ETV Bharat / entertainment

ಬೆಂಗಳೂರಿನಲ್ಲಿ ಅನುಷ್ಕಾ ಶರ್ಮಾ ಬರ್ತ್​​ಡೇ: ಫೋಟೋ ಹಂಚಿಕೊಂಡ ಕೊಹ್ಲಿ - Anushka Birthday Celebration - ANUSHKA BIRTHDAY CELEBRATION

ನಟಿ ಅನುಷ್ಕಾ ಶರ್ಮಾ ಬರ್ತ್​​ಡೇ ಸೆಲೆಬ್ರೇಶನ್​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

Virat Anushka
ವಿರಾಟ್​​ ಅನುಷ್ಕಾ ದಂಪತಿ (ಈಟಿವಿ ಭಾರತ್, ಫೋಟೋ ಕೃಪೆ: ವಿರಾಟ್,​​ ಅನುಷ್ಕಾ ಇನ್​ಸ್ಟಾಗ್ರಾಮ್​​)
author img

By ETV Bharat Karnataka Team

Published : May 3, 2024, 1:16 PM IST

Updated : May 3, 2024, 1:47 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮೇ 1, ಬುಧವಾರದಂದು 36ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಪುತ್ರನ ಜನನಕ್ಕೂ ಮುನ್ನ ಕಾಣಿಸಿಕೊಂಡಿದ್ದ ನಟಿ, ಬಳಿಕ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ನಟಿಯ ಪ್ರಸ್ತುತ ಫೋಟೋಗಳೂ ಈವರೆಗೆ ಶೇರ್ ಆಗಿರಲಿಲ್ಲ. ಐಪಿಎಲ್​ ಪಂದ್ಯದಲ್ಲೂ ಅಭಿಮಾನಿಗಳು ಅನುಷ್ಕಾ ವಿಶೇಷವಾಗಿ ವಿರುಷ್ಕಾ ಕ್ಷಣಗಳನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ತಮ್ಮ 36ನೇ ಜನ್ಮದಿನವನ್ನು ನಮ್ಮ ಬೆಂಗಳೂರಿನಲ್ಲಿ ಪತಿ, ಸ್ಟಾರ್​ ಕ್ರಿಕೆಟರ್ ವಿರಾಟ್ ಕೊಹ್ಲಿ ಸೇರಿ ಇತರೆ ಆಟಗಾರರೊಂದಿಗೆ ಸೆಲೆಬ್ರೇಟ್​​ ಮಾಡಿಕೊಂಡಿದ್ದಾರೆ. ಇದೀಗ ವಿರುಷ್ಕಾ ಸೆಲೆಬ್ರೇಶನ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Virat Anushka
ಅನುಷ್ಕಾ ಶರ್ಮಾ ಬರ್ತ್​​ಡೇ ಸೆಲೆಬ್ರೇಶನ್​ (ಈಟಿವಿ ಭಾರತ್, ಫೋಟೋ ಕೃಪೆ: ವಿರಾಟ್,​​ ಅನುಷ್ಕಾ ಇನ್​ಸ್ಟಾಗ್ರಾಮ್​​)

ಅನುಷ್ಕಾ ಆತ್ಮೀಯರೊಂದಿಗೆ ತಮ್ಮ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಿದ್ದಾರೆ. ಜೀವನ ಸಂಗಾತಿ ವಿರಾಟ್​​ ಕೊಹ್ಲಿ ಮತ್ತು ಸಹ ಕ್ರಿಕೆಟಿಗರು ಸೇರಿ ಬೆರಳೆಣಿಕೆಯ ಜನರೊಂದಿಗೆ ಈ ಬಾರಿಯ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಐಶಾರಾಮಿ ರೆಸ್ಟೋರೆಂಟ್​​​ ಒಂದರಲ್ಲಿ​​​ ಪಾರ್ಟಿ ಆಯೋಜಿಸಿದ್ದರು.

