ETV Bharat / entertainment

'ಒಂದು ಸರಳ ಪ್ರೇಮಕಥೆ' ಸಕ್ಸಸ್​: 25 ದಿನ ಪೂರೈಸಿದ ಸಂಭ್ರಮ - Cinema

ಇತ್ತೀಚೆಗೆ ತೆರೆಕಂಡ 'ಒಂದು ಸರಳ ಪ್ರೇಮಕಥೆ' ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ತಂಡವು 25 ದಿನಗಳ ಸಂಭ್ರಮಾಚರಿಸಿದೆ.

Ondu Sarala Prema Kathe
ಒಂದು ಸರಳ ಪ್ರೇಮಕಥೆ
author img

By ETV Bharat Karnataka Team

Published : Mar 6, 2024, 8:33 AM IST

ನಿರ್ದೇಶಕ ಸಿಂಪಲ್ ಸುನಿ ಹಾಗೂ ವಿನಯ್ ರಾಜ್​ಕುಮಾರ್ ಜೋಡಿಯ 'ಒಂದು ಸರಳ ಪ್ರೇಮಕಥೆ' ಸಿನಿಮಾ ಫೆ.8ರಂದು ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ‌ ಚಿತ್ರತಂಡ ಇತ್ತೀಚೆಗೆ ಖುಷಿ ಹಂಚಿಕೊಂಡು ಸಂಭ್ರಮಿಸಿದೆ.

ಈ ವೇಳೆ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ''ಸಕ್ಸಸ್ ಒಂದೊಂದು ಟೈಮ್​ನಲ್ಲಿ ಒಂದೊಂದು ಥರ ಡಿಫೈನ್ ಆಗುತ್ತದೆ. 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಯಶಸ್ವಿಯಾದಾಗ 75 ದಿನಕ್ಕೆ ಸಂಭ್ರಮಾಚರಣೆ ಮಾಡಿದ್ದೆವು. ಟಿವಿ ರೈಟ್ಸ್ ಜೊತೆಗೆ ಒಂದು ಕಾರ್ಯಕ್ರಮ ಕೊಡುವುದೆಂದು ನಿರ್ಧರಿಸಿದ್ದೆವು. ಇವತ್ತು ಯಾವುದಾದರೂ ಟಿವಿ ಚಾನೆಲ್​ನವರು ಕರೆದು ಮಾತನಾಡಿಸಿದರೆ ಅದು ಸಕ್ಸಸ್ ಅಂತ. ಜನ ನೋಡಲಿಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದಾರೆ ಎಂಬುದೇ ಯಶಸ್ಸು. ರಿರ್ಟನ್ಸ್ ಆಗಿದೆ, ಹಾಗೆಯೇ ಖುಷಿ ಇದೆ. ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗೆ ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್​ನಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ'' ಎಂದರು.

Ondu Sarala Prema Kathe
ಒಂದು ಸರಳ ಪ್ರೇಮಕಥೆ

ಬಳಿಕ ನಟ ವಿನಯ್ ರಾಜ್​ಕುಮಾರ್ ಮಾತನಾಡಿ, ''ತುಂಬಾ ಖುಷಿಯಾಗುತ್ತಿದೆ. ಫ್ಯಾಮಿಲಿ ಎಂಟರ್​​ ಟೈನರ್. ಸ್ವಚ್ಛ ಕಾಮಿಡಿಯೊಂದಿಗೆ ಇಡೀ ಫ್ಯಾಮಿಲಿ ಕುಳಿತು ನೋಡುವ ಚಿತ್ರ. ಜನರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಜನರು ನನ್ನನ್ನು, ಸಿನಿಮಾ, ನಿರ್ದೇಶಕ, ಮ್ಯೂಸಿಕ್ ಹಾಗೂ ಟೆಕ್ನಿಷಿಯನ್ಸ್‌ ಕೆಲಸವನ್ನು​ ಮೆಚ್ಚಿಕೊಂಡಿದ್ದಾರೆ. ಕುಟುಂಬಸ್ಥರೆಲ್ಲ ಎಂಜಾಯ್ ಮಾಡಿರುವುದು ದೊಡ್ಡ ಸಕ್ಸಸ್'' ಎಂದು ಹೇಳಿದರು.

