ETV Bharat / entertainment

'ಮೆಜೆಸ್ಟಿಕ್ 2'ನಲ್ಲಿ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್; ಶೃತಿ ಜೊತೆ ಕ್ಲೈಮ್ಯಾಕ್ಸ್ ಶೂಟಿಂಗ್​ - Majestic 2 - MAJESTIC 2

ಇತ್ತೀಚೆಗೆ ರಾಮೋಹಳ್ಳಿಯಲ್ಲಿ ಮೆಜೆಸ್ಟಿಕ್ 2 ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದಿದೆ.

Majestic 2 Climax shooting
'ಮೆಜೆಸ್ಟಿಕ್ 2' ಶೂಟಿಂಗ್​ ಕ್ಷಣ (ETV Bharat)
author img

By ETV Bharat Karnataka Team

Published : Jun 28, 2024, 10:40 AM IST

ಸ್ಯಾಂಡಲ್​ವುಡ್​ನಲ್ಲಿ ಸಿಕ್ವೇಲ್ ಸಿನಿಮಾಗಳ ಸಂಖ್ಯೆ ಏರುತ್ತಿದೆ. ಮೆಜೆಸ್ಟಿಕ್ 2 ಚಿತ್ರ ಬರಲಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಬೆಂಗಳೂರಿನ ಕೇಂದ್ರಬಿಂದು ಮೆಜೆಸ್ಟಿಕ್‌ ಏರಿಯಾದಲ್ಲಿ ಏನೇನೆಲ್ಲಾ ಅಕ್ರಮ ಚಟುವಟಿಕೆಗಳು ನಡೆಯುತ್ತವೆ, ಅಲ್ಲಿನ ರೌಡಿಸಂ ಹೇಗಿರುತ್ತದೆ? ಎಂಬುದನ್ನು ಮೆಜೆಸ್ಟಿಕ್ 2 ಚಿತ್ರದ ಮೂಲಕ ನಿರ್ದೇಶಕ ರಾಮು ಹೇಳಲು ಹೊರಟಿದ್ದಾರೆ. ಈ ಚಿತ್ರದಲ್ಲಿ ನಿರ್ಮಾಪಕ - ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ.

ಇತ್ತೀಚೆಗೆ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ರಾಮೋಹಳ್ಳಿಯಲ್ಲಿ ನಡೆಯಿತು. ಪೆಟ್ರೋಲ್ ಪ್ರಸನ್ನ ಅವರ ತಾಯಿಯಾದ ಶೃತಿ ಅವರನ್ನು ವಿಲನ್​​ಗಳು ಕಿಡ್ಯಾಪ್​ ಮಾಡಿರುತ್ತಾರೆ. ನಾಯಕ ಭರತ್ ಹಾಗೂ ಪೆಟ್ರೋಲ್ ಪ್ರಸನ್ನ ಇಬ್ಬರೂ ಶೃತಿ ಅವರನ್ನು ಹುಡುಕಿಕೊಂಡು ಬರುವ ದೃಶ್ಯವನ್ನು ಅಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ಇದನ್ನೂ ಓದಿ: ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸುತ್ತಿದೆ ರೂಪಾ ರಾವ್ ನಿರ್ಮಾಣದ 'ಕೆಂಡ' ಚಿತ್ರ - Kenda Movie

ರೌಡಿಸಂ ಹಾಗೂ ಆ್ಯಕ್ಷನ್ ಬೇಸ್ ಕಥಾಹಂದರ ಹೊಂದಿರುವ ಮೆಜೆಸ್ಟಿಕ್ 2 ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ಬಣ್ಣ ಹಚ್ಚಿದ್ದಾರೆ. ಹಿರಿಯ ನಟಿ ಶೃತಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಅಮ್ಮಾ ಎಂಟರ್‌ ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಮೆಜೆಸ್ಟಿಕ್ ಚಿತ್ರ ಹಿಟ್ ಆದಂತೆ ಮೆಜೆಸ್ಟಿಕ್ 2 ಸಿನಿಮಾ ಹಿಟ್ ಆಗುತ್ತಾ ಎಂಬುದನ್ನು ತಿಳಿಯಲು ಕೆಲ ದಿನಗಳವರೆಗೆ ಕಾಯಬೇಕಿದೆ.

ಇದನ್ನೂ ಓದಿ: 'ಒಂದು ಮೊಟ್ಟೆಯ ಕಥೆ'ಯೊಂದಿಗೆ ರಾಜ್ ಬಿ ಶೆಟ್ಟಿ 'ರೂಪಾಂತರ': ಸದ್ಯದಲ್ಲೇ ಹೊಸ ಸಿನಿಮಾ ನಿಮ್ಮ ಮುಂದೆ - Roopantara

ETV Bharat Logo

Copyright © 2024 Ushodaya Enterprises Pvt. Ltd., All Rights Reserved.