ETV Bharat / entertainment

'ಫಿರ್​ ಆಯಿ ಹಸೀನ್​ ದಿಲ್ರುಬಾ' ಬಿಡುಗಡೆ ದಿನಾಂಕ ಫಿಕ್ಸ್: OTTಯಲ್ಲೇ ಬರಲಿದೆ ಸಿನಿಮಾ - Phir Aayi Hasseen Dillruba Release - PHIR AAYI HASSEEN DILLRUBA RELEASE

ಈ ಹಿಂದಿನ ಚಿತ್ರದಲ್ಲಿದ್ದಂತೆ ಪ್ರೀತಿ, ಮೋಸ ಮತ್ತು ಅಪರಾಧಗಳ ಸಸ್ಪೆನ್ಸ್​ನ ರೋಚಕತೆ ಫಿರ್​ ಆಯಿ ಹಸೀನ್​ ದಿಲ್ರುಬಾ ಚಿತ್ರದಲ್ಲಿಯೂ ಇರಲಿದ್ದು, ನೆಟ್​ಫ್ಲಿಕ್ಸ್​​ನಲ್ಲಿ ಆಗಸ್ಟ್ 9 ರಂದು ಬಿಡುಗಡೆಯಾಗಲಿದೆ.

Phir Aayi Hasseen Dillruba: Taapsee Pannu And Vikrant Massey's Film Set To Premiere On Netflix On THIS Date
ಫಿರ್​ ಆಯಿ ಹಸೀನ್​ ದಿಲ್ರುಬಾ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 15, 2024, 3:14 PM IST

ಹೈದರಾಬಾದ್​: 2021ರಲ್ಲಿ ಬಿಡುಗಡೆಯಾಗಿದ್ದ ಕ್ರೈಂ ಥ್ರಿಲ್ಲಿಂಗ್​ ಸಿನಿಮಾ 'ಹಸೀನ್ ದಿಲ್ರುಬಾ' ನಟಿ ತಾಪ್ಸಿ ಪನ್ನು ಮತ್ತು ನಟ ವಿಕ್ರಾಂತ್​ ಮೆಸ್ಸಿಗೆ ಹಿಟ್​ ನೀಡಿತ್ತು. ಇದೇ ಕಾರಣಕ್ಕೆ ಸಿನಿಮಾದ ಸಿಕ್ವೇಲ್​​​ ನಿರ್ಮಾಣಕ್ಕೆ ತಂಡ ಮುಂದಾಗಿತ್ತು. 'ಫಿರ್​ ಆಯಿ ಹಸೀನ್​ ದಿಲ್ರುಬಾ' ಮೂಲಕ ಈ ಜೋಡಿ ಮತ್ತೊಮ್ಮೆ ಜನರ ಮೋಡಿ ಮಾಡಲು ಸಜ್ಜಾಗಿದೆ. ಈ ಹಿಂದಿನ ಚಿತ್ರದಲ್ಲಿದ್ದಂತೆ ಪ್ರೀತಿ, ಮೋಸ ಮತ್ತು ಅಪರಾಧಗಳ ಸಸ್ಪೆನ್ಸ್​ನ ರೋಚಕತೆ ಈ ಚಿತ್ರದಲ್ಲಿಯೂ ಇರಲಿದೆ. ಈ ಚಿತ್ರಕ್ಕಾಗಿ ಕಾಯುತ್ತಿರುವ ಜನರಿಗೆ ಇದೀಗ ತಂಡ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ.

ಜಯಪ್ರದ್​ ದೇಸಾಯಿ ನಿರ್ದೇಶನಕ್ಕೆ ಕನಿಕಾ ಧಿಲ್ಲೊನ್​​ ಕಥೆ ಬರೆದಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಸನ್ನಿ ಕೌಶಲ್​ ಮತ್ತು ಜಿಮ್ಮಿ ಶೆರ್ಗಿಲ್​ ಸಹ ನಿರ್ದೇಶಕರಾಗಿದ್ದಾರೆ. ಆನಂದ್​ ಎಲ್​ ರಾಯ್​ ಅವರ ಕಲರ್ಸ್​​ ಯೆಲ್ಲೊ ಪ್ರೊಡಕ್ಷನ್​ ಮತ್ತು ಭೂಷಣ್​ ಕುಮಾರ್​ರ ಟಿ ಸೀರಿಸ್​​ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಸಿಕ್ಚೇಲ್​ ರೊಮಾನ್ಸ್​, ಕುತೂಹಲ ಹಾಗೂ ಅನಿರೀಕ್ಷಿತ ತಿರುವುಗಳನ್ನು ಹೊಂದಿದೆ.

