'ಪುಷ್ಪ 2: ದಿ ರೂಲ್' ಬಿಡುಗಡೆ ಹೊಸ್ತಿಲಲ್ಲಿರುವ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. ಸಿನಿಮಾದ ಪ್ರಮೋಶನ್ ಜೋರಾಗೇ ನಡೆಯುತ್ತಿದೆ. ನಿರ್ಮಾಪಕರು ಚಿತ್ರದ ಹೊಸ ಹಾಡು 'ಪೀಲಿಂಗ್ಸ್'ನ ಪ್ರೋಮೋವನ್ನು ಅನಾವರಣಗೊಳಿಸಿದ್ದಾರೆ. ಫೇಮಸ್ ಸಾಂಗ್ ಸಾಮಿ ಸಾಮಿ ಮಾದರಿಯಲ್ಲೇ ಈ ಹಾಡಿನ ಬೀಟ್ ಕೂಡಾ ಹೈ ಎನರ್ಜಿ ಹೊಂದಿದೆ. ಪ್ರೋಮೋದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಫೈರ್ ಕೆಮಿಸ್ಟ್ರಿ ಎದ್ದು ಕಾಣುತ್ತಿದ್ದು, ಹಾಡು ಹೇಗಿರಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
ಇತ್ತೀಚೆಗೆ ನಡೆದ ಪ್ರಮೋಶನ್ ಈವೆಂಟ್ನಲ್ಲಿ ಪ್ರೋಮೋದ ಒಂದು ನೋಟ ಒದಗಿಸಲಾಗಿದೆ. ಅಲ್ಲು ಅರ್ಜುನ್ ತಮ್ಮ ಸ್ಟೈಲಿಶ್, ಪವರ್ಫುಲ್ ಡ್ಯಾನ್ಸ್ ಸ್ಟೆಪ್ಸ್ಗೆ ಹೆಸರುವಾಸಿಯಾಗಿದ್ದಾರೆ. ರಶ್ಮಿಕಾ ಡ್ಯಾನ್ಸ್ ಕೂಡಾ ಕಡಿಮೆಯೇನಿಲ್ಲ. ನಾಯಕ ನಟ ಹಾಡಿನ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಶೇರ್ ಮಾಡಿದ ಅಲ್ಲು ಅರ್ಜುನ್, ಪೀಲಿಂಗ್ಸ್ ಪ್ರೋಮೋ ರಿಲೀಸ್. ಸಂಪೂರ್ಣ ಹಾಡು ಡಿಸೆಂಬರ್ 1ಕ್ಕೆ ಬಿಡುಗಡೆ ಎಂದು ಬರೆದುಕೊಂಡಿದ್ದಾರೆ.
'ಪುಷ್ಪ ಪಾತ್ರದಿಂದಾಗಿ ನನಗೆ ಪುಷ್ಪ 1ರಲ್ಲಿ ಹೆಚ್ಚು ನೃತ್ಯ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ ಅಭಿಮಾನಿಗಳು ಹಳೇ ಬನ್ನಿಯನ್ನು ಹಿಂದಿರುಗಿಸಲು ಒತ್ತಾಯಿಸಿದ್ದಾರೆ. ಈ ಹಾಡು ಭರ್ಜರಿಯಾಗಿರಲಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ' ಎಂದು ತಿಳಿಸಿದ್ದಾರೆ. ಪ್ರೋಮೋದಲ್ಲಿ ರಶ್ಮಿಕಾ ಮಂದಣ್ಣ ಕೂಡಾ ಮಿಂಚುತ್ತಿದ್ದು, ಹಾಡಿನಲ್ಲಿ ಅವರ ಹೈ ಎನರ್ಜಿ ಡ್ಯಾನ್ಸ್ ನೋಡಿ ಅಭಿಮಾನಿಗಳು ಕ್ರಶ್-ಮಿಕಾ ಎಂದು ಕರೆಯುತ್ತಾರೆ ಎಂದು ಅಲ್ಲು ಅರ್ಜುನ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಕೆಮಿಸ್ಟ್ರಿ ಕಂಡು ಹುಬ್ಬೇರಿಸಿದ ಫ್ಯಾನ್ಸ್: ವಿಡಿಯೋ ನೋಡಿ
The moment of the evening 😍
— Mythri Movie Makers (@MythriOfficial) November 29, 2024
Pushpa Raj and Srivalli dance for the #Angaaron song at the #Pushpa2IconicPressMeet 🫶
Watch the event live here!
▶️ https://t.co/BaDjjcImCM#Pushpa2TheRule#Pushpa2TheRuleOnDec5th
Icon Star @alluarjun @iamRashmika @aryasukku #FahadhFaasil… pic.twitter.com/6TjoMrvBVn
ಚಿತ್ರದ ಎಲ್ಲಾ ಆರು ಆವೃತ್ತಿಗಳಲ್ಲಿಯೂ (ಪ್ಯಾನ್ ಇಂಡಿಯಾ ಸಿನಿಮಾ) ಹಾಡಿನ ಹುಕ್ ಲೈನ್ ಮಾತ್ರ ಮಲಯಾಳಂನಲ್ಲಿರುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಇದು ಕೇರಳದ ಅಭಿಮಾನಿಗಳಿಗಿದು ಸ್ಪೆಷಲ್ ಟ್ರೀಟ್ ಅಂತಲೇ ಹೇಳಬಹುದು. ಇದು ಕೇರಳದ ಮೇಲಿನ ನನ್ನ ಪ್ರೀತಿಯನ್ನು ತೋರಿಸುವ ವಿಧಾನ ಎಂದು ಸಹ ತಿಳಿಸಿದ್ದಾರೆ. ಹಾಡಿನ ಹುಕ್ ಭಾಗವು ಮೂರು ಬಾರಿ ಬರಲಿದ್ದು, ಇದು ಪ್ರಪಂಚದಾದ್ಯಂತದ ಮಲಯಾಳಂ ಭಾಷಿಗರಲ್ಲಿ ಸಖತ್ ಸದ್ದು ಮಾಡಲಿದೆ. ಡಿಸೆಂಬರ್ 1 ರಂದು ಸಂಪೂರ್ಣ ಹಾಡು ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ನಾನು.... ಜೊತೆ ಕಾಣಿಸಿಕೊಳ್ಳಲು ಇಷ್ಟಪಡುವುದಿಲ್ಲ': ಸಮಂತಾರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ತಂದೆ ಹೀಗಂದಿದ್ದರು!
'ಪುಷ್ಪ 2' ಭರ್ಜರಿ ಪ್ರಮೋಶನ್ ಸಲುವಾಗಿ ಚಿತ್ರತಂಡ ಪಾಟ್ನಾ, ಬೆಂಗಳೂರು, ಚೆನ್ನೈ, ಕೋಲ್ಕತ್ತಾ, ಕೊಚ್ಚಿ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ದೊಡ್ಡ ನಗರಗಳಿಗೆ ಭೇಟಿ ಕೊಡುತ್ತಿದೆ. ಸಿನಿಮಾ ಮುಂದಿನ ಗುರುವಾರ, ಡಿಸೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆ ಫಹಾದ್ ಫಾಸಿಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.