ಇದೇ ವೇಳೆ, ಸಂಗೀತ ನಿರ್ದೇಶಕ ವೀರ್ ಸಮರ್ಥ್, ''15 ವರ್ಷದ ಕೆರಿಯರ್​​​​ನಲ್ಲಿ ಹಿಟ್ ಸಿನಿಮಾ ನೋಡುತ್ತಿದ್ದೇನೆ. ಹಾಡುಗಳನ್ನು ತುಂಬಾ ಜನ ಮೆಚ್ಚಿಕೊಂಡಿದ್ದಾರೆ‌. ಚಿತ್ರ ಮಾಡುವಾಗ ಇಷ್ಟು ದೊಡ್ಡಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನಗೆ ಎಲ್ಲೆಡೆಯಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ'' ಎಂದು ಭಾವುಕರಾದರು.

Ondu Sarala Prema Kathe
ಒಂದು ಸರಳ ಪ್ರೇಮಕಥೆ

ಸುನಿ ಅವರ ನಿರೂಪಣಾ ಶೈಲಿ, ಕಾಮಿಡಿ ಟೈಮ್, ಎಮೋಷನ್, ನಾಯಕ ವಿನಯ್, ನಾಯಕಿಯರಾದ ಸ್ವಾತಿಷ್ಠಾ ಹಾಗೂ ಮಲ್ಲಿಕಾ ಅಮೋಘ ಅಭಿನಯ, ವೀರ್ ಸಮರ್ಥ್ ಅವರ ಟ್ಯೂನ್ ​ಅನ್ನು ಸಿನಿರಸಿಕರು ಸಖತ್ ಇಷ್ಟಪಟ್ಟಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದ ತಾರಾಬಳಗ ಚಿತ್ರದಲ್ಲಿದೆ. ಆದಿ ಸಂಕಲನವಿದ್ದು, ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ಹಾಗೂ ಕಾರ್ತಿಕ್ ಅವರ ಕ್ಯಾಮರಾ ಶ್ರಮವಿದೆ.

ಒಂದು ಸರಳ ಪ್ರೇಮಕಥೆ ಚಿತ್ರ ವಿನಯ್ ರಾಜ್ ಕುಮಾರ್​​ಗೆ ಬ್ರೇಕ್ ಕೊಟ್ಟಿದೆ. ಸಿಂಪಲ್ ಸುನಿ ಮತ್ತೊಂದು ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ತಿಳಿ ಹಾಸ್ಯ, ಒನ್ಲೈನರ್ ಡೈಲಾಗ್​ಗಳು ಪ್ರೇಕ್ಷಕರಿಗೆ ಸಖತ್ ಮಜಾ ಕೊಡುತ್ತಿವೆ. ಸುಂದರ ಪ್ರೇಮಕಥೆಗೆ ಶಕ್ತಿಯಾಗಿ ನಿಂತ ನಿರ್ಮಾಪಕ ಮೈಸೂರು ರಮೇಶ್ ಅವರನ್ನು ಪ್ರೇಕ್ಷಕರು ಕೈ ಹಿಡಿದಿದ್ದಾರೆ. ಅಲ್ಲದೆ, ವಿನಯ್ ರಾಜ್‌ಕುಮಾರ್​ಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

ಇದನ್ನೂ ಓದಿ: ಪೋಷಕರೊಂದಿಗಿನ ಮೆಹಂದಿ ಸಮಾರಂಭದ ಫೋಟೋ ಹಂಚಿಕೊಂಡ ರಾಕುಲ್ ಪ್ರೀತ್ ಸಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.