ETV Bharat / entertainment

95 ನಿಮಿಷಗಳ ಥ್ರಿಲ್ಲರ್ ಕಥೆ: 'ಪ್ರಕರಣ ತನಿಖಾ ಹಂತದಲ್ಲಿದೆ' ಬಿಡುಗಡೆಗೆ ರೆಡಿ - PRAKARANA TANIKHA HANTADALLIDE

ಕನ್ನಡ ಚಿತ್ರರಂಗದಲ್ಲೀಗ ವಿಭಿನ್ನ ಶೀರ್ಷಿಕೆಯ ಮೂಲಕ ಗಮನ ಸೆಳೆದಿರುವ 'ಪ್ರಕರಣ ತನಿಖಾ ಹಂತದಲ್ಲಿದೆ' ಸಿನಿಮಾ ಇದೇ ಶುಕ್ರವಾರ ತೆರೆಕಾಣಲಿದೆ.

Prakarana Tanikha Hantadallide Poster
'ಪ್ರಕರಣ ತನಿಖಾ ಹಂತದಲ್ಲಿದೆ' ಬಿಡುಗಡೆಗೆ ರೆಡಿ (Photo: Film Poster)
author img

By ETV Bharat Entertainment Team

Published : Oct 16, 2024, 9:20 AM IST

ಚಿತ್ರವೊಂದರ ಶೀರ್ಷಿಕೆ ಸಿನಿಪ್ರೇಮಿಗಳಿಗೆ ಸಿಗುವ ಮೊದಲ ಆಮಂತ್ರಣ. ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಕೆಲಸವನ್ನು ಮೊದಲು ಟೈಟಲ್​ಗಳು ಮಾಡುತ್ತವೆ. ಅದರಂತೆ, ಕನ್ನಡ ಚಿತ್ರರಂಗದಲ್ಲೀಗ ಗಮನ ಸೆಳೆದಿರುವ ಸಿನಿಮಾ 'ಪ್ರಕರಣ ತನಿಖಾ ಹಂತದಲ್ಲಿದೆ'. ಹೆಸರು ಹೇಳಿದ ಕೂಡಲೇ ಏನಿದು ಪ್ರಕರಣ? ಯಾವ ತನಿಖೆ ಬಗ್ಗೆ ಹೇಳಲಿದೆ? ಅನ್ನೋ ಕುತೂಹಲ ಕೇಳುಗರಲ್ಲಿ ಮೂಡೋದು ಸಹಜ.

ಸುಂದರ್ ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್​ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಈ ಮೂಲಕವೇ ಭಿನ್ನ ಕಥಾನಕದ ಸುಳಿವು ಬಿಟ್ಟು ಕೊಟ್ಟಿದ್ದ 'ಪ್ರಕರಣ ತನಿಖಾ ಹಂತದಲ್ಲಿದೆ' ಕಥೆಯ ಬಗ್ಗೆ ಒಂದು ಕಲ್ಪನೆ ಮೂಡಿಸಿಕೊಂಡಿದ್ದ ಪ್ರೇಕ್ಷಕರೀಗ ಸಂಪೂರ್ಣ ಸಿನಿಮಾ ವೀಕ್ಷಿಸುವ ಕಾತರದಲ್ಲಿದ್ದಾರೆ. ಇಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ತೆರೆಗಾಣಲು ಕ್ಷಣಗಣನೆ ಶುರುವಾಗಿದೆ.

ಹೊಸತೇನನ್ನೋ ಸೃಷ್ಟಿಸಬೇಕೆಂಬ ತುಡಿತದೊಂದಿಗೆ ತಯಾರಾಗಿರುವ ಈ ಚಿತ್ರ ಈಗಾಗಲೇ ಟೈಟಲ್ ಟ್ರ್ಯಾಕ್, ಪೋಸ್ಟರ್, ಟ್ರೇಲರ್​ ಮುಂತಾದವುಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಶೀರ್ಷಿಕೆಯೇ ಇದೊಂದು ಕ್ರೈಂ ಜಾನರಿನ ಚಿತ್ರವೆಂಬಂಬುದನ್ನು ಸೂಚಿಸುವುದು ಸತ್ಯ. ಆದರೆ, ಅದೆಲ್ಲದರಾಚೆಗಿನ ಬೆರಗುಗಳನ್ನು 95 ನಿಮಿಷಗಳ ಈ ಥ್ರಿಲ್ಲರ್ ಸಿನಿಮಾ ಬಚ್ಚಿಟ್ಟುಕೊಂಡಿದೆ ಎಂಬ ಭರವಸೆ ಚಿತ್ರ ತಂಡದಲ್ಲಿದೆ.

