ಲಂಡನ್, ಇಂಗ್ಲೆಂಡ್: ನಟಿ ಪ್ರಿಯಾಂಕಾ ಚೋಪ್ರಾ ಅಪ್ಪಟ ದೇಸಿ ಹುಡುಗಿ ಎಂಬುದನ್ನು ಅನೇಕ ಬಾರಿ ಸಾಬೀತು ಪಡಿಸುತ್ತಲೇ ಇದ್ದಾರೆ. ಹಾಲಿವುಡ್ಗೆ ಹಾರಿ, ನಿಕ್ ಜೋನಸ್ ಕೈ ಹಿಡಿದರೂ ಭಾರತೀಯ ಸಂಪ್ರದಾಯಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ಸುದ್ದಿಯಾಗುತ್ತಾರೆ. ಇದೀಗ ಅದೇ ರೀತಿ ಸದ್ದು ಮಾಡುತ್ತಿದ್ದಾರೆ. ಲಂಡನ್ನಲ್ಲಿ ತಮ್ಮ ಪ್ರೀತಿಯ ಪತಿ ನಿಕ್ ಜೋನಸ್ಗಾಗಿ ಕರ್ವಾಚೌತ್ ಆಚರಿಸಿದ್ದಾರೆ. ಅದು ಕೊಂಚ ಫಿಲ್ಮಿ ಸ್ಟೈಲ್ನಲ್ಲಿ.
ಕರ್ವಾ ಚೌತ್ ಸಂಭ್ರವನ್ನು ವಿಶೇಷವಾಗಿ ಮತ್ತು ಸಾಮಾನ್ಯ ಸೈಲ್ನಲ್ಲಿ ನಟಿ ಆಚರಿಸಿದ್ದಾರೆ. ಕಾಫಿ ಬಣ್ಣದ ಟ್ರಾಕ್ ಸೂಟ್ಗೆ ಕೆಂಪು ಬಣ್ಣದ ದುಪ್ಪಟ್ಟಾ ತಲೆ ಮೇಲೆ ಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಫೋಟೋ ಹಂಚಿಕೊಂಡಿರುವ ನಟಿ, ಹಬ್ಬವನ್ನು ಸರಳ ಮೆಹಂದಿಯೊಂದಿಗೆ, ಸಿಂಪಲ್ ಆಗಿ ಆಚರಿಸಿರುವುದು ಕಂಡು ಬಂದಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮೊದಲ ಫೋಟೋದಲ್ಲಿ ನಟಿ ಪ್ರಿಯಾಂಕಾ ತಮ್ಮ ಕರ್ವಾ ಚೌತ್ ವ್ರತ ಮುಗಿಯುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ನಿಕ್ ತಮ್ಮ ಮದ್ದು ಮಡದಿಗೆ ನೀರು ಕುಡಿಸುವ ಮೂಲಕ ಉಪವಾಸ ಮುಗಿಸಿರುವ ಚಿತ್ರ ಕಂಡಿದೆ. ಎರಡನೇ ಚಿತ್ರದಲ್ಲಿ ದಂಪತಿಗಳಿಬ್ಬರು ಪ್ರಿಯಾಂಕಾ ತಾಯಿ ಮಧು ಚೋಪ್ರಾಗೆ ಕರೆ ಮಾಡಿರುವುದು ಕಂಡು ಬಂದಿದೆ. ಮತ್ತೊಂದು ಫೋಟೋದಲ್ಲಿ ಕರ್ವಾ ಚೌತ್ ವ್ರತ ಆಚರಿಸುತ್ತಿರುವ ಮುದ್ದಿನ ಮಡದಿಗೆ ನಿಕ್ ಬರೆದಿರುವ ಪತ್ರವನ್ನು ಪ್ರೀತಿಯಿಂದ ನಟಿ ಓದುತ್ತಿರುವುದು ಕಾಣಬಹುದಾಗಿದೆ.
