ETV Bharat / entertainment

ತಂಡವಾಗಿ ಬಂದು 'ಒಂದು ಸರಳ ಪ್ರೇಮಕಥೆ' ವೀಕ್ಷಿಸಿದ ಗೊರಗುಂಟೆಪಾಳ್ಯ ಮಂದಿ - Ondu Sarala Prema Kathe

'ಒಂದು ಸರಳ ಪ್ರೇಮಕಥೆ' ಸಿನಿಮಾಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ.

Ondu Sarala Prema Kathe
ಒಂದು ಸರಳ ಪ್ರೇಮಕಥೆ
author img

By ETV Bharat Karnataka Team

Published : Feb 10, 2024, 2:24 PM IST

ತಂಡವಾಗಿ ಬಂದು 'ಒಂದು ಸರಳ ಪ್ರೇಮಕಥೆ' ವೀಕ್ಷಿಸಿದ ಗೊರಗುಂಟೆಪಾಳ್ಯ ಮಂದಿ

ಕನ್ನಡ ಚಿತ್ರರಂಗದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಮೂಡಿ ಬರುತ್ತಿವೆ. ಪ್ರೇಕ್ಷಕರನ್ನು ರಂಜಿಸುವಲ್ಲಿ ಕನ್ನಡ ಚಿತ್ರಗಳು ಯಶ ಕಾಣುತ್ತಿವೆ. ಅದರಂತೆ, ನಟ ವಿನಯ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಶನ್​ನ 'ಒಂದು ಸರಳ ಪ್ರೇಮಕಥೆ' ನಿನ್ನೆ, ಶುಕ್ರವಾರದಂದು ಚಿತ್ರಮಂದಿರ ಪ್ರವೇಶಿಸಿದೆ. ಅದ್ಧೂರಿಯಾಗಿ ತೆರೆಕಂಡ ಬಹುನಿರೀಕ್ಷಿತ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಬಹತೇಕ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಚಿತ್ರಮಂದಿರಕ್ಕೆ ಭೇಟಿ ಕೊಟ್ಟು 'ಒಂದು ಸರಳ ಪ್ರೇಮಕಥೆ' ವೀಕ್ಷಿಸುತ್ತಿದ್ದಾರೆ.

ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಾಗಿರೋ ಈ ಚಿತ್ರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿಂಪಲ್​ ಸುನಿ ಅವರ ನಿರೂಪಣಾ ಶೈಲಿ, ಹ್ಯೂಮರ್​, ಎಮೋಷನ್ ಹೀಗೆ ನಾನಾ ಅಂಶಗಳು ಗಮನ ಸೆಳೆದಿವೆ. ನಾಯಕ ವಿನಯ್ ರಾಜ್​​​ಕುಮಾರ್, ನಾಯಕಿಯರಾದ ಸ್ವಾತಿಷ್ಠ ಕೃಷ್ಣನ್,‌ ಮಲ್ಲಿಕಾ ಅವರ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ಸಿನಿಪ್ರಿಯರಿಗೆ ಕನೆಕ್ಟ್ ಆಗುತ್ತಿದೆ. ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಈ ಒಂದು ಸರಳ ಪ್ರೇಮಕಥೆ ಸಿನಿಮಾದ ಕ್ರೇಜ್ ನಿಧಾನವಾಗಿ ಗಾಂಧಿನಗರವನ್ನು ಆವರಿಸಿಕೊಳ್ಳುತ್ತಿದೆ.

ಅಭಿಮಾನಿಗಳ ಮೆಚ್ಚುಗೆ: ಪ್ರೇಮಕಥೆಯ ಹಿತಾನುಭವ, ಮನರಂಜನೆಯ ರಸದೌತಣ ನೀಡುತ್ತಿರುವ 'ಒಂದು ಸರಳ ಪ್ರೇಮಕಥೆ' ಸಿನಿಮಾವನ್ನು ಬೆಂಗಳೂರಿನ ಗೊರಗುಂಟೆಪಾಳ್ಯದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್​​ಮೆಂಟ್​​ ಜನರು ಸೇರಿ ಒಂದು ಬಸ್​ನಲ್ಲಿ ಒರಾಯನ್ ಮಾಲ್​ಗೆ ಆಗಮಿಸಿ ವೀಕ್ಷಿಸಿದ್ದಾರೆ. ಚಿತ್ರದ ಪೋಸ್ಟರ್ ಹಿಡಿದು ಗುನುಗುನುಗು ಹಾಡು ಹೇಳಿ ಸಿನಿಮಾಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

ಒಂದು ಸರಳ ಪ್ರೇಮಕಥೆ ಮೆಚ್ಚಿದ ಧ್ರುವ: ಒಂದು ಸರಳ ಪ್ರೇಮಕಥೆ ಸಿನಿಮಾವನ್ನು ಸಿನಿರಸಿಕರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಸಹ ಮೆಚ್ಚಿ ಕೊಂಡಾಡುತ್ತಿದ್ದಾರೆ. ನಿನ್ನೆ ಬೆಂಗಳೂರಿನ ಮಂತ್ರಿ ಮಾಲ್​​ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ವೀಕ್ಷಿಸಿ ಖುಷಿಪಟ್ಟರು. ವಿನಯ್, ಸುನಿ ಹಾಗೂ ಇಡೀ ತಂಡದ ಶ್ರಮಕ್ಕೆ ತಮ್ಮ ಮೆಚ್ಚುಗೆ ಸೂಚಿಸಿದರು.

ಇದನ್ನೂ ಓದಿ: ಮಿಥುನ್ ಚಕ್ರವರ್ತಿಗೆ ಎದೆನೋವು: ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಾದ ನಟ

ಒಂದು ಸರಳ ಪ್ರೇಮಕಥೆ ವಿನಯ್ ರಾಜ್‌ಕುಮಾರ್‌ ಅವರಿಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ವಿಭಿನ್ನ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿ ಆಗಿದ್ದಾರೆ. ತಿಳಿ ಹಾಸ್ಯ, ಒನ್‌ಲೈನ್ ಡೈಲಾಗ್‌ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಇಂತಹ ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು‌ ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ.

ಇದನ್ನೂ ಓದಿ: ರಿಷಬ್​ ಪ್ರಗತಿ ದಾಂಪತ್ಯಕ್ಕೆ 8 ವರ್ಷಗಳ ಸಂಭ್ರಮ: ಕಾಂತಾರ ಸ್ಟಾರ್​ನ ಲವ್​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.