 ನಾಯಕ ನಟಿ ರಶ್ಮಿಕಾ ಮಂದಣ್ಣ ಅವರ ಜನ್ಮದಿನ. ಏಪ್ರಿಲ್ 8 ನಾಯಕ ನಟ ಅಲ್ಲು ಅರ್ಜುನ್ ಅವರ ಜನ್ಮದಿನ. ಈ ಹಿನ್ನೆಲೆ, ಅಲ್ಲು ಅರ್ಜುನ್ ಅವರ ಜನ್ಮದಿನದವರೆಗೆ ಅದ್ಧೂರಿ ಆಚರಣೆಗೆ ಚಿತ್ರತಂಡ ಸಜ್ಜಾಗಿದೆ. ಸಿನಿಮಾಗೆ ಸಂಬಂಧಿಸಿದ ಗ್ಲಿಂಪ್ಸ್ ಹೊರಬೀಳಲಿದೆ ಎಂದು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಅಲ್ಲು ಅರ್ಜುನ್ ಅವರ ಕೈ ಚಿತ್ರವನ್ನು ಒಳಗೊಂಡಿರುವ ಪೋಸ್ಟರ್ ಒಂದನ್ನು ನಿನ್ನೆ ಹಂಚಿಕೊಂಡಿದ್ದ ಮೈತ್ರಿ ಮೂವಿ ಮೇಕರ್ಸ್, 'ಪುಷ್ಪ ಮಾಸ್​​ ಜಾತ್ರೆ ಬಿಗಿನ್ಸ್ ಟುಮಾರೋ' ಎಂದು ಬರೆದುಕೊಂಡಿದೆ. ದೊಡ್ಡ ಘೋಷಣೆ ಇದೆ ಎಂಬ ಸುಳಿವನ್ನೂ ಪೋಸ್ಟರ್​​ನಲ್ಲಿ ಬಿಟ್ಟುಕೊಟ್ಟಿದೆ. ಪೋಸ್ಟ್​​ಗೆ ''ಇದು ವರ್ಷದ ಆ ಸಮಯ, ಪುಷ್ಪ ಮಾಸ್​​ ಜಾತ್ರೆ ಮಂಗಳವಾರ ಆರಂಭವಾಗಲಿದೆ. ಅತ್ಯಾಕರ್ಷಕ ಘೋಷಣೆ ಲೋಡ್ ಆಗುತ್ತಿದೆ. ಆಗಸ್ಟ್ 15ರಂದು ಪುಷ್ಪ 2 ಗ್ರ್ಯಾಂಡ್ ರಿಲೀಸ್ ಆಗಲಿದೆ" ಎಂದು ಕ್ಯಾಪ್ಷನ್​ ಕೊಟ್ಟಿದೆ.

'ಪುಷ್ಪ 2: ದಿ ರೂಲ್' ಈ ವರ್ಷ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ಬಿಡುಗಡೆಯ ಸುತ್ತಲಿನ ಉತ್ಸಾಹ ದೊಡ್ಡ ಮಟ್ಟದಲ್ಲಿದೆ. ಸಿನಿಮಾ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆಗಸ್ಟ್ 15ರಂದು ಪುಷ್ಪ ಸೀಕ್ವೆಲ್​ ಚಿತ್ರಮಂದಿರ ಪ್ರವೇಶಿಸಲಿದೆ. ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

ಇದನ್ನೂ ಓದಿ: ಹೊಸ ಪ್ರತಿಭೆಗಳ 'ಸಿಂಹಗುಹೆ' ಸಿನಿಮಾಗೆ ನಟ ಅನಿರುದ್ಧ್ ಸಾಥ್ - Simhaguhe

ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ ಹತ್ತಿರವಾಗುತ್ತಿದ್ದು, ಅಭಿಮಾನಿಗಳ ಸಂತಸಕ್ಕೆ ಮತ್ತಷ್ಟು ಕಾರಣಗಳಿವೆ. ಈ ಹಿಂದೆ ರಶ್ಮಿಕಾ ಮಂದಣ್ಣ, ಪುಷ್ಪ 2 ಚಿತ್ರ ಈ ಹಿಂದಿಗಿಂತಲೂ ದೊಡ್ಡದಾಗಲಿದೆ ಎಂದು ಸುಳಿವು ಬಿಟ್ಟುಕೊಟ್ಟಿದ್ದರು. ನಾಯಕ ನಟರ ಜನ್ಮದಿನಗಳಿರುವ ಹಿನ್ನೆಲೆ, ಟೀಸರ್ ಅಥವಾ ಗ್ಲಿಂಪ್ಸ್ ಹೊರಬೀಳುವ ಸಾಧ್ಯತೆಗಳಿವೆ. 2021ರಲ್ಲಿ ತೆರೆಕಂಡ 'ಪುಷ್ಪ: ದಿ ರೈಸ್' ಅಭೂತಪೂರ್ವ ಯಶಸ್ಸು ಕಂಡಿದ್ದು, ಪುಷ್ಪ 2: ದಿ ರೂಲ್ ಮೂಲಕ ಅಲ್ಲು ಅರ್ಜುನ್‌ ತೆರೆಗೆ ಮರಳಲಿದ್ದಾರೆ. ರಶ್ಮಿಕಾ ಮಂದಣ್ಣ ಅವರ ಬೇರೆ ಸಿನಿಮಾ ಈಗಾಗಲೇ ತೆರೆಕಂಡು ಯಶಸ್ವಿಯಾಗಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರ ಎಪಿಕ್ ಮಾಸ್ ಎಂಟರ್‌ಟೈನರ್ ಆಗಲಿದೆ ಎಂದು ಭರವಸೆ ನೀಡಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಪುಷ್ಪ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ತೆರೆಕಾಣಲಿದೆ.

ಇದನ್ನೂ ಓದಿ: 'ವಾರ್​-2'ನಲ್ಲಿ ಮತ್ತೊಬ್ಬ ತೆಲುಗು ಸ್ಟಾರ್​: ಈ ಕ್ಯಾರೆಕ್ಟರ್​ ತುಂಬಾ ಪವರ್‌ಫುಲ್​ ಅಂತೆ! - War 2 Movie

ETV Bharat Logo

Copyright © 2024 Ushodaya Enterprises Pvt. Ltd., All Rights Reserved.