ಮಹೀನ್ ಕುಬೇರ್ 'ಪ್ರಕರಣ ತನಿಖಾ ಹಂತದಲ್ಲಿದೆ' ಚಿತ್ರದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ, ಮುತ್ತುರಾಜ್ ಟಿ, ರಾಜ್ ಗಗನ್, ಚಿಂತನ್ ಕಂಬಣ್ಣ ಸೇರಿದಂತೆ ಮೊದಲಾದವರ ತಾರಾಗಣವಿದೆ.

ಇದನ್ನೂ ಓದಿ: ದೀಪಾವಳಿಗೆ 'ಬಘೀರ'ನ ಅಬ್ಬರ ಶುರು: 'ಕೆಜಿಎಫ್​' ಪ್ರಶಾಂತ್‌ ನೀಲ್‌ ಕಥೆಯ ಸಿನಿಮಾವಿದು; ನಾಳೆ ಫಸ್ಟ್ ಸಾಂಗ್​ ರಿಲೀಸ್​

ಮೋಹನ್ ಎಂ.ಎಸ್ ಮತ್ತು ಜಗದೀಶ್ ಆರ್.ಜೆ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಶಿವೋಂ ಸಂಗೀತ ನಿರ್ದೇಶನ ಮತ್ತು ನಾನಿಕೃಷ್ಣ ಸಂಕಲನ ಈ ಚಿತ್ರಕ್ಕಿದೆ. ವಿ ಎಫ್ ಎಕ್ಸ್ ಜವಾಬ್ದಾರಿಯನ್ನು ಲಕ್ಷ್ಮೀಪತಿ ಎಂ.ಕೆ ನಿಭಾಯಿಸಿದ್ದಾರೆ. ಬೆಂಗಳೂರು, ಕನಕಪುರ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

Prakarana Tanikha Hantadallide film
ಮಹೀನ್ ಕುಬೇರ್ ನಟನೆಯ 'ಪ್ರಕರಣ ತನಿಖಾ ಹಂತದಲ್ಲಿದೆ' ಬಿಡುಗಡೆಗೆ ರೆಡಿ (Photo: ETV Bharat)

ಇದನ್ನೂ ಓದಿ: ಬಿಗ್​ ಬಾಸ್​​ ಶೋನಲ್ಲಿ ಜಗದೀಶ್ ಅಶ್ಲೀಲ ಪದ ಬಳಕೆ: 'ಎಲ್ಲವೂ ಗಮನದಲ್ಲಿದೆ' - ಈ ವಾರವಾದ್ರೂ ಸೀರಿಯಸ್​​ ಕ್ಲಾಸ್​ ಕೊಡ್ತಾರಾ ಕಿಚ್ಚ

ವಿಶೇಷವೆಂದರೆ, ರಂಗಭೂಮಿಯಲ್ಲಿ ಹತ್ತಾರು ವರ್ಷಗಳಿಂದ ಪಳಗಿಕೊಂಡಿದ್ದವರೆಲ್ಲ ಸೇರಿ ಈ ಚಿತ್ರವನ್ನು ರೂಪಿಸಿದ್ದಾರೆ. ರಂಗಭೂಮಿಯ ವಾತಾವರಣದಲ್ಲಿಯೇ ಜೀವ ಪಡೆದಿರುವ ಈ ಚಿತ್ರವನ್ನು ಚಿಂತನ್ ಕಂಬಣ್ಣ ನಿರ್ಮಾಣ ಮಾಡಿದ್ದಾರೆ. ಕರದಾಯಾಮ ಸ್ಟುಡಿಯೋಸ್ ಬ್ಯಾನರ ಅಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ಸಿನಿಮಾ ಈ ವಾರ ಅಂದರೆ, ಅಕ್ಟೋಬರ್ 18 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ. ಇದೇ ಶುಕ್ರವಾರ ಚಿತ್ರಮಂದಿರ ಪ್ರವೇಶಿಸಲಿರುವ ವಿಭಿನ್ನ ಶೀರ್ಷಿಕೆಯ ಈ ಸಿನಿಮಾವನ್ನು ಸಿನಿಪ್ರಿಯರು ಹೇಗೆ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.