ETV Bharat / entertainment

'ಪೌಡರ್' ಸಕ್ಸಸ್​ಗಾಗಿ ದೇವರ ಮೊರೆಹೋದ ದಿಗಂತ್​​: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ - Powder Team Visits Temple

ಜನಾರ್ಧನ್​ ಚಿಕ್ಕಣ್ಣ ನಿರ್ದೇಶನದ ಹಾಗೂ ದಿಗಂತ್ ಮಂಚಾಲೆ​, ಧನ್ಯಾ ರಾಮ್​​ಕುಮಾರ್ ಅಭಿನಯದ ಮುಂದಿನ ಸಿನಿಮಾ ಪೌಡರ್​. ಸಿನಿಮಾ ಬಿಡುಗಡೆಗೆ ಇನ್ನೊಂದೇ ದಿನ ಬಾಕಿ. ಆಗಸ್ಟ್ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಚಿತ್ರದ ಯಶಸ್ಸಿಗಾಗಿ ತಂಡ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದೆ.

'powder' team visits temple
ಸಿನಿಮಾ ಸಕ್ಸಸ್​ಗಾಗಿ ದೇವರ ಮೊರೆಹೋದ 'ಪೌಡರ್' ಚಿತ್ರತಂಡ (ETV Bharat)
author img

By ETV Bharat Entertainment Team

Published : Aug 21, 2024, 3:59 PM IST

ಸ್ಟಾರ್​ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ, ಚಿತ್ರಮಂದಿರಗಳಿಗೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲೂ ಇಳಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದ ಸಂದರ್ಭದಲ್ಲೇ ಬಂದ 'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಸಿನಿಮಾಗಳ ಯಶಸ್ಸು ಸ್ಯಾಂಡಲ್​ವುಡ್​ನಲ್ಲಿ ಹೊಸ ಹುರುಪು ಮೂಡಿಸಿದೆ. ಈ ಸಿನಿಮಾಗಳ ಬೆನ್ನಲ್ಲೇ ಮತ್ತಷ್ಟು ಸ್ಯಾಂಡಲ್​ವುಡ್​​ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

ಒಂದೊಳ್ಳೆ ಕಂಟೆಂಟ್ ಜೊತೆಗೆ ಎಂಟರ್​​ಟೈನ್ಮೆಂಟ್​​ ಇದ್ರೆ ನಿಜವಾಗಿಯೂ ಸಿನಿಮಾಗಳು ಗೆಲ್ಲುತ್ತವೆ ಅನ್ನೋದಕ್ಕೆ ಮೇಲಿನ ಎರಡು ಸಿನಿಮಾಗಳೇ ಸಾಕ್ಷಿ.‌ ಇದೇ ಹುರುಪಿನಲ್ಲಿ ಸಾಕಷ್ಟು ಸಿನಿಮಾಗಳು ಗೆಲುವನ್ನು ನಿರೀಕ್ಷಿಸುತ್ತಿವೆ. ಈ ಸಾಲಿನಲ್ಲಿ 'ಪೌಡರ್' ಕೂಡಾ ಒಂದು. ಟೈಟಲ್​, ಪೋಸ್ಟರ್ಸ್, ಟ್ರೇಲರ್‌ನಿಂದ ಸದ್ದು ಮಾಡುತ್ತಿರುವ ಚಿತ್ರದ ಪ್ರಮೋಶನ್​​ ಕೂಡಾ ಬಿರುಸಿನಿಂದ ಸಾಗಿದೆ.