ಚಿತ್ರದ ಪ್ರಮುಖ ಪಾತ್ರವಾಗಿರುವ ರಾಣಿ ಕಶ್ಯಪ್​ ಮತ್ತು ರಿಶಬ್​ ಸಕ್ಸೆನಾ ಅವರ ಈ ಪ್ರಯಾಣ ಆಗಸ್ಟ್​ 9ರಿಂದ ಪ್ರಾರಂಭವಾಗಲಿದೆ. ಈ ಹಿಂದಿನ ಕಥೆಯ ಮುಂದುವರೆದ ಭಾಗವಾಗಿರುವ ಅವರು ಆಗ್ರಾದಿಂದ ಪ್ರಾರಂಭವಾಗಲಿದೆ. ಈ ಹಿಂದಿನ ಚಿತ್ರದಲ್ಲಿ ಪೊಲೀಸರ ವಿಚಾರಣೆಯನ್ನು ಚಾಣಾಕ್ಷತೆಯಿಂದ ಎದುರಿಸಿದ್ದ ಜೋಡಿಯ ಹೊಸ ಹಾದಿ ಅಪಾಯದಿಂದ ಕೂಡಿದೆ. ಕಾರಣ ಅವರ ಜಾಡನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಸನ್ನಿ ಕೌಶಲ್​ರ ಅಭಿಮನ್ಯು ಪಾತ್ರ ಹೊಸ ಡ್ರಾಮಾ ದೊಂದಿಗೆ ಹೊಸ ಒಳಸಂಚುಗಳಲ್ಲಿ ಕಾಣಬಹುದಾಗಿದೆ. ಈ ಪ್ರೇಮಿಗಳು ಈ ಬಾರಿ ಜಿಮ್ಮಿ ಶೆರ್ಗಿಲ್ ಸೇರಿದಂತೆ ಹೊಸ ಶತ್ರುಗಳನ್ನು ಎದುರಿಸಲಿದ್ದಾರೆ.

ತಾಪ್ಸಿ ಪನ್ನು, ವಿಕ್ರಾಂತ್​ ಮೆಸ್ಸಿ ಮತ್ತು ಸನ್ನಿ ಕೌಶಲ್​ ಅವರ ಸಿಕ್ವೇಲ್​ನ ಚಿತ್ರೀಕರಣ​ 2023ರಲ್ಲೇ ಮುಗಿದಿದೆ. ಹಸೀನ್​ ದಿಲ್ರುಬಾ ಚಿತ್ರವನ್ನು ವಿನಿಲ್​ ಮ್ಯಾಥ್ಯೂ ನಿರ್ದೇಶಿಸಿದ್ದು, ಕನಿಕಾ ಧಿಲ್ಲೊನ್​​ ಕಥೆ ಬರೆದಿದ್ದರು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಬಂದರೂ 2021ರಲ್ಲಿ ನೆಟ್​ಫ್ಲಿಕ್ಸ್​​ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಹಿಂದಿ ಸಿನಿಮಾ ಇದಾಗಿತ್ತು. ಸಿನಿಮಾದ ಮೊದಲ ಭಾಗದಲ್ಲಿ ಹರ್ಷವರ್ಧನ್​ ರಾಣೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: 'ಕಲ್ಕಿ'ಗಾಗಿ ಹಾಕಿದ ಬಜೆಟ್​ ನೊಡಿ ಗಾಬರಿಯಾಗಿದ್ದ ಪ್ರಭಾಸ್​: ಅಭಿಮಾನಿಗಳಿಗೆ 'ಭೈರವ'ನ ಸ್ಪೆಷಲ್​ ಥ್ಯಾಂಕ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.