ವಿರಾಟ್​ ಕೊಹ್ಲಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​ನಲ್ಲಿ, ಅನುಷ್ಕಾ ಹೆಸರಿನ ಮೆನುವನ್ನು ಒಳಗೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. ಮೆನುವಿನ ಕವರ್​ ಪೇಜ್​ನಲ್ಲಿ "ಸೆಲೆಬ್ರೇಟಿಂಗ್​ ಅನುಷ್ಕಾ" ಎಂದು ಬರೆಯಲಾಗಿದೆ. ಕೆಳಗೆ ಹೋಟೆಲ್​ನ ಹೆಸರಿದೆ. ಫೋಟೋ ಜೊತೆಗೆ, ''ನಂಬಲಾಗದ ಭೋಜನದ ಅನುಭವಕ್ಕಾಗಿ (Chef) ಮನು ಚಂದ್ರ ಅವರಿಗೆ ಧನ್ಯವಾದಗಳು. ನಮ್ಮ ಜೀವನದ ಅತ್ಯುತ್ತಮ ಆಹಾರ ಅನುಭವಗಳಲ್ಲಿ ಇದು ಒಂದು" ಎಂದು ಬರೆದುಕೊಂಡಿದ್ದಾರೆ. ಬೆಂಗಳೂರಿನ ರಾಯಲ್​ ರೆಸ್ಟೋರೆಂಟ್ ಲುಪಾದಲ್ಲಿ ಪಾರ್ಟಿ ನಡೆಸಿದ್ದಾರೆ ಎಂದು ಈ ಫೋಟೋ ಸೂಚಿಸಿದೆ.

ಇದನ್ನೂ ಓದಿ: ಅಂಬಾರಿ ಹೊತ್ತ ಅರ್ಜುನನ ಸಮಾಧಿಗೆ ದನಿ ಎತ್ತಿದ ಚಾಲೆಂಜಿಂಗ್​​ ಸ್ಟಾರ್ ದರ್ಶನ್​​ - Darshan

ವಿರಾಟ್ ಮತ್ತು ಅನುಷ್ಕಾ ಮೊದಲ ಬಾರಿಗೆ 2013ರ ಶಾಂಪೂ ಬ್ರ್ಯಾಂಡ್‌ ಒಂದರ ಜಾಹೀರಾತಿನ ಚಿತ್ರೀಕರಣ ವೇಳೆ ಭೇಟಿಯಾದರು. ಸ್ನೇಹ ಪ್ರೀತಿಗೆ ತಿರುಗಿ ಕೆಲ ಕಾಲ ಡೇಟಿಂಗ್​​ ನಡೆಸಿದ್ದರು. 2017ರಲ್ಲಿ, ಇಟಲಿಯ ಟಸ್ಕನಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. 2021ರಲ್ಲಿ ಮೊದಲ ಮಗು ವಾಮಿಕಾಳನ್ನು ಬರಮಾಡಿಕೊಂಡರು. ಈ ವರ್ಷದ ಆರಂಭದಲ್ಲಿ ಎರಡನೇ ಮಗು ಅಕಾಯ್​​​ನನ್ನು ಬರಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 'ನೀ ನನ್ನ ಜಗದ ಬೆಳಕು': ಮುದ್ದಿನ ಮಡದಿ ಅನುಷ್ಕಾ ಬರ್ತ್​ಡೇಗೆ ವಿರಾಟ್​​ ಸ್ಪೆಷಲ್​ ವಿಶ್​​ - Anushka Sharma Birthday

ಸಿನಿಮಾ ವಿಚಾರ ಗಮನಿಸುವುದಾದರೆ ಅನುಷ್ಕಾ ಶರ್ಮಾ ಕೊನೆಯದಾಗಿ 2018ರ ಡಿಸೆಂಬರ್​​ನಲ್ಲಿ ಝೀರೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಮುಂದೆ ಚಕ್ಡಾ ಎಕ್ಸ್‌ಪ್ರೆಸ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕ್ರಿಕೆಟ್​ ಲೆಜೆಂಡ್ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ. ಐದುವರೆ ವರ್ಷಗಳ ನಂತರ ಬರುತ್ತಿರುವ ಅನುಷ್ಕಾರ ಸಿನಿಮಾವಿದು. ಸ್ಪೋರ್ಟ್ಸ್​​ ಡ್ರಾಮಾ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

Last Updated : May 3, 2024, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.