'powder' team visits temple
ಸಿನಿಮಾ ಸಕ್ಸಸ್​ಗಾಗಿ ದೇವರ ಮೊರೆಹೋದ 'ಪೌಡರ್' ಚಿತ್ರತಂಡ (ETV Bharat)

ದೂದ್ ಪೇಡಾ ದಿಗಂತ್, ಧನ್ಯಾ ರಾಮ್​ಕುಮಾರ್ ಮುಖ್ಯಭೂಮಿಕೆಯ ಹಾಗೂ ರಂಗಾಯಣ ರಘು, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರದ ಕನ್ನಡದ ಬಹುನಿರೀಕ್ಷಿತ ಹಾಸ್ಯ ಪ್ರಧಾನ ಚಿತ್ರವೇ 'ಪೌಡರ್'. ಸಿನಿಮಾ ಸಕ್ಸಸ್​ಗಾಗಿ‌ ನಟ ದಿಂಗತ್, ನಿರ್ಮಾಪಕ ಕಾರ್ತಿಕ್​​​ ಗೌಡ, ಯೋಗಿ ಜಿ.ರಾಜ್ ದೇವರ ಮೊರೆ ಹೋಗಿದ್ದಾರೆ‌. ಮೈಸೂರಿನ ಚಾಮುಂಡೇಶ್ವರಿ ತಾಯಿ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸಿ, ಪ್ರಾರ್ಥನೆ ಸಲ್ಲಿಸಿದ್ದಾರೆ.

ಇತ್ತೀಚೆಗಷ್ಟೇ ಪ್ರಚಾರದ ಭಾಗವಾಗಿ 'ಪೌಡರ್ ಹಬ್ಬ' ಎಂಬ ಹೆಸರಿನಲ್ಲಿ ಚಿತ್ರತಂಡ ಈವೆಂಟ್‌ವೊಂದನ್ನು ಹಮ್ಮಿಕೊಂಡಿತ್ತು. ಸಲಗ ದುನಿಯಾ ವಿಜಯ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಟಿ ಐಂದ್ರಿತಾ ರೈ, ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಹಲವರು ಸಮಾರಂಭದಲ್ಲಿದ್ದರು. ಸಿನಿಮಾ ಸೆನ್ಸಾರ್​ ಪರೀಕ್ಷೆಯಲ್ಲಿ ಪಾಸಾಗಿ 'ಯು/ಎ' ಸರ್ಟಿಫಿಕೇಟ್​ ಕೂಡಾ​​ ಪಡೆದುಕೊಂಡಿದೆ. ನಿಗೂಢ 'ಪೌಡರ್'​ ಪ್ರಭಾವಕ್ಕೊಳಗಾಗಿ ಯುವಕರು ಸಿರಿವಂತರಾಗಲು ಮಾಡುವ ಪ್ರಯತ್ನಗಳೇ ಪೌಡರ್ ಕಥೆ.

ಇದನ್ನೂ ಓದಿ: ಇನ್​​​​ಸ್ಟಾಗ್ರಾಮ್​ನಲ್ಲಿ ಪಿಎಂ ಮೋದಿ ಹಿಂದಿಕ್ಕಿದ ಶ್ರದ್ಧಾ ಕಪೂರ್​​: ಅತಿ ಹೆಚ್ಚು ಫಾಲೋವರ್ಸ್​​​ ಲಿಸ್ಟ್​​ನಲ್ಲಿ ಮೂರನೇ ಸ್ಥಾನ - Most Followed Indian

ಅನಿರುದ್ಧ್ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್, ರವಿಶಂಕರ್ ಗೌಡ ಕೂಡಾ ತಾರಾಬಳಗದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಕಾರ್ತಿಕ್ ಗೌಡ, ಯೋಗಿ ಜಿ.ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸಿದ್ದಾರೆ. ಟ್ರೇಲರ್‌ನಿಂದಲೇ ಚಿತ್ರರಂಗ ಅಲ್ಲದೇ ಸಿನಿಪ್ರೇಕ್ಷಕರಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿರುವ ಪೌಡರ್ ಆಗಸ್ಟ್ 23ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ಕೋಲ್ಕತ್ತಾ ವೈದ್ಯೆಯ ರೇಪ್​​ ಕೇಸ್​ ವಿರುದ್ಧ ಧ್ವನಿ ಎತ್ತಿದ ಮಾಜಿ ಸಂಸದೆಗೆ ಅತ್ಯಾಚಾರ ಬೆದರಿಕೆ! - Mimi Chakraborty Faces Rape Threats

ETV Bharat Logo

Copyright © 2024 Ushodaya Enterprises Pvt. Ltd., All Rights Reserved.