ಕರ್ವಾಚೌತ್ನ ಸಂಪ್ರದಾಯ ಆಚರಣೆಯಲ್ಲಿ ಮೆಹಂದಿ ಕೂಡ ಭಾಗವಾಗಿದೆ. ಈ ಬಾರಿ ತುಂಬಾ ಸರಳವಾಗಿ ಮೆಹಂದಿ ಧರಿಸಿರುವ ನಟಿ. ನಿಕ್ ಹೆಸರಿನ ಜೊತೆಗೆ ಹೃದಯದ ಚಿಹ್ನೆ ಮತ್ತು ನಿಕ್ ಹುಟ್ಟಿದ ದಿನವನ್ನು ಹಾಕಿಸಿಕೊಂಡಿರುವುದು ವಿಶೇಷವಾಗಿದೆ.
ಎಲ್ಲರಿಗೂ ಕರ್ವಾ ಚೌತ್ ಶುಭಾಶಯವನ್ನು ನಟಿ ಕೋರಿದ್ದು, ಇದು ಫಿಲ್ಮಿ ಸ್ಟೈಲ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಭಾರತೀಯ ಹಿಂದು ವಿವಾಹಿತ ಮಹಿಳೆಯರಿ ಪತಿಯ ಆರೋಗ್ಯ, ಆಯಸ್ಸಿಗಾಗಿ ಆಚರಿಸುವ ಬ್ರತವಾಗಿದೆ. ಬೆಳಗ್ಗೆಯಿಂದ ಉಪವಾಸ ನಡೆಸುವ ಮಹಿಳೆಯರು ರಾತ್ರಿ ಚಂದ್ರನ ದರ್ಶನದ ಬಳಿಕ ಪತಿ ಕೈಯಿಂದ ನೀರು ಕುಡಿಯುವ ಮೂಲಕ ಉಪವಾಸ ಮುರಿಯುತ್ತಾರೆ.
ಪ್ರಿಯಾಂಕಾ ಮತ್ತು ನಿಕ್ 2018ರಲ್ಲಿ ಮದುವೆಯಾಗಿದ್ದು, ಹಿಂದೂ ಸಂಪ್ರದಾಯ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಜೋದ್ಪುರ್ದ ಉಮೈದ್ ಭವನ್ ಅರಮನೆಯಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಈ ದಂಪತಿಗಳು ಬಾಡಿಗೆ ತಾಯ್ತನದ ಮೂಲಕ 2022ರಲ್ಲಿ ಮಾಲ್ತಿ ಮೇರಿಯ ಎಂಬ ಮಗುವನ್ನು ಪಡೆದಿದ್ದಾರೆ.
ವೃತ್ತಿ ಜೀವನದಲ್ಲಿ ಸಾಕಷ್ಟು ಬ್ಯುಸಿಯಾಗಿರುವ ನಟಿ ಸದ್ಯ ರುಸ್ಸೊ ಬ್ರದರ್ಸ್ 'ಸಿಟಾಡೆಲ್' ಎರಡನೇ ಸೀಸನ್ನಲ್ಲಿ ಕಾರ್ಯ ನಿರತರಾಗಿದ್ದಾರೆ. ಇದರ ಜೊತೆಗೆ ಫಾಂಕ್ ಇ ಫ್ಲವರ್ ನಿರ್ದೇಶನದ 'ದಿ ಬ್ಲಫ್' ಚಿತ್ರದಲ್ಲೂ ತೊಡಗಿದ್ದಾರೆ.
ಇದನ್ನೂ ಓದಿ: ಅತಿಕ್ರಮ ಪ್ರವೇಶಿಸಿ ಖಾಲಿ ಜಾಗ ಕಬಳಿಸಿದ ಆರೋಪ: ನಟ ಮಯೂರ್ ಪಟೇಲ್ ವಿರುದ್ಧ ಎಫ್ಐಆರ್